ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು

ಬೀದರ್, ಜೂ. 5 : ಬೀದರ್ ಜಿಲ್ಲೆಯ ಚೌಳಿ ಮಠದಲ್ಲಿ ಮತ್ತೊಬ್ಬ ಸ್ವಾಮೀಜಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸುಭಾಷ ಸ್ವಾಮೀಜಿ ಮೃತದೇಹ ರೈಲ್ವೆಹಳಿಗಳ ಮಧ್ಯೆ ಬುಧವಾರ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವ ಕೊಲೆಯೋ ಎಂಬ ಅನುಮಾನ ಉಂಟಾಗಿದೆ.

ಕಳೆದ ವರ್ಷ ಚೌಳಿ ಮಠದ ಮೂವರು ಸ್ವಾಮೀಜಿಗಳು ಮಠದ ಆವರಣದಲ್ಲಿ ಬೆಂಕಿಗಾಹುತಿಯಾಗಿ ಮೃತಪಟ್ಟಿದ್ದರು. ಈಗ ಮತ್ತೊಬ್ಬ ಸ್ವಾಮೀಜಿಯವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

Chouli Mutt

ಬುಧವಾರ ಸುಭಾಷ ಸ್ವಾಮೀಜಿ (70) ಅವರ ಮೃತದೇಹ ಬೀದರ್ ನಗರದ ಹೊರವಲಯದಲ್ಲಿರುವ ನೌಬಾದ್‌ ರೈಲು ಹಳಿಗಳ ಮಧ್ಯೆ ಮೃತದೇಹ ಪತ್ತೆಯಾಗಿದೆ. ವೃತ್ತಿಯಲ್ಲಿ ಬಸ್‌ ಚಾಲಕರಾಗಿದ್ದ ಸ್ವಾಮೀಜಿ ಲಿಂಗೈಕರಾಗಿರುವ ಗಣೇಶ್ವರ ಅವಧೂತರ ಪ್ರವಚನದಿಂದ ಪ್ರೇರೇಪಣೆಗೊಂಡು ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. [ಚೌಳಿಮಠದ ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?]

ಹತ್ತು ವರ್ಷಗಳಿಂದ ಗಣೇಶ್ವರ ಅವಧೂತರ ಶಿಷ್ಯರಾಗಿ ಸುಭಾಷ ಸ್ವಾಮೀಜಿ ಕಾರ್ಯನಿರ್ವಹಿಸುತ್ತಿದ್ದರು. ಸಂಗೋಳಗಿಯ ಶಾಖಾ ಮಠದ ಉಸ್ತುವಾರಿಯನ್ನು ಇವರು ನೋಡಿಕೊಳ್ಳುತ್ತಿದ್ದರು. ಗಣೇಶ್ವರರ ಸ್ವಾಮೀಗಳ ಸಾವಿನ ಬಳಿಕ ಕೆಲ ಕಾಲ ಚೌಳಿ ಮಠದಲ್ಲಿಯೇ ನೆಲೆಸಿದ್ದರು. ನಂತರ ಮಠದಲ್ಲಿ ಸಂಭವಿಸಿದ ದುರ್ಘ‌ಟನೆಗಳಿಂದ ನೊಂದ ಅವರು, ನಗರದ ತಮ್ಮ ಮನೆಗೆ ವಾಪಸ್ಸಾಗಿದ್ದರು.[ಬೀದರ್ ಚೌಳಿ ಮಠದಲ್ಲಿ ಭೀಕರ ದುರಂತ]

ಸುಭಾಷ ಸ್ವಾಮೀಜಿ ಅವರು ಕ್ಷಯರೋಗ ಮತ್ತು ಹೊಟ್ಟೆ ನೋವಿನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಸ್ವಾಮೀಜಿಯವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+