ಬರ ಪರಿಹಾರ ಯಾವಾಗ ಸಿಗುತ್ತೆ? ಕಾಂಗ್ರೆಸ್ VS ಬಿಜೆಪಿ ಫೈಟಿಂಗ್ ಯಾವಾಗ ಮುಗಿಯುತ್ತೆ?
2024ರ ಲೋಕಸಭೆ ಚುನಾವಣೆ ಅಖಾಡ ರಂಗಾಗಿದ್ದು, ಕರ್ನಾಟಕದಲ್ಲಿ ಇನ್ನೇನು ಕೆಲವೇ ಕೆಲವು ದಿನದಲ್ಲಿ ಮತದಾನ ನಡೆಯಲಿದೆ. ಈ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ ಅಂತಾ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ ಕರ್ನಾಟಕ ಸರ್ಕಾರ. ಹೀಗಿದ್ದಾಗಲೇ ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಹೇಳಿದ್ದೇನು ಗೊತ್ತಾ?
ಕರ್ನಾಟಕ ಲಕ್ಷ ಲಕ್ಷ ಕೋಟಿ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಆದರೂ, ಕರ್ನಾಟಕಕ್ಕೆ ಮಾತ್ರ ವಾಪಸ್ ಬರುತ್ತಿರುವುದು ಪುಡಿಗಾಸು ಎಂಬ ಆರೋಪ ಮೊದಲಿನಿಂದ ಕೂಡ ಇದೆ. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರ ಜೊತೆ ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗಿ ಪ್ರತಿಭಟನೆ ಕೂಡ ಮಾಡಿದ್ದರು. ಇಷ್ಟಾದರೂ ನಮಗೆ ಅಂದ್ರೆ ಕರ್ನಾಟಕ ರಾಜ್ಯಕ್ಕೆ ಬರಬೇಕಿದ್ದ ಹಣ ಬಂದಿಲ್ಲ ಅಂತಾ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ ಸಿದ್ದರಾಮಯ್ಯ ಅವರ ಸರ್ಕಾರ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗರಂ ಆಗಿ ಹೇಳಿದ್ದೇನು ಗೊತ್ತಾ? ಮುಂದೆ ಓದಿ.

'ಕಾಂಗ್ರೆಸ್ ಸರ್ಕಾರ ನಾಟಕ ಮಾಡುತ್ತಿದೆ'
ವಿಜಯೇಂದ್ರರ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದ್ದು, 'ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಅನುದಾನದ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ.' ಅಂತಾ ಟ್ವೀಟ್ ಮಾಡಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಅನುದಾನದ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ.
— BJP Karnataka (@BJP4Karnataka) March 24, 2024
ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು… pic.twitter.com/csm1X9qryY
'ಕೇಂದ್ರ ಸರ್ಕಾರದ ಕಳ್ಳಾಟವನ್ನು..'
ಇನ್ನು ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, 'ಕರ್ನಾಟಕ ತೀವ್ರ ಬರದಿಂದ ನಲುಗುತ್ತಿದೆ, ಜನತೆಯ ಸಂಕಷ್ಟಗಳು ಮುಗಿಲು ಮುಟ್ಟಿದೆ, ರಾಜ್ಯ ಸರ್ಕಾರ ರೈತರಿಗೆ ₹2000 ತುರ್ತು ಪರಿಹಾರವನ್ನು ನೀಡಿ ಕ್ರಮ ಕೈಗೊಂಡಿದೆ, ಬರ ಪರಿಹಾರವನ್ನು ಕೇಳುವ ಎಲ್ಲಾ ಮಾರ್ಗಗಳನ್ನೂ ಅನುಸರಿಸಿದರೂ ಪರಿಹಾರ ನೀಡದ ಕೇಂದ್ರ ಸರ್ಕಾರದ ಕಳ್ಳಾಟವನ್ನು ಇನ್ನು ಸಹಿಸಲು ಸಾಧ್ಯವೇ ಇಲ್ಲ, ಕರ್ನಾಟಕ ದ್ವೇಷಿ ಮೋದಿಯವರಿಂದ ವಿಪತ್ತು ಪರಿಹಾರ ನಿಧಿಯಿಂದ ನಯಾಪೈಸೆ ಪರಿಹಾರ ಸಿಗದಿರುವಾಗ ನಮಗೆ ಉಳಿದ ಮಾರ್ಗ ನ್ಯಾಯಾಲಯದ ಮೊರೆ ಹೋಗುವುದು ಮಾತ್ರ.'
