ಅಯ್ಯೋ ರಾಮಲಿಂಗಾರೆಡ್ಡಿ ಸಾರ್ ಸುಮ್ನಿರಿ… ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ!

ಬೆಂಗಳೂರು: ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲಿ ನಾಳೆಯಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ. ಈ ಕುರಿತು ಖುದ್ದು ಸಿಎಂ ಅಧಿಕೃವಾಗಿ ಮಾಹಿತಿ ನೀಡಿದ್ದಾರೆ. ಆದರೆ ಮತ್ತೊಂದ್ಕಡೆ ಶಾಕ್ ಕೂಡ ಸಿಕ್ಕಿದೆ, ಇದೇ ವಿಚಾರ ಇಟ್ಟುಕೊಂಡು ಈಗ ಸಾರಿಗೆ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಗರಂ ಆಗಿದೆ!

ಸಿಎಂ ಸಿದ್ದರಾಮಯ್ಯ, ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ವಚನದಂತೆ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡಿ ನುಡಿದಂತೆ ನಡೆದಿದ್ದೇವೆ. ಮಹಿಳಾ ಸಬಲೀಕರಣದ ದಿಶೆಯಲ್ಲಿ ಇತಿಹಾಸ ಬರೆಯಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ "ಶಕ್ತಿ" ಯೋಜನೆಗೆ ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡುತ್ತಿದ್ದೇವೆ. ಉದ್ಯೋಗ, ಶಿಕ್ಷಣ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿ ನಿರ್ವಹಿಸುವ ಕಾರಣಕ್ಕಾಗಿ ನಿತ್ಯ ಸಂಚರಿಸುವ ನಾಡಿನ ಅಸಂಖ್ಯ ಮಹಿಳೆಯರ ಹೋರಾಟದ ಬದುಕಿಗೆ ನಮ್ಮ ಈ ಯೋಜನೆ ಬಲ ತುಂಬಲಿದೆ ಎಂಬ ವಿಶ್ವಾಸವಿದೆ. ಎಂದು ಟ್ವೀಟ್ ಮಾಡಿ ಉಚಿತ ಬಸ್ ಸೇವೆ ಆರಂಭದ ಬಗ್ಗೆ ಮಾಹಿತಿ ನೀಡಿದ್ದರು. ಆದರೂ ಉಚಿತ ಬಸ್ ಸೇವೆಯಲ್ಲಿ ಮತ್ತೊಂದು ಗೊಂದಲ ಶುರುವಾಗಿದೆ!

BJP and Congress fighting

'ಅಯ್ಯೋ ರಾಮಲಿಂಗಾರೆಡ್ಡಿ ಸಾರ್ ಸುಮ್ನಿರಿ...'

ಹೌದು, ಸಾರಿಗೆ ಸಚಿವರು ಉಚಿತ ಬಸ್ ಸೇವೆ ಕುರಿತು ಮಾಹಿತಿ ನೀಡಿದ್ದರು. ಇದಕ್ಕೆ ಬಿಜೆಪಿಯ ರಿಯಾಕ್ಷನ್ ಕೆಂಡವಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಗರಂ ಆಗಿದೆ, ಅಲ್ಲದೆ ಉಚಿತ ಬಸ್ ಸೇವೆಯಲ್ಲಿ ಎದ್ದಿರುವ ಮತ್ತೊಂದು ಗೊಂದಲದ ಬಗ್ಗೆ ಆಕ್ರೋಶ ಹೊರಹಾಕಿದೆ. 'ಅಯ್ಯೋ @RLR_BTM ಸಾರ್, ಸುಮ್ನಿರಿ... ಉಚಿತ, ಖಚಿತ ನಿಶ್ಚಿತ ಅಂತ 'ಸ್ಟಿಕ್ಕರ್' ಹಾಕಿಕೊಂಡು ಓಡಾಡಬೇಕಷ್ಟೇ ಅಂತ ಜನ ಮಾತನಾಡುತಿದ್ದಾರೆ. ಅಂದಹಾಗೆ, ನಾಳೆ ಈ "ಉಚಿತ ಪ್ರಯಾಣ"ದ ಉದ್ಘಾಟನೆಗಾದರೂ, 'ಸ್ಟಿಕ್ಕರ್' ಅಂಟಿಸಿರುವ ಫ್ರೀ ಬಸ್ ಬರಲಿದೆಯೇ???' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸಾರಿಗೆ ಸಚಿವರು ಹೇಳಿದ್ದೇನು?

