ಗ್ಯಾರಂಟಿ ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ಕಾಂಗ್ರೆಸ್: ಬಿಜೆಪಿ
ಬೆಂಗಳೂರು: ಬಿಜೆಪಿ ಒಳಜಗಳ ವಿರುದ್ಧ ಕಾಂಗ್ರೆಸ್ ತಿರುಗೇಟು ನೀಡುವಾಗಲೇ, ಇತ್ತ BJP ಕೂಡ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ವಾಗ್ಬಾಣ ಮುಂದುವರಿಸಿದೆ. ಇಷ್ಟುದಿನ ಉಚಿತ ವಿದ್ಯುತ್ ವಿಚಾರದಲ್ಲಿ ನಡೆಯುತ್ತಿದ್ದ ಕಿರಿಕ್, ಈಗ ಅಕ್ಕಿ ತನಕ ಬಂದು ನಿಂತಿದೆ. ಅಲ್ಲದೆ 'ಗ್ಯಾರಂಟಿ ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ಕಾಂಗ್ರೆಸ್' ಎನ್ನುತ್ತಿದೆ ಬಿಜೆಪಿ.
ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ಹಾಗೆ, ಕಾಂಗ್ರೆಸ್ ಗ್ಯಾರಂಟಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಇನ್ನೂ ನಿಂತಿಲ್ಲ. ಅದರಲ್ಲೂ ಬಿಜೆಪಿ ಒಳಜಗಳದ ಬಗ್ಗೆ ಟ್ವೀಟ್ ಮಾಡಿ, ಕೆಣಕುತ್ತಿದ್ದ ಕಾಂಗ್ರೆಸ್‌ಗೆ ಇದೀಗ ಬಿಜೆಪಿ ಕೂಡ ತಿರುಗೇಟು ನೀಡಿದೆ. ಕೈ ನಾಯಕರು ನೀಡಿದ್ದ 5 ಗ್ಯಾರಂಟಿಗಳನ್ನೇ ಅಸ್ತ್ರ ಮಾಡಿಕೊಂಡಿದೆ ಬಿಜೆಪಿ. ಬಿಬಿಎಂಪಿ & ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡೂ ಪಕ್ಷಗಳ ನಡುವೆ ಕಿರಿಕ್ ಮತ್ತಷ್ಟು ಜೋರಾಗುತ್ತಿದೆ. ಹಾಗಾದ್ರೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಹೇಳಿದ್ದೇನು? ಮುಂದೆ ಓದಿ.

'ಗ್ಯಾರಂಟಿ' ಹುನ್ನಾರ ಎಂದ ಬಿಜೆಪಿ!
ಹೌದು, ನೂತನ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. 'ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ! ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ.🥲 ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ 'ಕೈ' ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ 'ಗ್ಯಾರಂಟಿ' ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ. 🤨' ಎಂದಿದೆ ಬಿಜೆಪಿ.
ಮಾನ್ಯ @siddaramaiah ರವರೇ,
— BJP Karnataka (@BJP4Karnataka) June 14, 2023
ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ!
ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ.
ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ…
ಕಾಂಗ್ರೆಸ್ ವಿರುದ್ಧ ಮುಗಿದ್ದ ಬಿಜೆಪಿ ಲೀಡರ್ಸ್!
ಇಷ್ಟು ಮಾತ್ರವಲ್ಲ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಹಲವು ವಿಚಾರದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಲ್ಲೂ ಅಕ್ಕಿ ವಿಚಾರದ ಬಗ್ಗೆ ರಾಜ್ಯ ಸರ್ಕಾರ, ಕೇಂದ್ರದ ಬಗ್ಗೆ ದೂರು ಹೇಳಿದ ಬಳಿಕ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ನೀವು ಅಕ್ಕಿ ಗ್ಯಾರಂಟಿಯ ಬಗ್ಗೆ ಹೇಳುವಾಗ ಕೇಂದ್ರವನ್ನ ಕೇಳಿದ್ರಾ? ಕೇಂದ್ರ ಅಕ್ಕಿ ಕೊಡುತ್ತೆ ಅಂತಾ ತಿಳಿಸಿತ್ತಾ? ಅಂತಾ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ, ನಾವು ದುಡ್ಡು ಕೊಟ್ಟು ಅಕ್ಕಿ ಪಡೆಯಲು ಹೋಗಿದ್ದೇವೆ, ಆದರೆ ಪಿಎಂ ಮೋದಿ ಸರ್ಕಾರ ಅಕ್ಕಿ ಕೊಡದೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಈ ಮಧ್ಯೆ ಟ್ವೀಟ್ ವಾರ್ ಕೂಡ ಜೋರಾಗಿದೆ.