ಕರ್ನಾಟಕ ತೀವ್ರ ಬರದಿಂದ ನಲುಗುತ್ತಿದೆ, ಜನತೆಯ ಸಂಕಷ್ಟಗಳು ಮುಗಿಲು ಮುಟ್ಟಿದೆ,
— Karnataka Congress (@INCKarnataka) March 23, 2024
ರಾಜ್ಯ ಸರ್ಕಾರ ರೈತರಿಗೆ ₹2000 ತುರ್ತು ಪರಿಹಾರವನ್ನು ನೀಡಿ ಕ್ರಮ ಕೈಗೊಂಡಿದೆ,
ಬರ ಪರಿಹಾರವನ್ನು ಕೇಳುವ ಎಲ್ಲಾ ಮಾರ್ಗಗಳನ್ನೂ ಅನುಸರಿಸಿದರೂ ಪರಿಹಾರ ನೀಡದ ಕೇಂದ್ರ ಸರ್ಕಾರದ ಕಳ್ಳಾಟವನ್ನು ಇನ್ನು ಸಹಿಸಲು ಸಾಧ್ಯವೇ ಇಲ್ಲ,
ಕರ್ನಾಟಕ ದ್ವೇಷಿ ಮೋದಿಯವರಿಂದ… pic.twitter.com/htTyV2k5up
'35 ಸಾವಿರ ಕೋಟಿಗೂ ಅಧಿಕ ಮೊತ್ತದ ಹಾನಿಯಾಗಿದೆ, ಬರದ ಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡ ನೋಡಿದೆ, ಮುಖ್ಯಮಂತ್ರಿಗಳು ಪ್ರಧಾನಿ ಭೇಟಿಯಾಗಿ ಮನವರಿಕೆ ಮಾಡಿದ್ದೂ ಆಗಿದೆ, ಆದರೆ ಕೇಂದ್ರ ಸರ್ಕಾರದ ಸ್ಪಂದನೆ ಮಾತ್ರ ಶೂನ್ಯ. ₹18,171 ಕೋಟಿ ಬರ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್ ಗೆ ಕೇಳಿಕೊಂಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ನಮ್ಮ ಸರ್ಕಾರದ ಮಹತ್ವದ ಹೆಜ್ಜೆ ಇದು.' ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಬಗ್ಗೆ ಇದೀಗ ಬಿಜೆಪಿ ರೀಪ್ಲೇ ಕೊಟ್ಟಿದೆ.
ಒಟ್ನಲ್ಲಿ ಬರ ಪರಿಹಾರ ಸಿಕ್ಕರೆ ಸಾಕು ಅಂತಾ ನಮ್ಮ ಕನ್ನಡ ನಾಡಿನ ರೈತರು ಕಾಯ್ತಿದ್ದು, ಲೋಕಸಭೆ ಚುನಾವಣೆ ಸಮಯದಲ್ಲಿ ಈ ವಿಚಾರದಲ್ಲೂ ರಾಜಕೀಯ ಶುರುವಾಗಿದೆ. ಹೀಗೆ ರಾಜಕೀಯ ಮಾಡುವ ಬದಲು ಮೊದಲಿಗೆ ನಮ್ಮ ರೈತರಿಗೆ ಬರಬೇಕಾದ ಬರ ಪರಿಹಾರದ ಹಣ ಕೊಡಿಸಬೇಕು ಎಂಬುದು ಬಡ ರೈತರ ಆಗ್ರಹವಾಗಿದೆ.












Click it and Unblock the Notifications