‘ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ ಸತ್ತರೂ ಪರವಾಗಿಲ್ಲ..’
ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಇಂದು ಕರ್ನಾಟಕ ಬಂದ್ ನಡೆಸಲಾಗಿದೆ. ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಈ ಬಗ್ಗೆ ತೀವ್ರ ಆಕ್ರೋಶವನ್ನೂ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇಷ್ಟೆಲ್ಲದರ ಮಧ್ಯೆ ಕಾವೇರಿ ನದಿ ನೀರಿನ ವಿಚಾರಕ್ಕೆ ರಾಜ್ಯದಲ್ಲಿ ಪಾಲಿಟಿಕ್ಸ್ ಕೂಡ ಬಲು ಜೋರಾಗಿದೆ!
ಈ ಬಾರಿ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಮಳೆಯ ಕೊರತೆ ಉಂಟಾಗಿದ್ದು ಅದ್ರಲ್ಲೂ ಕಾವೇರಿ ಕೊಳ್ಳದಲ್ಲಿ ಕ್ಷಾಮ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ಹತ್ತಾರು ಟಿಎಂಸಿ ನೀರು ನೆರೆಯ ರಾಜ್ಯ ತಮಿಳುನಾಡಿಗೆ ಹರಿದಿದೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೂ ಕದನ ಏರ್ಪಟ್ಟಿದೆ. ಕನ್ನಡಿಗರು ಎರಡೂ ಪಕ್ಷಗಳ ವಿರುದ್ಧ ಈ ವಿಚಾರದಲ್ಲಿ ಬೇಸರವನ್ನ ಹೊರಹಾಕಿದ ನಂತರವೂ ರಾಜಕೀಯ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ. ಇದೀಗ ಬಿಜೆಪಿ ಮತ್ತೆ ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದೆ.

'ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ..'
ಕಾಂಗ್ರೆಸ್ ನಾಯಕರ ವಿರುದ್ಧ ಕರ್ನಾಟಕ ಬಿಜೆಪಿ ಕಾವೇರಿ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪದ ನಡುವೆ, ಎರಡೂ ಪಕ್ಷಗಳ ಮಧ್ಯೆ ಫೈಟ್ ಜೋರಾಗಿದೆ. ಈಗ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದು, 'ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ ಸತ್ತರೂ ಪರವಾಗಿಲ್ಲ, ಸ್ಟಾಲಿನ್ ಸರ್ಕಾರಕ್ಕೆ ನೀರು ಬಿಡುವುದೊಂದೆ ಸಾಧನೆ ಎಂಬಂತೆ @siddaramaiah ಅವರ ಸರ್ಕಾರ ಕೆ.ಆರ್.ಎಸ್., ಕಬಿನಿ ಡ್ಯಾಂ ಖಾಲಿ ಆದ ಮೇಲೆ ಇದೀಗ ರಾಮನಗರ ಜಿಲ್ಲೆಯ ಸಣ್ಣ ಪುಟ್ಟ ಜಲಾಶಯಗಳ ಮೇಲಿ ಕಣ್ಣಿಟ್ಟು ನಾವು ಕಾಂಗ್ರೆಸ್ಸಿಗರು ಸ್ಟಾಲಿನ್ ಗುಲಾಮರು ನೀರು ಹರಿಸುವುದು ಶತಸಿದ್ಧ ಎನ್ನುವ ಭಂಡತನಕ್ಕೆ ಬಿದ್ದಿದ್ದಾರೆ.' ಎಂದು ಆರೋಪ ಮಾಡಿದೆ.
ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ ಸತ್ತರೂ ಪರವಾಗಿಲ್ಲ, ಸ್ಟಾಲಿನ್ ಸರ್ಕಾರಕ್ಕೆ ನೀರು ಬಿಡುವುದೊಂದೆ ಸಾಧನೆ ಎಂಬಂತೆ @siddaramaiah ಅವರ ಸರ್ಕಾರ ಕೆ.ಆರ್.ಎಸ್., ಕಬಿನಿ ಡ್ಯಾಂ ಖಾಲಿ ಆದ ಮೇಲೆ ಇದೀಗ ರಾಮನಗರ ಜಿಲ್ಲೆಯ ಸಣ್ಣ ಪುಟ್ಟ ಜಲಾಶಯಗಳ ಮೇಲಿ ಕಣ್ಣಿಟ್ಟು ನಾವು ಕಾಂಗ್ರೆಸ್ಸಿಗರು ಸ್ಟಾಲಿನ್ ಗುಲಾಮರು ನೀರು ಹರಿಸುವುದು ಶತಸಿದ್ಧ… https://t.co/hZ141PeEYK
— BJP Karnataka (@BJP4Karnataka) September 29, 2023
ಹಾಗೇ ತನ್ನ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿರುವ ಬಿಜೆಪಿ, 'ಕನ್ನಡಿಗರಿಗೆ, ಕರ್ನಾಟಕಕ್ಕೆ ಮಹಾ ದ್ರೋಹ ಬಗೆದು ಸ್ಟಾಲಿನ್ ಗುಲಾಮರಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರದಲ್ಲಿರಲು ಅಸಮರ್ಥರು, ತಕ್ಷಣವೇ ರಾಜೀನಾಮೆ ಕೊಡಬೇಕು. ಅಧಿಕಾರದ ದಾಹವಿದ್ದರೆ, ತಮಿಳುನಾಡಿಗೆ ಹೋಗಿ ಸ್ಟಾಲಿನ್ ಸಂಪುಟ ಸೇರಿಕೊಳ್ಳಬಹುದು..!' ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದೆ.
'ಸ್ಟಾಲಿನ್‌ರವರಿಗೆ ಒಂದು ಕರೆ ಮಾಡುವ ಯೋಗ್ಯತೆಯೂ...'
ಹಾಗೇ ಬೆಳಗ್ಗೆ ಕೂಡ ಕಾಂಗ್ರೆಸ್ ವಿರುದ್ಧ ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ವಾಗ್ದಾಳಿ ನಡೆಸಿತ್ತು. ಅದರಲ್ಲೂ ಇಂಡಿಯಾ ಮೈತ್ರಿಕೂಟದ ವಿಚಾರ ಪ್ರಸ್ತಾಪ ಮಾಡಿ ಕಾಂಗ್ರೆಸ್‌ನ ರಾಜ್ಯ ನಾಯಕರಿಗೆ ತಿರುಗೇಟು ನೀಡಿತ್ತು ರಾಜ್ಯ ಬಿಜೆಪಿ, 'ನಮ್ಮ ಬೆಂಗಳೂರಿನಲ್ಲಿ ನಡೆದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಸ್ಟಾಲಿನ್‌ರವರನ್ನು ಸ್ವಾಗತಿಸಲು, ಮಾವನ ಆತಿಥ್ಯ ಮಾಡುವ ಅಳಿಯನಂತೆ, ತಮ್ಮ ಇಡೀ ಸಚಿವ ಸಂಪುಟವನ್ನು ಮಾತ್ರವಲ್ಲದೆ ರಾಜ್ಯದ ಉನ್ನತ ಐಎಎಸ್ ಅಧಿಕಾರಿಗಳನ್ನೂ ಕಾನೂನುಬಾಹಿರವಾಗಿ ಕಳುಹಿಸಿಕೊಟ್ಟಿದ್ದ @siddaramaiah ರವರು ಈಗ ಎಲ್ಲಿ ಅಡಗಿ ಕೂತಿದ್ದಾರೆ? @DKShivakumar ಯಾವ ಬಿಲದಲ್ಲಿದ್ದಾರೆ?' ಎಂದು ಪ್ರಶ್ನೆ ಮಾಡಿತ್ತು.












Click it and Unblock the Notifications