Get Updates
Get notified of breaking news, exclusive insights, and must-see stories!

'ಉತ್ತರ ಕರ್ನಾಟಕ'ದಂತಹ ಭ್ರಷ್ಟ, ಸ್ವಾರ್ಥ ರಾಜಕಾರಣಿಗಳು ಎಲ್ಲೂ ಇಲ್ಲ: Bhaskar Rao

ಬೆಂಗಳೂರು, ಮಾರ್ಚ್ 19: ಉತ್ತಮ ಸಂಪನ್ಮೂಲ, ಶ್ರಮಿಕ ವರ್ಗ ಹೊಂದಿದ್ದರು ಸಹಿತ ಹತ್ತಾರು ಶಾಸಕರನ್ನು ಗೆಲ್ಲಿಸಿ ಕಳುಹಿಸುವ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು, ಇಂದಿನ ತಂತ್ರಜ್ಞಾನ ಯುಗದಲ್ಲಿ ಹಿಂದುಳಿದಿವೆ. ಇದಕ್ಕೆ ಕಾರಣಗಳು ಸಾಕಷ್ಟಿವೆ. ಪ್ರಮುಖ ಕಾರಣವನ್ನು ಮಾಜಿ IPS ಅಧಿಕಾರಿ, ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತರು ಮತ್ತು BJP ನಾಯಕರ ಭಾಸ್ಕರ ರಾವ್ ಅವರು ಕೊಟ್ಟ ಓಪನ್ ಸ್ಟೇಟ್‌ಮೆಂಟ್ ವೈರಲ್ ಆಗುತ್ತಿದೆ.

ರಾಜ್ಯದಲ್ಲಿ ಉತ್ತರ ಕರ್ನಾಟಕದ ಶಾಸಕರು, ರಾಜಕಾರಣಿಗಳಷ್ಟು ಭ್ರಷ್ಟರು, ಅವರಷ್ಟು ಸ್ವಾರ್ಥ ರಾಜಕಾರಣಿಗಳು ಎಲ್ಲೂ ಇಲ್ಲ ಎಂದು ಚಾಟಿ ಬೀಸಿದ್ದಾರೆ. ಪಕ್ಷಾತೀಥವಾಗಿ ಮಾತನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಾವರು ಮಾತನಾಡಿದ್ದಾರೆ. ಉತ್ತರ ಕರ್ನಾಟಕ ಹಿಂದುಳಿಯಲು ರಾಜಕಾರಣಿಗಳ ಪಾತ್ರವನ್ನು ವಿವರಿಸಿದ್ದಾರೆ.

Bhaskar Rao Has Given Main Reason Why North Karnataka is Underdeveloped and Backward

ಉತ್ತರ ಕರ್ನಾಟಕದ ಶಾಸಕರಂತಹ ಭ್ರಷ್ಟರು ಮತ್ಯಾರು ಇಲ್ಲ. ಅಲ್ಲಿ ಗೆದ್ದು ಬರುವ ಶಾಸಕರು ಬೆಂಗಳೂರಿನ ರಾಜರಾಜೇಶ್ವರಿ ನಗರ, ಸದಾಶಿವನಗರ ದಂತಹ ಏರಿಯಾಗಳಲ್ಲಿ ದೊಡ್ಡ ಐಶಾರಾಮಿ ಮನೆ ಕಟ್ಟಿಕೊಂಡು ಆರಾಮ್ ಇದ್ದಾರೆ. ಐಶಾರಾಮಿ ಮನೆ ಜೊತೆಗೆ ಐಶಾರಾಮಿ, ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‌ಗಳನ್ನು ಖರೀದಿಸಿ ಸುಖವಾಗಿದ್ದಾರೆ. ಅವರ ಕ್ಷೇತ್ರದಲ್ಲಿ ಜನ ಮೂಲಸೌಕರ್ಯಗಳೇ ಇಲ್ಲದೇ ಪರಾಡುತ್ತಿದ್ದಾರೆ.

