ಬೀದರ್ : ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆಗಾಗಿ ಹೋರಾಟ
ಬೀದರ್, ಜುಲೈ 10: ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ಪಡೆಯಲು ಜನಜಾಗೃತಿ ಮೂಲಕ ಹೋರಾಟ ಸಂಘಟಿಸಲಾಗುತ್ತಿದೆ. ಅದಕ್ಕಾಗಿ ಸಮಾನ ಮನಸ್ಕ ಮಠಾಧೀಶರು, ಗಣ್ಯರು, ಸಾಹಿತಿಗಳನ್ನು ಒಳಗೊಂಡ ಲಿಂಗಾಯತ ಸಮನ್ವಯ ಸಮಿತಿ ರಚಿಸಲಾಗಿದೆ. ರಾಜ್ಯದ ಎಲ್ಲ ಮಠಾಧೀಶ ರನ್ನು ಸಂಪರ್ಕಿಸಿ ಹೋರಾಟ ರೂಪಿಸಲಾಗುವುದು. ಜುಲೈ 19ರಂದು ಬೀದರ್‌ನಲ್ಲಿ ಮೆರವಣಿಗೆ ಜಾಥಾ ಆಯೋಜಿಸಲಾಗಿದೆ ಎಂದು ಮಾತೆ ಮಹಾದೇವಿ ಹೇಳಿದರು.
'ಲಿಂಗಾಯತ ಶ್ರೀಸಾಮಾನ್ಯನ ಧರ್ಮ. ಬಸವಣ್ಣ ಧರ್ಮಗುರು. ಆದರೆ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ' ಎಂದರು.

'ವೀರಶೈವ ಎಂಬುದು ವೇದ ಮತ್ತು ಆಗಮಗಳ ಆಧಾರದ ಮೇಲೆ ರೂಪುಗೊಂಡ ಶೈವ ಪಂಥದ ಶಾಖೆಯಾಗಿದೆ. ಅದಕ್ಕೆ ಸ್ವತಂತ್ರ ಧರ್ಮದ ಮನ್ನಣೆ ಸಾಧ್ಯವಿಲ್ಲ. ಹಾಗಾಗಿ ಲಿಂಗಾಯತ ಹಾಗೂ ವೀರಶೈವ ಪದಗಳ ಸಮಾನಾರ್ಥಕ ಬಳಕೆ ಸರಿಯಲ್ಲ. ವೀರಶೈವ ಎಂಬುದು ಲಿಂಗಾಯತ ಸಮುದಾಯದಲ್ಲಿ ನಂತರ ಬಂದು ಸೇರಿಕೊಂಡ ಒಂದು ಉಪ ಪಂಗಡ ಮಾತ್ರ' ಎಂದು ವಿವರಿಸಿದರು.
ಲಿಂಗಾಯತ ಪದಕ್ಕೆ ಸಮನಾರ್ಥಕವಾಗಿ ವೀರಶೈವ ಪದ ಬಳಕೆ ಮಾಡುತ್ತಿರುವ ಕಾರಣ ಇಲ್ಲಿಯವರೆಗೆ ಸ್ವತಂತ್ರ ಧರ್ಮ ಸ್ಥಾನಮಾನ ಸಿಕ್ಕಿಲ್ಲ. ಮಹಾಸಭಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬೀದರ್‌ನ ಖಂಡ್ರೆ ಪರಿವಾರ, ಈಗಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಗೊಂದಲ ಹೆಚ್ಚಿಸುತ್ತಿದ್ದಾರೆ. ಎಲ್ಲಾ ವಿಚಾರ ಗೊತ್ತಿರುವ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ ಎಂದು ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದರು.












Click it and Unblock the Notifications