Bidadi: ಈ ವಿಷಯಗಳು ಸರಿ ಇದ್ದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತೆ ಎಂದ ನಿಖಿಲ್ ಕುಮಾರಸ್ವಾಮಿ
ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ ಎಂದು ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ. ನನ್ನ ರೈತಪರ ನಿಲುವು ಎಂದಿಗೂ ಬದಲಾಗುವುದಿಲ್ಲ. ರೈತರಿಗೆ ನ್ಯಾಯ ದೊರೆಯುವವರೆಗೆ ನನ್ನ ಹೋರಾಟ ನಿರಂತರ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಹಿರಂಗ ಸಭೆ ಹಾಗೂ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ ಎಂದಿದ್ದಾರೆ. ಯಾರೇ ಮುಖ್ಯಮಂತ್ರಿಯಾದರು ಹೊಟ್ಟೆ ಕಿಚ್ಚು ಬೀಳುವ ಜಾಯಮಾನ ದೇವೇಗೌಡರ ಕುಟುಂಬದ್ದಲ್ಲ. ಒಕ್ಕಲುತನ ಮಾಡುವ ಹಾಗೂ ಭೂಮಿ ತಾಯಿಯನ್ನು ನಂಬಿರುವ ಪ್ರತಿಯೊಬ್ಬ ಬಡ ಒಕ್ಕಲಿಗರ ರಕ್ಷಣೆ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ರೈತರ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಹಿರಂಗ ಸಭೆ ಹಾಗೂ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಮಾಗಡಿ ಮಾಜಿ ಶಾಸಕ ಎ. ಮಂಜುನಾಥ್ ಅವರೊಂದಿಗೆ ಉದ್ಘಾಟಿಸಿ, ರೈತರನ್ನು ಉದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ವಿರೋಧವಿದ್ದರೂ ಕೂಡ, ನಿರಂತರವಾಗಿ ರೈತರ ದಾರಿ ತಪ್ಪಿಸುವ ಮೂಲಕ ಈ ಸರ್ಕಾರ 15,000 ಕೋಟಿಗೂ ಅಧಿಕ ನಿವ್ವಳ ಲಾಭ ಪಡೆಯಲು ಈ ಯೋಜನೆ ಮಾಡಲು ಹೊರಟಿದೆ ಎಂದು ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಧಿಸೂಚನೆ ಮಾಡಿಲ್ಲ. ಎಲ್ಲ ಹಂತದ ಅಧಿಸೂಚನೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರವೇ ಮಾಡಿದೆ ಎಂದು ರೈತರಿಗೆ ತಿಳಿಸಿದೆ.
ಇಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರೈತರ ವಿರುದ್ಧ ತೆಗೆದುಕೊಂಡಿರುವ ಪ್ರತಿಯೊಂದು ನಿರ್ಧಾರಗಳು ಸಹ ತಪ್ಪಾಗಿವೆ. ನಾವೆಲ್ಲರೂ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಿಡದಿ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸೋಣ ಎಂದರು. ಅಂತಿಮವಾಗಿ ರೈತರಿಗೆ ಜಯ ಸಿಗುವವರೆಗೆ ಹೋರಾಟ ಮಾಡೋಣ ಎಂದೂ ಹೇಳಿದ್ದಾರೆ.
ನೈಸ್ (NICE)ನ BMICP ಯೋಜನೆಯಲ್ಲಿ ನೈಸ್ ಆಗಿರುವುದು ಲೂಟಿ ಮಾತ್ರ: ಜೆಡಿಎಸ್
ನೈಸ್ (NICE)ನ BMICP ಯೋಜನೆಯಲ್ಲಿ ನೈಸ್ ಆಗಿರುವುದು ಲೂಟಿ ಮಾತ್ರ ಎಂದು ಜೆಡಿಎಸ್ ಪಕ್ಷ ಹೇಳಿದೆ. ರೈತರ ಭೂಮಿಯನ್ನು ಕಸಿದುಕೊಂಡು, 111 ಕಿ.ಮೀ ಎಕ್ಸ್‌ಪ್ರೆಸ್‌ವೇ ನಿರ್ಮಿಸದೆ ದಿನಕ್ಕೆ ಕೋಟಿಗಟ್ಟಲೆ ಅಕ್ರಮ ಟೋಲ್ ವಸೂಲಿ ಮಾಡುತ್ತಿರುವ ನೈಸ್ ಪ್ರಾಜೆಕ್ಟ್ ಅನ್ನು ರಾಜ್ಯ ಸರ್ಕಾರ ತಕ್ಷಣವೇ ತನ್ನ ವಶಕ್ಕೆ ಪಡೆಯಬೇಕು. 25 ವರ್ಷಗಳಿಂದ ಭೂಮಿ ಕಳೆದುಕೊಂಡ ಬಡ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಒಪ್ಪಂದದ ರಸ್ತೆಯೂ ಪೂರ್ಣಗೊಂಡಿಲ್ಲ . ಜನರ ಜೇಬಿಗೆ ಕನ್ನ ಹಾಕುತ್ತಿರುವ ನೈಸ್ ಅಕ್ರಮ ಟೋಲ್ ಕಲೆಕ್ಷನ್ ತಕ್ಷಣ ನಿಲ್ಲಿಸಿ, ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು.
ನೈಸ್ ಅಕ್ರಮ ಹಾಗೂ ಟೋಲ್ ವಸೂಲಿಯ ಹಗಲು ದರೋಡೆ ಬಗ್ಗೆ ರೈತರ ಪರವಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಹೋರಾಟಕ್ಕೆ ದೇಶವ್ಯಾಪಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕದ ಅತಿ ದೊಡ್ಡ ಹಗರಣವಾಗಿರುವ ನೈಸ್ ಅಕ್ರಮಕ್ಕೆ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇತಿಶ್ರೀ ಹಾಡಲೇಬೇಕು. ಹೈಕೋರ್ಟ್ ಆದೇಶದಂತೆ ರಾಜ್ಯದ ಜನತೆಯ ಹಕ್ಕೊತ್ತಾಯವೂ ಇದೇ ಆಗಿದೆ ಎಂದು ಜೆಡಿಎಸ್ ಹೇಳಿದೆ.


Click it and Unblock the Notifications
