‘ಹಿಂದೂಗಳಿಗೆ ಬದುಕಲು ಭಯದ ವಾತಾವರಣ ನಿರ್ಮಿಸಿದ್ದೇ ಕಾಂಗ್ರೆಸ್..’

ಶಿವಮೊಗ್ಗ ಘಟನೆ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ತಿಕ್ಕಾಟ ಇನ್ನು ನಿಂತಿಲ್ಲ. ಬಿಜೆಪಿ ಇದೇ ವಿಚಾರ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪ ಮಾಡುತ್ತಿದೆ. ಇದೀಗ ಮತ್ತೊಂದು ಆರೋಪ ಮಾಡಿರುವ ಕಮಲ ಪಾಳಯ, ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಕೆಣಕಿದೆ. ಹಾಗಾದರೆ ಬಿಜೆಪಿ ಹೇಳಿದ್ದೇನು? ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ ಪಾಳಯದ ಆರೋಪ ಏನು?

ಶಿವಮೊಗ್ಗ ಘಟನೆ ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೇ ವಿಚಾರ ಹಿಡಿದುಕೊಂಡು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಈಗ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಪರಿಸ್ಥಿತಿ ಹೀಗಿದ್ದಾಗ ರಾಜ್ಯದ BJP ನಾಯಕರು ಸುಮ್ಮನೆ ಇರಲು ಆಗುತ್ತಾ? ಇಲ್ಲ ಆಗೋದಿಲ್ಲ.

no-security-for-hindu-community

ಈ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ಕರ್ನಾಟಕ ಬಿಜೆಪಿ ದಿನಕ್ಕೊಂದು ಗಂಭೀರ ಆರೋಪ ಮಾಡ್ತಿದೆ. ಈಗ ಮತ್ತೊಂದು ಆರೋಪ ಕೇಳಿಬಂದಿದ್ದು, ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

'ಹಿಂದೂಗಳಿಗೆ ಬದುಕಲು ಭಯದ ವಾತಾವರಣ..'

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿರುವ ಬಿಜೆಪಿ, 'ರಾಜ್ಯದ ಹಿಂದೂಗಳಿಗೆ ಬದುಕಲು ಭಯದ ವಾತಾವರಣವನ್ನು ನಿರ್ಮಿಸಿದ್ದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಾಲ್ಕು ತಿಂಗಳ ಮಹಾನ್ ಸಾಧನೆ.

"ಕೈ" ಸರ್ಕಾರದ ಅತಿಯಾದ ತುಷ್ಟೀಕರಣದ ರಾಜಕಾರಣದ ಪರಿಣಾಮ, ಜಿಹಾದಿಗಳ ಅಟ್ಟಹಾಸ ಎಲ್ಲೆ ಮೀರಿದ್ದು, ಹಿಂದೂಗಳ ನೆಮ್ಮದಿಗೆ ಭಂಗ ತರುವುದೇ ಜಿಹಾದಿಗಳ ಪ್ರಮುಖ ಅಜೆಂಡಾ.

ಕೇವಲ ವೋಟಿಗಾಗಿ ಭಯೋತ್ಪಾದಕರನ್ನು, ಗಲಭೆಕೋರರನ್ನು ಸಮರ್ಥಿಸುವ ಕಾಂಗ್ರೆಸ್‌ನ ಓಲೈಕೆ ರಾಜಕಾರಣ ಹೀಗೆಯೇ ಮುಂದುವರೆದರೆ, ರಾಜ್ಯದ ಹಿಂದೂಗಳ ಬದುಕು ಮತ್ತಷ್ಟು ದುಸ್ತರವಾಗುವುದು ಖಂಡಿತ.' ಎಂದು ಹೇಳಿದೆ.

ಹಾಗೇ ಮತ್ತೊಂದು ಟ್ವೀಟ್‌ನಲ್ಲಿ, 'ಗೃಹ ಮಂತ್ರಿ ಡಾ.ಜಿ. ಪರಮೇಶ್ವರ ಅವರು ವಿದೇಶದಲ್ಲಿ ಜಾಲಿ ರೌಂಡ್ಸ್.‌ ಆದರೆ, ಇವರ ತವರು ಜಿಲ್ಲೆ ತುಮಕೂರಿನಲ್ಲಿ ಹಿಂದೂಗಳಿಗೆ ಮಾತ್ರ ನರಕ. ರಾಜ್ಯದ ಪೊಲೀಸರಿಗೆ ಗೃಹ ಮಂತ್ರಿಗಳ ಹುಕ್ಕುಂ ಹೇಗಿದೆ ಎಂದರೆ, ಈದ್‌ ಮಿಲಾದ್‌ ಮೆರವಣಿಗೆಗೆ ರಾಜ ಮಾರ್ಗ, ಗಣೇಶೋತ್ಸವದ ಮೆರವಣಿಗೆಗೆ ಲಾಠಿ ಮಾರ್ಗ.

ಮಾನ್ಯ ಪರಮೇಶ್ವರ್‌ ಅವರೇ, ಹಿಂದೂಗಳನ್ನೇಕೆ ದ್ವಿತೀಯ ದರ್ಜೆಯವರಂತೆ ನೋಡುತ್ತಿದ್ದೀರಿ? ಕರ್ನಾಟಕದಲ್ಲಿ ಕಾಂಗ್ರೆಸ್‌ ಇರುವವರೆಗೂ ಹಿಂದೂಗಳು ಇರಲೇಬಾರದೇ?' ಎಂದು ಆರೋಪ ಮಾಡಿದೆ ಕರ್ನಾಟಕ ಬಿಜೆಪಿ.

ಒಟ್ನಲ್ಲಿ ಹೀಗೆ ಬಿಜೆಪಿ & ಕಾಂಗ್ರೆಸ್ ನಡುವೆ ಶಿವಮೊಗ್ಗ ಘಟನೆ ವಿಚಾರಕ್ಕೆ ನಡೆಯುತ್ತಿರುವ ಕಿತ್ತಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ಕೂಡ ಪದೇ ಪದೆ ಸರಣಿ ಟ್ವೀಟ್‌ನ ಮಾಡುತ್ತಾ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡುತ್ತಿದೆ. ಇನ್ನು ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಯಾವ ರೀತಿ ರೀಪ್ಲೇ ಕೊಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+