ಕನ್ನಡೇತರ ಮತದಾರರನ್ನು ಓಲೈಸಲು ಬಿಜೆಪಿ ತಂತ್ರ: ಇತರ ರಾಜ್ಯಗಳ ಯುವ ನಾಯಕರಿಂದ ಪ್ರಚಾರ!

ಬೆಂಗಳೂರು, ಮೇ. 05: ರಾಜ್ಯದಲ್ಲಿನ ಕನ್ನಡೇತರ ಮತದಾರರನ್ನು ಓಲೈಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ವು ಯುವ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ವಲಸಿಗರೊಂದಿಗೆ ಸಂಪರ್ಕಿಸಲು ಹೊಸ ತಂತ್ರ ಹೆಣೆಯುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 50 ಯುವ ನಾಯಕರನ್ನು ನೇಮಿಸಲಾಗಿದ್ದು, ಅಭ್ಯರ್ಥಿಗಳೊಂದಿಗೆ ಪಕ್ಷದ ಪರ ಪ್ರಚಾರ ನಡೆಸುವಂತೆ ತಿಳಿಸಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಈ ಯುವ ನಾಯಕರು ಪಾಟಿದಾರ್ ಚಳವಳಿಯ ನೇತೃತ್ವ ವಹಿಸಿದ್ದ ಗುಜರಾತ್ ಶಾಸಕ ಹಾರ್ದಿಕ್ ಪಟೇಲ್, ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ, ಮಹಾರಾಷ್ಟ್ರ ಶಾಸಕ ವಿನೋದ್ ತಾವ್ಡೆ, ಸೂರತ್ ಶಾಸಕ ಪ್ರವೀಣ್ ಘೋಘಾರಿ ಮತ್ತು ಜಾರ್ಖಂಡ್‌ನ ಮನೀಶ್ ಜೈಸ್ವಾಲ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದ ಹಲವು ಯುವ ನಾಯಕರನ್ನು ಕರೆತರಲಾಗುತ್ತದೆ.

BJP brings young leaders from other states to woo migrant voters in state

ಹಿಂದಿ ಮಾತನಾಡುವ ಕೆಲವು ಪ್ರಮುಖ ಕ್ಷೇತ್ರಗಳಾದ ಬಿಟಿಎಂ ಲೇಔಟ್, ಮಹದೇವಪುರ, ಸಿವಿ ರಾಮನ್ ನಗರ, ಬ್ಯಾಟರಾಯನಪುರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈ ಯುವ ನಾಯಕರು ಬೆಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.

ಗುಜರಾತ್ ವಿಧಾನಸಭೆಯ ಸದಸ್ಯ ಹಾರ್ದಿಕ್ ಪಟೇಲ್ ಕಳೆದ 7 ದಿನಗಳಿಂದ ಬೆಂಗಳೂರಿನಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ನಾಯಕತ್ವವು ಅವರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಟಿಎಂ ಕ್ಷೇತ್ರವನ್ನು ನಿಯೋಜಿಸಿದೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಿಟಿಎಂ ಕ್ಷೇತ್ರದಲ್ಲಿ 25% ಕ್ಕಿಂತ ಹೆಚ್ಚು ಹಿಂದಿ ಮಾತನಾಡುವ ಮತದಾರರಿದ್ದಾರೆ. ಅವರೆಲ್ಲ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ. ನಾವು ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ ಮತ್ತು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವಂತೆ ಕೇಳುತ್ತಿದ್ದೇವೆ ಎಂದಿದ್ದಾರೆ.

BJP brings young leaders from other states to woo migrant voters in state

"ಬಿಟಿಎಂ ನಿವಾಸಿಗಳು ಗುಜರಾತ್‌ನಂತಹ ಅಭಿವೃದ್ಧಿಯನ್ನು ಬಯಸುತ್ತಾರೆ. ಪಕ್ಷವು ಕೇವಲ ಡಬಲ್ ಇಂಜಿನ್ ಸರ್ಕಾರವನ್ನು ನೋಡುತ್ತಿಲ್ಲ ಆದರೆ ಟ್ರಿಪಲ್ ಎಂಜಿನ್ ಅನ್ನು ನೋಡುತ್ತಿದೆ. ಬಿಜೆಪಿಯು ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರ್ಕಾರ ಎಂಬ ಮೂರು ಹಂತಗಳಲ್ಲಿದೆ" ಎಂದು ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರಿಗೆ ಮಲ್ಲೇಶ್ವರಂ ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ. ತಮ್ಮ ಎರಡು ದಿನಗಳ ಭೇಟಿಯಲ್ಲಿ, "ನಾವು ಸಣ್ಣ ಗುಂಪುಗಳನ್ನು ರಚಿಸಿದ್ದೇವೆ. ಮತದಾರರೊಂದಿಗೆ, ವಿಶೇಷವಾಗಿ ಮೊದಲ ಬಾರಿಗೆ ಸಂವಹನ ನಡೆಸಿದ್ದೇವೆ. ಅನೇಕ ಉತ್ತರ ಭಾರತದ ನಿವಾಸಿಗಳು ಮತ್ತು ಉದ್ಯಮಿಗಳೊಂದಿಗೆ ಮಾತನಾಡಿದ್ದು, ಅವರೆಲ್ಲರೂ ಬಿಜೆಪಿಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ.

ಹಿಂದಿ ಮಾತನಾಡುವ ಮತದಾರರ ಮನವೊಲಿಸಲು ಜಾರ್ಖಂಡ್ ಶಾಸಕ ಮನೀಶ್ ಜೈಸ್ವಾಲ್ ಅವರಿಗೆ ಯಶವಂತಪುರ ಕ್ಷೇತ್ರವನ್ನು ನಿಯೋಜಿಸಲಾಗಿದೆ. ವಲಸಿಗ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯುವ ನಾಯಕರು ರಾಜ್ಯದ ತಳಮಟ್ಟದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಪ್ರಚಾರ ನಡೆಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಮತ್ತು ಕೇರಳದ ನಾಯಕರನ್ನೂ ನಗರದಲ್ಲಿ ಪ್ರಚಾರಕ್ಕೆ ಅಣಿಗೊಳಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮತದಾರರು ಬಿಜೆಪಿಗೆ ಮತ ಹಾಕುವಂತೆ ಪತ್ರವನ್ನೂ ಸ್ವೀಕರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+