ಎರಡು ನಾಲಗೆಯ ಇಬ್ಬಂದಿ ಪಕ್ಷ ಕಾಂಗ್ರೆಸ್: ಬಿಜೆಪಿ ಆರೋಪ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುತ್ತಿದ್ದಂತೆ ಬಿಜೆಪಿ ಆರೋಪಗಳ ಸರಮಾಲೆ ಶುರುಮಾಡಿದೆ. ಈ ಮೊದಲು ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಜಾರಿಗೆ ತರಲ್ಲ ಅಂದಿತ್ತು ಬಿಜೆಪಿ. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಯೋಜನೆ ಜಾರಿಗೆ ತಂದ ನಂತರ ಬೇರೆಯದ್ದೇ ಕಿರಿಕ್ ಶುರುಮಾಡಿದ್ದಾರೆ ಬಿಜೆಪಿ ಲೀಡರ್ಸ್.

ಕಾಂಗ್ರೆಸ್ & ಬಿಜೆಪಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಫೈಟ್ ಮಾಡಿ ಗಮನ ಸೆಳೆದಿದ್ದರು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಎರಡೂ ಪಕ್ಷಗಳ ಫೈಟ್ ಸಖತ್ ಮಜವಾಗಿತ್ತು. ಆದರೆ ಇದೀಗ 135 ಸ್ಥಾನ ಗಳಿಸಿ ಕಾಂಗ್ರೆಸ್ ಸರ್ಕಾರ ರಚಿಸಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಫೈಟ್ ಮುಗಿದಿಲ್ಲ. ಎರಡೂ ಪಕ್ಷಗಳ ಕೆಸರೆರಚಾಟವು ಮುಂದುವರಿದಿದೆ. ಈಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಗಂಭೀರ ಆರೋಪ ಮಾಡಿದೆ.

BJP and Congress fight on social media

'ಎರಡು ನಾಲಗೆಯ ಇಬ್ಬಂದಿ ಪಕ್ಷ ಕಾಂಗ್ರೆಸ್'

ಕಾಂಗ್ರೆಸ್‌ನ 5 ಗ್ಯಾರಂಟಿ ಪೈಕಿ ಗೃಹ ಜ್ಯೋತಿ ಕುರಿತು ಟ್ವೀಟ್ ಮಾಡಿ, ಕಾಂಗ್ರೆಸ್ ಪಕ್ಷದ ಕುರಿತು ವಾಗ್ದಾಳಿ ನಡೆಸಿದೆ ಕಮಲ ಪಾಳಯ. 'ಪ್ರತಿ ಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತ ಎಂದು, @siddaramaiah ಹಾಗೂ @DKShivakumar, ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ಹೋಗಿ ಕೂಗಿದರು. ಈಗ ಒಂದು ವರ್ಷದ ಸರಾಸರಿ ವಿದ್ಯುತ್‌ ಬಳಕೆ ಎಷ್ಟಿತ್ತೋ, ಅದರ ಮೇಲೆ 10% ಅಷ್ಟು "ಮಾತ್ರ" ಉಚಿತ ಎಂದು ಜನರಿಗೆ ಶಾಕ್‌ ನೀಡುತ್ತಿದ್ದಾರೆ. ಎರಡು ನಾಲಗೆಯ ಇಬ್ಬಂದಿ ಪಕ್ಷ @INCKarnataka!' ಎಂದು ಟ್ವೀಟ್ ಮಾಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಚಾಲೆಂಜ್ ಹಾಕಿದೆ.

'ಅಕ್ಕಿ ನಿಮ್ದು, ಚೀಲ ನಮ್ದು' ಎಂದ ಬಿಜೆಪಿ!

ಹಾಗೇ ಮತ್ತೊಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಬಿಜೆಪಿ, 'ಪ್ರಮಾಣ ಮಾಡಿದ 10 ಕೆಜಿ ಅಕ್ಕಿಯಲ್ಲಿ, ಕನಿಷ್ಠ 1 ಕೆಜಿಯನ್ನೂ ರಾಜ್ಯದಿಂದ ಭರಿಸಲು ಸಿದ್ಧವಿಲ್ಲದ @INCKarnataka ಸರ್ಕಾರ, 'ನೀಡುವ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡಿ' ಎಂದು ಕೇಂದ್ರ ಸರ್ಕಾರವನ್ನು ಗೋಗರೆಯಲು ಈಗಾಗಲೇ ಶುರು ಮಾಡಿದೆ. ಕೇಂದ್ರ ಸರ್ಕಾರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನೊಂದಿಗೆ ಚೀಲದಲ್ಲಿ ಹಾಕಿ ತರಿಸುವುದರಲ್ಲಿ ಶ್ರೀಯುತ @siddaramaiah ನವರಿಗೆ ಐದು ವರ್ಷಗಳ ಅನುಭವವಿದೆ! ಇದು "ಅಕ್ಕಿ ನಿಮ್ದು, ಚೀಲ ನಮ್ದು" ಎಂಬ ಮತ್ತೊಂದು ವಂಚನೆಯಷ್ಟೇ, ರಾಜ್ಯದ ಜನತೆಯ ಹಿತ ಕಾಯುವ ಉದ್ದೇಶದ ಲವಲೇಶವೂ ಇಲ್ಲ.' ಎಂದಿದೆ ಬಿಜೆಪಿ.

ಬಿಜೆಪಿಗೆ ತಿರುಗೇಟು ನೀಡಿದ್ದ ಕಾಂಗ್ರೆಸ್!

ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, 5 ಗ್ಯಾರಂಟಿ ಜಾರಿಗೆ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿ, '@nalinkateel ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ @BSBommai ಅವರೇ, ನಿಮ್ಮ ಮನೆಗೂ ಫ್ರೀ! @ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!, @CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!, ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ.' ಎಂದಿದೆ.

ಗ್ಯಾರಂಟಿ ಬಂದರೂ ₹15 ಲಕ್ಷ ಬರಲಿಲ್ಲ!

ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ತಾವು ಹೇಳಿದಂತೆ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿ ಮೋದಿ ಅವರು ಹೇಳಿದ್ದ ₹15 ಲಕ್ಷ ರೂಪಾಯಿ ಮಾತ್ರ ಇನ್ನೂ ಅಕೌಂಟ್‌ಗೆ ಬಂದಿಲ್ಲ ಏಕೆ? ಅನ್ನೋ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳ್ತಿದ್ದಾರೆ. ಹಾಗೇ ಚಿನ್ನದ ರಸ್ತೆ ಬಗ್ಗೆಯೂ ಚರ್ಚೆ ಶುರುವಾಗಿದ್ದು, ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.

ಒಟ್ನಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಅನ್ನೋ ಹಾಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕಿತ್ತಾಟ ಬಲು ಜೋರಾಗಿದೆ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಮಧ್ಯೆ ಕಚ್ಚಾಟ ಗ್ಯಾರಂಟಿ ಘೋಷಣೆಗಿಂತ ಜೋರಾಗಿದೆ. ಬಿಜೆಪಿ ಲೀಡರ್ಸ್ ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಕಾಲು ಎಳೆಯಲು ನೋಡುತ್ತಿದ್ದರೆ, ಕಾಂಗ್ರೆಸ್ ಬಿಜೆಪಿ ನಾಯಕರಿಗೆ 15 ಲಕ್ಷ ರೂಪಾಯಿಯ ಸವಾಲು ಹಾಕುತ್ತಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+