ಬೀದರ್ : ಜನ ಮೆಚ್ಚಿದ ಕೆಟಿಎಂ- ಡ್ಯೂಕ್ ಬೈಕ್ ಸಾಹಸ

Posted By: ಬೀದರ್ ಪ್ರತಿನಿಧಿ
Subscribe to Oneindia Kannada

ಬೀದರ್, ಏಪ್ರಿಲ್ 09: ರೇಸಿಂಗ್ ಸಲುವಾಗಿಯೇ ಪ್ರಸಿದ್ಧಿ ಪಡೆದಿರುವ ಕೆಟಿಎಂ ಮತ್ತು ಡ್ಯೂಕ್ ಬೈಕನ ಸಾಹಸ ರೇಸಿಂಗ್ ಪ್ರದರ್ಶನ ಒಂದು ನಗರದ ಗುರು ನಾನಕದೇವ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯಿತು.

ಚೆನ್ನೈಯಿಂದ ಬಂದಿದ್ದ ವೃತ್ತಿಪರ ಸಾಹಸಿ ಬೈಕ್ ಚಾಲಕರು ಸಾಹಸ ಮತ್ತು ವೈವಿಧ್ಯತೆಯನ್ನು ಕಂಡು ಬೀದರ್ ಜನತೆ ಅಬ್ಬಾ ಎಂದು ನಿಟ್ಟುಸಿರು ಬಿಟ್ಟರು. ಈ ಸಾಹಸ ಪ್ರದರ್ಶನಕ್ಕೆ ಆಗಮಿಸಿದ ಪ್ರೇಕ್ಷಕರ ಗಮನವನ್ನು ಸೆಳೆದ ಚಾಲಕರು ಬೀದರ್ ಜನತೆ ಮೆಚ್ಚುಗೆಗೆ ಪಾತ್ರರಾದರು.

Bidar : KTM Duke bike racing Gurunanak Engineering College

ಬಜಾಜ್ ಆಟೊ ಲಿಮಿಟೆಡ್‌ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷ ಅಮಿತ್ ನಂದಿ ಮಾತನಾಡಿ, 'ಕೆಟಿಎಂ ಬ್ರ್ಯಾಂಡ್ ಅಧಿಕ ಸಾಮರ್ಥ್ಯದ ರೇಸಿಂಗ್‌ ಬೈಕ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಕೆಟಿಎಂ ಬೈಕ್‌ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ' ಎಂದು ತಿಳಿಸಿದರು.

'ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದು, ಬೀದರ್‌ನಲ್ಲಿಯೂ ನಡೆಸಲಾಗಿದೆ'
ಎಂದು ತಿಳಿಸಿದರು.

Bidar : KTM Duke bike racing Gurunanak Engineering College

ಇದಕ್ಕೆ ಮೊದಲು ಮಂಗಳೂರು, ತುಮಕೂರು, ಚಿಕ್ಕಮಗಳೂರು, ಶಿರಸಿ, ದಾವಣಗೆರೆ, ಗೋಕಾಕ, ಹೊಸಪೇಟೆ, ಶಿವಮೊಗ್ಗ, ವಿಜಯಪುರ, ಕಲಬುರ್ಗಿ, ಕಂಚಿಪುರ, ಚೆನ್ನೈ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನ ನಡೆಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bidar : KTM Duke bike racing show enthralled students and others at Guru Nanak Dev Engineering College

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