ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ: ಛತ್ರಿ ಭಾಗ್ಯ

ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷ ಬಿಜೆಪಿ ಅವಕಾಶ ಸಿಕ್ಕಾಗಲೆಲ್ಲಾ ಹರಿಹಾಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಪಕ್ಷದ ತಪ್ಪುಗಳನ್ನು ನೋಡುತ್ತಿದ್ದು, ಆ ತಪ್ಪನ್ನು ಹಿಡಿದು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದೆ. ಕೈ ನಾಯಕರ ಆಡಳಿತದ ವಿರುದ್ಧ ರಾಜ್ಯ ಬಿಜೆಪಿ ಸತತ ಕೆಲವು ದಿನಗಳಿಂದ ಟ್ವೀಟ್‌ ವಾರ್‌ ಮುಂದುವರೆಸಿದೆ.

ಗುರುವಾರ ರಾಜ್ಯ ಸರ್ಕಾರದ ವಿರುದ್ಧ ಉಡ್ತಾ ಬೆಂಗಳೂರು ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದ ಬಿಜೆಪಿ, ಈಗ ಛತ್ರಿ ಭಾಗ್ಯ ಎನ್ನುವ ಟ್ವೀಟ್‌ ಮಾಡಿ ಎಲ್ಲರ ಚಿತ್ತ ಕದ್ದಿದೆ. ಈ ಟ್ವೀಟ್‌ನಲ್ಲಿ ಬಿಜೆಪಿ ಒಂದು ಫೋಟೋ ಹಾಕಿದ್ದು, ಫೋಟೋದಲ್ಲಿ ಬಸ್‌ ಚಾಲಕ ಛತ್ರಿ ಹಿಡಿದು ಬಸ್‌ ಚಾಲನೆ ಮಾಡುತ್ತಿರುವುದು ಕಂಡು ಬಂದಿದ್ದು. ಹಿಂಭಾಗದಲ್ಲಿ ಪ್ರಯಾಣಿಕರನ್ನು ಕಾಣಬಹುದು.

BJP Criticizes Congress Government Over Chhatri Bhagya Initiative

ಉತ್ತರ ಕರ್ನಾಟಕ ಭಾಗದಲ್ಲಿ ಜನರು ಅನುಭವಿಸುತ್ತಿರುವ ಕಷ್ಟವನ್ನು ಆಗಾಗ ರಾಜ್ಯ ಸರ್ಕಾರದ ಮುಂದೆ ತರುವ ವಿಡಿಯೋಗಳನ್ನು ಕಾಣಬಹುದಾಗಿದೆ. ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಚಾಲಕ ಛತ್ರಿ ಹಿಡಿದು ಬಸ್‌ ಚಲಾವಣೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದವು. ಈ ದೃಶ್ಯ ಈ ಭಾಗದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಹಿಡಿದ ಕೈ ಗನ್ನಡಿಯಾಗಿದೆ.

ಇದನ್ನೆ ಬಿಂಬಿಸುವ ಪೋಸ್ಟರ್‌ನ್ನು ಬಿಜೆಪಿ ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲನೆಯನ್ನು ಸಿದ್ಧರಾಮಯ್ಯ ಮಾಡುತ್ತಿರುವಂತೆ ತೋರುತ್ತಿದ್ದು ಕೈಯಲ್ಲಿ ಛತ್ರಿ ಹಿಡಿದು ಚಾಲನೆ ಮಾಡುತ್ತಿದ್ದಾರೆ. ಹಿಂಭಾಗದಲ್ಲಿ ಉಪ ಮುಖ್ಯ ಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕುಳಿತಿಕೊಂಡಿರುವುದು ಕಂಡು ಬಂದಿದೆ. ಈ ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉಡ್ತಾ ಬೆಂಗಳೂರು

ಬಿಜೆಪಿ ಗುರುವಾರ ಸಹ ಇಂತಹದ್ದೇ ಒಂದು ಟ್ವೀಟ್ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ಈ ಟ್ವೀಟ್‌ನಲ್ಲಿ ಬಿಜೆಪಿ ಉಡ್ತಾ ಬೆಂಗಳೂರು ಎಂಬ ಶಿರ್ಷಿಕೆಯಡಿ ಒಂದು ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ನಲ್ಲಿ ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಕತ್ತಿ ಮಸಿದಿದೆ. ಬೆಂಗಳೂರಿನ ಹೊರ ವಲಯದಲ್ಲಿ ಇತ್ತೀಚಿಗೆ ನಡೆದ ರೇವ್ ಪಾರ್ಟಿ ಹಾಗೂ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಬಿಂಬಿಸುವ ಪೋಸ್ಟ್ ಇದಾಗಿದ್ದು, ಈ ಪೋಸ್ಟ್‌ ಸಖತ್ ವೈರಲ್ ಆಗಿತ್ತು. ಈಗ ಬಿಜಿಪಿ ಇಂತಹದ್ದೇ ಮತ್ತೊಂದು ಪೋಸ್ಟ್ ಮಾಡಿ ಭಾರೀ ಸುದ್ದಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+