'ರಾಜ್ಯದಲ್ಲಿ ಬೆದರಿಕೆ, ಕೊಲೆಗೆ ಸುಪಾರಿ ನೀಡುವ ಕಾಂಗ್ರೆಸ್: BJP'
ಬೆಂಗಳೂರು, ಜೂನ್ 07: ಕರ್ನಾಟಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದರು. ಶುಕ್ರವಾರ ಸುಪ್ರೀಂ ಕೋರ್ಟ್ ಆ ಜಾಮೀನು ರದ್ದು ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಆರೋಪಿ ಮತ್ತು ಅಪರಾಧಿಗಳಿಂದ ಕೂಡಿರುವ ಒಂದು ಪಕ್ಷವಾಗಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ವಿನಯ್ ಕುಲಕರ್ಣಿ ಜಾಮೀನು ರದ್ದಾದ ಬಳಿಕ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿಯು, ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇದರಿಂದಾಗಿ ಮತ್ತೆ ಜೈಲಿನತ್ತ ವಿನಯ್ ಕುಲಕರ್ಣಿ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡನನ್ನು ಕೊಲೆ ಮಾಡಿಸಿದ್ದೇ ಕರ್ನಾಟಕ ರಾಜ್ಯ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಎಂದು ಆತನ ಆಪ್ತನೇ ಆದ ಬಸವರಾಜ ಮುತ್ತಗಿ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಸಿಬಿಐ ಮನವಿ ಪುರಸ್ಕರಿಸುವ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದೆ. ಇದೆಲ್ಲ ನೋಡಿದರೆ ಕರ್ನಾಟಕದಲ್ಲಿ ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡುವ ಮುಖ್ಯ ಕಚೇರಿ ರಾಜ್ಯ ಕಾಂಗ್ರೆಸ್ಸೇ ಆಗಿದೆ ಎಂದು ಬಿಜೆಪಿ ದೂರಿದೆ.
ಇನ್ನೊಂದು ವಾರದಲ್ಲಿ ಮತ್ತೆ ಜೈಲಿನತ್ತ ಶಾಸಕ
ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶಿಸುತ್ತಿದ್ದಂತೆ ಕೊಲೆ ಆರೋಪಿ ಶಾಸಕ ವಿನಯ್ ಕುಲಕರ್ಣಿ ಅವರು ಒಂದು ವಾರದಲ್ಲಿ ಜೈಲಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಇಲ್ಲವೇ ಸಿಬಿಐ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆ ಇದೆ. ಈ ಹಿಂದೆ ಜಾಮೀನು ಪಡೆದುಕೊಂಡಿದ್ದ ಶಾಸಕರಿಗೆ ಕೋರ್ಟ್ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ನಡುವೆ ಬಂದ ಕರ್ನಾಟಕ ವಿಧಾನಸಭಾ ಚುನವಣೆಯಲ್ಲಿ ಕ್ಷೇತ್ರದಿಂದ ಹೊರಗಿದ್ದುಕೊಂಡು ಚುನಾಯಿಸಿ ಗೆದ್ದು ಬಂದರು. ಇನ್ನೇನು ಕೊಂಚ ನೆಮ್ಮದಿ ಸಿಕ್ಕಿತು ಎನ್ನುಷ್ಟರಲ್ಲಿ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ವಿಚಾರಣೆ ಮುಂದುವರಿಯಲಿದೆ.












Click it and Unblock the Notifications