Bhavya Narasimhamurthy: ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಸೇನಾ ಅನುಭವ ಹಂಚಿಕೊಂಡ ಭವ್ಯ ನರಸಿಂಹಮೂರ್ತಿ
ಬೆಂಗಳೂರು, ಜೂನ್ 04: ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಸೇರ್ಪಡೆಯಾಗಿ ತರಬೇತಿ ಪಡೆದ ನಂತರ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು ಬೆಂಗಳೂರಿಗೆ ಮರಳಿದ್ದು, ಮುಖ್ಯಮಂತ್ರಿಗಳಿಂದ ಆಶೀರ್ವಾದ ಪಡೆದಿದ್ದಾರೆ.
ಭಾರತೀಯ ಸೇನೆಯ ಘಟಕವಾದ ಟೆರಿಟೋರಿಯಲ್ ಆರ್ಮಿಯ ಭಾಗವಾಗಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿ ಅವರು ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು ಟ್ವೀಟ್ ಮಾಡಿದ್ದರು. ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು.

ಇದೀಗ ಸೇನೆಯಲ್ಲಿ ತರಬೇತಿ ಪಡೆದು ಬೆಂಗಳೂರಿಗೆ ಮರಳಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಭವ್ಯ ನರಸಿಂಹಮೂರ್ತಿ ಅವರಿಗೆ ಸಿಹಿ ತಿನಿಸಿ ಶುಭಾಶಯ ಕೋರಿದ್ದಾರೆ.
ಇದೇ ವೇಳೆ ಅವರು ಸೇನೆಯಲ್ಲಿ ತಮಗೆ ನೀಡಿದ ತರಬೇತಿ, ಆದ ಅನುಭವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಶೀರ್ವಾದ ಪಡೆದಿರುವುದಾಗಿ ಸೋಮವಾರ ರಾತ್ರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸೇನೆಗೆ ಸೇರಿದ ಭವ್ಯ ನರಸಿಂಹಮೂರ್ತಿ ಅವರಿಗೆ ಸಂಬಂಧಿಸಿ ಪತ್ರಗಳನ್ನು ನೋಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿತಿ ತಿನಿಸಿ ಶುಭ ಕೋರಿದ್ದಾರೆ. ತಮ್ಮ ಪಕ್ಷದ ವಕ್ತಾರೆ ಸೇನೆ ಸೇರಿದ್ದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂತೋಷದ ಕ್ಷಣ ಎಂದ ಭವ್ಯ ನರಸಿಂಹಮೂರ್ತಿ
ಇದರೊಂದಿಗೆ ಮನೆಯಲ್ಲಿ ತಂದೆ ತಾಯಿ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿರುವ ಭವ್ಯ ನರಸಿಂಹಮೂರ್ತಿ ಅವರು ಇದು ನನ್ನ ಖಷಿಯ ಕ್ಷಣಗಳು ಎಂದು ತಂದೆ ತಾಯಿ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನು ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

ಅವರು ಸೇನೆ ಸೇರಿದ್ದು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್‌ನ ಹಲವು ನಾಯಕರು, ಸ್ಥಳೀಯ ಮುಖಂಡರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ.
ನಾನು ಭಾರತೀಯ ಸೇನೆಯ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಟೆರಿಟೋರಿಯಲ್ ಆರ್ಮಿಕಯಲ್ಲಿ ದಕ್ಷಿಣ ಭಾರತದ ಕಮಿಷನ್ಡ್ ಅಧಿಕಾರಿಯಾದ ಏಕೈಕ ಮಹಿಳೆ ನಾನಾಗಿದ್ದೇನೆ. 2022ರಲ್ಲಿ ನಡೆದ ಟಿಎ ಪರೀಕ್ಷೆಯಲ್ಲಿ ನಾನು ಉತ್ತೀರ್ಣಗೊಂಡ ಏಕೈಕ ಮಹಿಳೆಯು ಆಗಿದ್ದೇನೆ ಎಂದು ಅವರು ಇತ್ತೀಚೆಗೆ ಮಾಹಿತಿ ನೀಡಿದ್ದರು.
ಖ್ಯಾತ ಕ್ರಿಕೇಟಿಗ ಎಂ.ಎಸ್.ಧೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್ ಅಧಿಕಾರ ಕ್ಯಾಪ್ಟನ್ ಮಣಿವಣ್ಣನ್ ಸೇರಿದಂತೆ ಹಲವರು ಈ ಟೆರಿಟೋರಿಯಲ್ ಆರ್ಮಿಯ ಸದಸ್ಯರಾಗಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸರ್ ಅವರನ್ನು ಭೇಟಿಯಾಗಿ ನನ್ನ ಕಾಶ್ಮೀರದ ತರಬೇತಿಯ ಬಗ್ಗೆ ತಿಳಿಸಿ ಆಶೀರ್ವಾದ ಪಡೆದೆ.
— Bhavya Narasimhamurthy (@Bhavyanmurthy) June 3, 2024
Met with CM of Karnataka Sri @siddaramaiah sir and informed him about my training in Kashmir and took his blessings. #Territorialarmy pic.twitter.com/MQXstfoxkT












Click it and Unblock the Notifications