ವಾಸ್ತವವನ್ನು ಅರಿತುಕೊಳ್ಳದೆ ಅವಾಸ್ತವಿಕವಾಗಿ ಗ್ಯಾರಂಟಿಗಳನ್ನು ಘೋಷಿಸಿ, ಅನುಷ್ಠಾನಕ್ಕೆ ತರಲು ಹೆಣಗಾಡುತ್ತಿರುವ @INCKarnataka ಜನರ ಬದುಕನ್ನು ಹೈರಾಣಾಗಿಸಿದೆ.
— BJP Karnataka (@BJP4Karnataka) June 14, 2023
ಎರಡು ಕೈಯಲ್ಲಿ ಕಿತ್ತುಕೊಂಡು ಒಂದು ಕೈಯಲ್ಲಿ ಕೊಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವ #ATMSarkara ದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.
*️⃣ ದುಪ್ಪಟ್ಟು ವಿದ್ಯುತ್… pic.twitter.com/GI34qAUjtP
ಅವಾಸ್ತವಿಕ ಗ್ಯಾರಂಟಿ ಘೋಷಣೆ ಎಂದ ಬಿಜೆಪಿ
ಮಧ್ಯಾಹ್ನ ಕೂಡ ಇದೇ ರೀತಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು BJP, 'ವಾಸ್ತವವನ್ನು ಅರಿತುಕೊಳ್ಳದೆ ಅವಾಸ್ತವಿಕವಾಗಿ ಗ್ಯಾರಂಟಿ ಘೋಷಿಸಿ, ಅನುಷ್ಠಾನಕ್ಕೆ ತರಲು ಹೆಣಗಾಡುತ್ತಿರುವ @INCKarnataka ಜನರ ಬದುಕನ್ನು ಹೈರಾಣಾಗಿಸಿದೆ. ಎರಡು ಕೈಯಲ್ಲಿ ಕಿತ್ತುಕೊಂಡು ಒಂದು ಕೈಯಲ್ಲಿ ಕೊಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವ #ATMSarkara ದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.' ಎಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತಿರುಗೇಟು ನೀಡಿದೆ.
ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ @BJP4Karnataka?
— Karnataka Congress (@INCKarnataka) June 14, 2023
ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ, ಯಾರ ಕಾಲು ಕಡಿಯುವಿರಿ?
ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ?
ಅಂದಹಾಗೆ ನಿಮ್ಮ "ಚಾಣಕ್ಯ" ಎಲ್ಲಿ, ಪತ್ತೆಯೇ ಇಲ್ಲವಲ್ಲ?
ಕಾಂಗ್ರೆಸ್ ಹೇಳಿದ್ದು ಏನು ಗೊತ್ತಾ?
ಬೆಳಗ್ಗೆ ಇದೇ ವಿಚಾರಕ್ಕೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಈಗ ಮತ್ತೆ ಅದೇ ವಿಚಾರದ ಬಗ್ಗೆ ಇನ್ನೊಂದು ಟ್ವೀಟ್ ಮಾಡಿದೆ. 'ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ @BJP4Karnataka? ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ, ಯಾರ ಕಾಲು ಕಡಿಯುವಿರಿ? ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ? ಅಂದಹಾಗೆ ನಿಮ್ಮ "ಚಾಣಕ್ಯ" ಎಲ್ಲಿ, ಪತ್ತೆಯೇ ಇಲ್ಲವಲ್ಲ?' ಎನ್ನುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ತಣಿಸಲು ಬಿಜೆಪಿಯ ದೆಹಲಿ ವರಿಷ್ಠರು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದೆ ಕಾಂಗ್ರೆಸ್.












Click it and Unblock the Notifications