Airports: ಹುಬ್ಬಳ್ಳಿ-ಬೆಳಗಾವಿ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಪಟ್ಟಿಗೆ.. ಇಲ್ಲಿದೆ ಬಿಗ್‌ ಅಪ್ಡೇಟ್‌

Airports: ರಾಜ್ಯದಲ್ಲಿ ಇದೀಗ ಬೆಂಗಳೂರು ಎಡರನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಜೋರಾಗಿ ಸದ್ದು ಜೋರಾಗಿದೆ. ಈ ನಡುವೆಯೇ ಇದೀಗ ಮತ್ತೆ ಎರಡು ಜಿಲ್ಲೆಗಳಲ್ಲಿನ ಏರ್ಪೋರ್ಟ್‌ಗಳ ಸುದ್ದಿಯೊಂದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆ ಎರಡು ಜಿಲ್ಲೆಗಳು ಬೇರೆ ಯಾವು ಅಲ್ಲ ಹುಬ್ಬಳ್ಳಿ-ಬೆಳಗಾವಿ. ಹುಬ್ಬಳ್ಳಿ-ಬೆಳಗಾವಿ ಎರಡೂ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನ ಪೂರೈಕೆ ಮಾಡುವ ಎಲ್ಲ ಮೂಲಸೌಕರ್ಯಗಳನ್ನು ಹೊಂದಿರುವವು ಆಗಿವೆ. ಆದ್ದರಿಂದ ಈ ಏರ್‌ಪೋರ್ಟ್‌ಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಕೆಲ ಭಾಗಗಳಲ್ಲಿ ವಾಯು ಸಂಪರ್ಕ ಹೆಚ್ಚಳ ಮಾಡಲು ಸಹಕಾರಿ ಆಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

Big update on Hubballi and Belagavi airports upgrade

ಸದ್ಯ ಹುಬ್ಬಳ್ಳಿ-ಬೆಳಗಾವಿ ವಿಮಾನ ನಿಲ್ದಾಣಗಳು ರಾಜ್ಯದಲ್ಲಿನ ದೇಶಿಯ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿವೆ. ಇವುಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮಾಡುವ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು: ರಾಜ್ಯದಲ್ಲಿ ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಎರಡು ಇವೆ. ಅವುಗಳೆಂದರೆ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿವೆ. ಇದೀಗ ಇವುಗಳ ಪಟ್ಟಿಗೆ ಹುಬ್ಬಳ್ಳಿ-ಬೆಳಗಾವಿ ವಿಮಾನ ನಿಲ್ದಾಣಗಳನ್ನು ಸೇರಿಸಲು ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿನ ದೇಶಿಯ ವಿಮಾನ ನಿಲ್ದಾಣಗಳು

* ಬೆಳಗಾವಿ ವಿಮಾನ ನಿಲ್ದಾಣ (ಸಾಂಬ್ರಾ)
* ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣ
* ಕಲಬುರಗಿ ವಿಮಾನ ನಿಲ್ದಾಣ
* ಬೀದರ್ ವಿಮಾನ ನಿಲ್ದಾಣ *
ಬಳ್ಳಾರಿ ವಿಮಾನ ನಿಲ್ದಾಣ
* ಮೈಸೂರು ವಿಮಾನ ನಿಲ್ದಾಣ
* ಶಿವಮೊಗ್ಗ ವಿಮಾನ ನಿಲ್ದಾಣ

ಇದೀಗ ಈ ಪೈಕಿ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಪಟ್ಟಿಗೆ ಸೇರಿಸುವ ಬಗ್ಗೆ ಸಚಿವ ಎಂ.ಬಿ ಪಾಟೀಲ್‌ ಅವರು ಚರ್ಚೆ ನಡೆಸಿದ್ದಾರೆ. ಅಲ್ಲದೆ, ಇದರಿಂದ ಏನೆಲ್ಲಾ ಉಪಯುಕ್ತ ಆಗಲಿವೆ ಎಂದು ಸವಿವರಚಾಗಿ ವಿವರಣೆ ನೀಡಿದ್ದಾರೆ.

ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾದರೆ, ಮಧ್ಯಪ್ರಾಚ್ಯ ದೇಶಗಳು, ಸಿಂಗಪುರ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ವಿಮಾನ ಸಂಚಾರ ಸುಗಮ ಆಗಲಿದೆ. ಜೊತೆಗೆ ಇ-ಕಾಮರ್ಸ್ ಅಭಿವೃದ್ಧಿ ಆಗಲಿದೆ. ಅದರಲ್ಲೂ ಉತ್ತರ ಕರ್ನಾಟಕದ ಈ ಎರಡೂ ನಗರಗಳು ಮುಂದಿನ ದಿನಗಳಲ್ಲಿ ಲಾಜಿಸ್ಟಿಕ್ಸ್ ಹಬ್ ಆಗಿ ಬೆಳೆಯಲಿವೆ ಎಂದು ಹೇಳಿದ್ದಾರೆ.

ವಾಯು ಸಂಪರ್ಕ ಹೆಚ್ಚಳದಿಂದ ಈ ಪ್ರದೇಶದಲ್ಲಿನ ಶಿಕ್ಷಣ, ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಪ್ರಮುಖ ಉತ್ತೇಜನ ನೀಡಲಿದೆ. ಜೊತೆಗೆ ಇದೀಗ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಇದರ ಉದ್ಘಾನೆಗೆ ಪರಿಸರ ಸಚಿವಾಲಯದ ಅಂತಿಮ ಅನುಮೋದನೆಯೊಂದೇ ಬಾಕಿ ಇದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+