'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ ಯೋಜನೆ' ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಕರ್ನಾಟಕದಾದ್ಯಂತ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ. ದಿನಾಂಕ: 11.06.2023 (ಭಾನುವಾರ) ಸ್ಥಳ: ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ (ಗ್ರಾಂಡ್ ಸ್ಟೆಪ್ಸ್), ಬೆಂಗಳೂರು ಸಮಯ: ಬೆಳಗ್ಗೆ 10:30 ಗಂಟೆಗೆ' ಎಂದು ಸಾರಿಗೆ ಸಚಿವರು ನಾಳಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಈ ಟ್ವೀಟ್‌ಗೆ ರೀಪ್ಲೇ ನೀಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಹೀಗೆ ಗ್ಯಾರಂಟಿ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ವಾರ್ ಮುಂದುವರಿದಿದೆ.

ಫ್ರೀ ಬಸ್.. ಸ್ಟಿಕ್ಕರ್ ವಾರ್‌ಗೆ ಶುರು!

ಹಾಗೇ ಇನ್ನೊಂದು ಟ್ವೀಟ್ ಮೂಲಕವೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶವನ್ನ ಹೊರಹಾಕಿದೆ. '#ConditionsApplyGovt ನ ಹೊಸ ಕಂಡೀಷನ್! ಉಚಿತ ಪ್ರಯಾಣದ ಬಸ್‌ಗಳಿಗೆ ಸ್ಟಿಕ್ಕರ್ ಅಂಟಿಸುತ್ತಾರಂತೆ. ಸ್ವಾಮಿ @siddaramaiahನವರೇ, ಬಸ್ ಹತ್ತುವ ಮಹಿಳೆಯರು, ಬಸ್ ನಂಬರ್ ನೋಡಬೇಕೋ, ನೀವು ಮೆತ್ತಿರುವ ಸ್ಟಿಕ್ಕರ್ ಗಮನಿಸಬೇಕೋ... ಲಕ್ಸುರಿ ಅಲ್ಲದ ಎಲ್ಲಾ ಸಾಮಾನ್ಯ ಬಸ್‌ಗಳಲ್ಲಿ ಫ್ರೀ, ಫ್ರೀ, ಫ್ರೀ ಎಂದಿದ್ದು ನೀವೇ ಅಲ್ಲವೇ... ಹಾಗಾದ್ರೆ ಈಗ ಈ ಸ್ಟಿಕ್ಕರ್ ಯಾಕೆ? ಸಾಮಾನ್ಯ ಬಸ್‌ಗಳಲ್ಲಿಯೂ ಕೆಲವೇ ಕೆಲವಕ್ಕೆ ಸ್ಟಿಕ್ಕರ್ ಅಂಟಿಸಿ ನಾಡಿನ ಹೆಣ್ಣು ಮಕ್ಕಳ ಕಿವಿಗೆ ಚೆಂಡು ಹೂವು ಮುಡಿಸುವ 'ಗ್ಯಾರಂಟಿ ಪ್ರೋಗ್ರಾಂ' ಇದು! ಇದು ನಿಮಗೆ 'ಉಚಿತ'ವಲ್ಲ.' ಎಂದಿದೆ ಬಿಜೆಪಿ.

ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಫ್ರೀ ಬಸ್ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಅತ್ತ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದ್ದರೆ, ಈ ಕಡೆ ಕೈ ಪಡೆ ಕೂಡ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದೆ. ಹೀಗೆ ಇಬ್ಬರ ನಡುವೆ ಟ್ವೀಟ್ ಯುದ್ಧ ಜೋರಾಗಿದ್ದು, ಯಾವಾಗ ಇದೆಲ್ಲಾ ಕೊನೆಯಾಗುತ್ತೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+