ಶಾಸಕರು ಮಕ್ಕಳು ವಿದೇಶಿ ಶ್ವಾನಗಳನ್ನು ಸಾಕುತ್ತಾರೆ. ಐಶಾರಾಮಿ ಕಾರು, ವಿದೇಶಿ (ಇಂಪೋರ್ಟೆಡ್) ವಾಹನಗಳು ಇಟ್ಟುಕೊಂಡು ಬೆಂಗಳೂರಿನಲ್ಲಿ ವಿಲಾಸಿ ಜೀವನ ಅನುಭವಿಸುತ್ತಿದ್ದಾರೆ. ಆದರೆ ಇದೇ ಶಾಸಕರ ಸ್ವಂತ ಕ್ಷೇತ್ರಗಳಲ್ಲಿ ಕುಡಿಯುವ ನೀರು ಸಿಗುವುದಿಲ್ಲ. ಎಷ್ಟೋ ಮನೆಗಳಲ್ಲಿ ಶೌಚಾಲಯ ಇಲ್ಲ. ಆಸ್ಪತ್ರೆಗಳೂ ಸೇರಿದಂತೆ ಮೂಲ ಸೌಕರ್ಯಗಳು ತಾಂಡವವಾಡುತ್ತಿವೆ. ಈ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂದು ದೂರಿದರು.

ಸರ್ಕಾರದಿಂದ ಬರುವ ಎಲ್ಲ ಅನುದಾನ ಎಲ್ಲವನ್ನು ಉತ್ತರ ಕರ್ನಾಟಕದ ಶಾಸಕರು ಖರ್ಚು ಮಾಡುತ್ತಾರೆ. ಅದನ್ನು ದಾಖಲೆಗಳಲ್ಲಿ ತೋರಿಸುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅವರು ಜರಿದಿದ್ದಾರೆ. ಬೆಂಗಳೂರಿನಿಂದ ನೀವು ಉತ್ತರ ಕರ್ನಾಟಕ, ಕಲ್ಯಾಣದ ಪ್ರದೇಶಗಳ ಕಡೆಗೆ ಹೋದಂತೆಲ್ಲ, ಅಭಿವೃದ್ಧಿ ಕಣ್ತರೆಯಾಗಿ ಬಿಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ.

ಸಂಪನ್ಮೂಲ ಇದ್ದರೂ 'ಉ.ಕ' ಏಕೆ ಉದ್ಧಾರವಾಗಿಲ್ಲ!

ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಭಾಸ್ಕರ್ ರಾವ್ ಅವರು, ಉತ್ತರ ಕರ್ನಾಟಕವು ಯಾವುದೇ ಇತರ ರಾಜ್ಯಕ್ಕಿಂತ ಹೆಚ್ಚು ಶ್ರೀಮಂತವಾಗಿರಬಹುದಿತ್ತು. ಏಕೆಂದರೆ ಅಲ್ಲಿ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, ಭೀಮಾ, ತುಂಗಭದ್ರಾ, ಕೃಷ್ಣಾ ನದಿಗಳು ಹರಿಯುತ್ತವೆ. ನೀರಾವರಿ ವ್ಯವಸ್ಥೆ ಇದೆ. ಮೂರು ಮಹಾನಗರಗಳಿಗೆ ಹತ್ತಿರವಾಗಿ ನದಿಗಳು ಇವೆ. ಸುವ್ಯವಸ್ಥೆ ರೈಲ್ವೆ ಜಾಲ ಇದೆ.

Bhaskar Rao Has Given Main Reason Why North Karnataka is Underdeveloped and Backward

