ಯೂಟ್ಯೂಬರ್ ಸಮೀರ್‌ಗೆ ಬೆಂಬಲ ಕೊಟ್ಟವರಿಂದ ಯೂಟರ್ನ್: ಇಲ್ಲಿದೆ ವೈರಲ್ ವಿಡಿಯೋ!
YouTuber Sameer MD: ದೂತ ಯೂಟ್ಯೂಬ್ ಚಾನೆಲ್‌ನ ಸಮೀರ್‌ಗೆ ಒಂದಿಲ್ಲೊಂದು ಸಂಕಷ್ಟ ಮುಂದುವರಿದಿದೆ. ಸಮೀರ್ ಐಎ ವಿಡಿಯೋ ಬಳಸಿಕೊಂಡು ವಿಡಿಯೋ ಮಾಡಿದ ಸಂದರ್ಭದಲ್ಲಿ ಹಲವು ಯೂಟ್ಯೂಬರ್‌ಗಳು ಸಮೀರ್‌ಗೆ ಬೆಂಬಲ ಸೂಚಿಸಿದ್ದರು. ಯುದ್ಧಕ್ಕೆ ನಿಂತ ಮೇಲೆ ಸೈನಿಕರನ್ನು ಲೆಕ್ಕ ಹಾಕಬಾರದು ಎಂದು ಕೆಲವು ಪ್ರಮುಖ ಯೂಟ್ಯೂಬರ್‌ಗಳು ಬೆಂಬಲ ಸೂಚಿಸಿದ್ದರು.
ಇದಾದ ಮೇಲೆ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಸೌಜನ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ನಾವು ಬೆಂಬಲ ಕೊಟ್ಟಿದ್ದೆವು ಎಂದು ಯೂಟ್ಯೂಬರ್‌ಗಳು ಇದೀಗ ವಿಡಿಯೋ ಮಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋಗೆ ಸಂಬಂಧಿಸಿದಂತೆ ಪರ - ವಿರೋಧ ಚರ್ಚೆ ಶುರುವಾಗಿದೆ.

ಇನ್ನು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಪರಾಧ ಕೃತ್ಯಗಳ ಆರೋಪಕ್ಕೆ ಸಂಬಂಧಿಸಿದಂತೆ AI ಬಳಸಿಕೊಂಡು ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ವಿರುದ್ಧ ಕೇಸ್ ದಾಖಲಾಗಿದೆ. ಈ ನಡುವೆ ಬಂಧನ ಸಮೀರ್‌ಗೆ ಬಂಧನ ಭೀತಿ ಎದುರಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ನೀಡಿದೆ. ಇದರೊಂದಿಗೆ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ. ಈ ಹಿನ್ನೆಲೆ ಆಗಸ್ಟ್ 24ರಂದು ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆ ಬಂದಿದ್ದರು.
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಮೀರ್ ಅವರೊಂದಿಗೆ ಪ್ರಾರಂಭದ ಹಂತದಲ್ಲಿ ನಿಂತಿದ್ದ ಯೂಟ್ಯೂಬರ್‌ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ಯುದ್ಧ ಮಾಡುವ ಸೈನಿಕರಲ್ವಾ ನೀವು ಯದ್ಧ ಮಾಡೋಕೆ ಹೋಗಿಲ್ವಾ ?" ಎನ್ನುವ ಪ್ರಶ್ನೆಯೊಂದಿಗೆ ವೈರಲ್ ಆಗುವ ವಿಡಿಯೋದಲ್ಲಿ ಯೂಟ್ಯೂಬರ್‌ಗಳು ಮಾತನಾಡಿದ್ದಾರೆ.
ಈ ಯುದ್ಧ ಶುರುವಾಗಿದ್ದು ಸೌಜನ್ಯ ಅವರಿಗೆ ನ್ಯಾಯ ಕೊಡಿಸುವುದರಲ್ಲಿ. ಈ ಯುದ್ಧದಲ್ಲಿ ನಾವು ಈ ಹಿಂದೆಯೂ ಇದ್ದೆವು, ಇನ್ಮುಂದೆಯೂ ಇರಲಿದ್ದೇವೆ. ಇದು ವಿಚಾರ ಅಲ್ಲಿಂದ ಪ್ರಾರಂಭವಾಗಿ ದೇವಸ್ಥಾನ ಹಾಗೂ ಧರ್ಮದವರೆಗೂ ಹೋಗಿ ಕುಳಿತಿದೆ. ಐದು ತಿಂಗಳ ಹಿಂದೆ ನಾವೆಲ್ಲಾ ಜಸ್ಟಿಸ್ ಫಾರ್ ಸೌಜನ್ಯ ಎನ್ನುವ ವಿಡಿಯೋವನ್ನು ಮಾಡಿದ್ದೆವು. ಕೆಲವರು ನಮ್ಮನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡಿದ್ದರು. ಹೀಗಾಗಿ ನಾವು ಅಂದು ಈ ವಿಚಾರದಲ್ಲಿ ಧ್ವನಿ ಎತ್ತಿದ್ದೆವು. ಜನ ಸಹ ಈ ವಿಚಾರದಲ್ಲಿ ಬೆಂಬಲ ನೀಡಲಿದ್ದಾರೆ ಎಂದು ನಿರೀಕ್ಷೆ ಮಾಡಿದ್ದೆವು.
ಆದರೆ, ಇಂದು ಕೆಲವರು ಈ ವಿಚಾರದಲ್ಲಿ ನಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ. ಕೆಲವೊಂದು ಕಿಡಿಗೇಡಿಗಳ ಕಾರಣಕ್ಕೆ ಈ ವಿಡಿಯೋವನ್ನು ಮಾಡುತ್ತಿರುವುದಾಗಿ ಯೂಟ್ಯೂಬರ್‌ಗಳು ಈ ವಿಡಿಯೋದಲ್ಲಿ ಹೇಳಿದ್ದಾರೆ. ನಾವು ಹೋಗಿದ್ದು ಒಂದೇ ಉದ್ದೇಶ ಆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸುವುದೇ ಆಗಿತ್ತು. ಆದರೆ ಯಾವುದೇ ಜಾತಿ, ಧರ್ಮ ಅಥವಾ ದೇವಸ್ಥಾನ ಎನ್ನುವ ವಿಚಾರವನ್ನು ನಾವು ವಿಡಿಯೋದಲ್ಲಿ ತಂದಿಲ್ಲ. ದೇಶದ್ರೋಹಿ ಅಥವಾ ಧರ್ಮ ವಿರೋಧಿ ಕೆಲಸವನ್ನೂ ನಾವು ಮಾಡಿಲ್ಲ ಎಂದು ಯೂಟ್ಯೂಬರ್‌ಗಳು ಹೇಳಿದ್ದಾರೆ. ಸೈನಿಕರು ಎಲ್ಲೋದರು ಎನ್ನುವವರಿಗೆ ಈ ವಿಡಿಯೋ ಎಂದು ಹೇಳಲಾಗಿದೆ.











Click it and Unblock the Notifications