ಈ ಭಾಗದಲ್ಲಿ ಅಪಾರ ಸಂಪನ್ಮೂಲಗಳು, ಫಲವತ್ತತೆ ಇದೆ. ಕೃಷಿ ವಿಚಾರದಲ್ಲಿ ಕಬ್ಬು, ತೋಟಗಾರಿಕೆ ಬೆಳೆ ಬೆಳಯುತ್ತಾರೆ. ಅಲ್ಲದೇ ತರಕಾರಿ, ತೂಗರಿ ಬೇಳೆ ಸೇರಿದಂತೆ ಇತರ ಪ್ರಮುಖ ಬೆಳೆಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಖನಿಜ ಸಂಪತ್ತು ಇದೆ. ಭೌಗೋಳಿಕ ಸ್ಥಳಗಳ ಜೊತೆಗೆ ಪ್ರಮುಖವಾಗಿ ಕಠಿಣ ಪರಿಶ್ರಮಪಡುವವರಿದ್ದಾರೆ. ಪ್ರಾಮಾಣಿಕ ಜನರಿದ್ದಾರೆ. ಹೀಗಿದ್ದರೂ ಸಹ ಈ ಅರ್ಧ ರಾಜ್ಯ ಉದ್ಧಾರವಾಗಿಲ್ಲ. ಕಾರಣ ಉತ್ತರ ಕರ್ನಾಟಕ ಭಾಗದಲ್ಲಿರುವ ಸ್ವಾರ್ಥ ರಾಜಕಾರಣಿಗಳು, ದೂರದೃಷ್ಟಿಯೇ ಇಲ್ಲದ ರಾಜಕೀಯ ನಾಯಕತ್ವ ಎಂದು ಅವರು ತಿಳಿಸಿದರು.

ಒಂದೇ ಒಂದು ಮಾದರಿ ಕ್ಷೇತ್ರ, ನಗರ ಇಲ್ಲಿಲ್ಲ!

ಕಳೆದ ಅದಷ್ಟೋ ವರ್ಷಗಳಿಂದ ಇಲ್ಲಿನ ಶಾಸಕರು ಗೆದ್ದು ವಿಧಾನಸಭೆಗೆ, ಸಂಸತ್‌ಗೆ ಆಯ್ಕೆ ಆದರೂ ಸಹಿತ ಉತ್ತರ ಕರ್ನಾಟಕದ ಭಾಗದಲ್ಲಿ ಒಂದೇ ಒಂದು ಮಾದರಿ ಕ್ಷೇತ್ರ ಇಲ್ಲ. ಚುನಾವಣೆ ಬಂದಾಗ ಮಾತ್ರ ಕ್ಷೇತ್ರದಲ್ಲಿ ಕಾಣುವ ಈ ರಾಜಕಾರಣಿಗಳು ಬೆಳಗಾವಿ ಅಧಿವೇಶನದಲ್ಲಿ ಪ್ರತಿ ವರ್ಷವು ಬೆಳಗಾವಿ ಅಧಿವೇಶದನಲ್ಲಿ ಚರ್ಚೆ ಮಾಡುತ್ತಾರೆ. ಕಾಲಹರಣ ಮಾಡುತ್ತಾರೆ. ಅವೆಲ್ಲ ಮರೆತು ಮತ್ತೆ ಮರು ವರ್ಷದ ಅಧಿವೇಶನದಲ್ಲಿ ಹೊಸ ವಿಷಯಗಳನ್ನು ಚರ್ಚಿಸುತ್ತಾರೆ ಎಂಬ ಆರೋಪವು ಇದೆ.

ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಅಸಮಾನತೆಗೆ ಒಳಗಾದ ಉತ್ತರ ಕರ್ನಾಟಕದ ಏಳಿಗೆಯನ್ನು ಇಲ್ಲಿನ ಜನರು ಎದುರು ನೋಡುತ್ತಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆಗಳು ಬರಬೇಕು, ಐಟಿ ಕಂಪನಿಗಳು, ಪ್ರಮುಖ ಕಾಲೇಜುಗಳು ತಲೆಎತ್ತರಬೇಕು. ಇಲ್ಲಿನ ಮೂಲ ಸೌಕರ್ಯಗಳಿಗೆ ಒತ್ತು ನೀಡುವ ಜೊತೆಗೆ ನಗರಗಳು, ಜಿಲ್ಲೆಗಳು ಮಾದರಿಯಾಗುವಂತೆ ಅಭಿವೃದ್ಧಿ ಕಾಣಬೇಕು ಎಂಬ ಹೆಬ್ಬಯಕೆ ಹೊಂದಿದ್ದಾರೆ. ಆದರೆ ಅವರ ಕನಸನ್ನು ಕನಸಾಗಿಯೇ ಉಳಿಸುವಲ್ಲಿ ಈ ಭಾಗದ ರಾಜಕಾರಣಿಗಳ ಪಾತ್ರ ಮಹತ್ವದ್ದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+