ಭಾರತ ಬಂದ್ : ಕರ್ನಾಟಕದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜಾ ಇದೆ, ಇಲ್ಲ

ಬೆಂಗಳೂರು, ಜನವರಿ 07 : ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸಾರಿಗೆ ಸಂಚಾರ ಎರಡು ದಿನಗಳ ಕಾಲ ಸ್ಥಬ್ದಗೊಳ್ಳುವ ನಿರೀಕ್ಷೆ ಇದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನಗರದ ಹಲವು ಖಾಸಗಿ ಕಾಲೇಜುಗಳು ಸಹ ರಜೆ ಘೋಷಣೆ ಮಾಡಿವೆ. ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಆಗಮಿಸುವುದಕ್ಕೂ ತೊಂದರೆ ಆಗಲಿದೆ.

ಜನವರಿ 8 ಮತ್ತು 9ರಂದು ಎರಡು ದಿನಗಳ ಕಾಲ ಮುಷ್ಕರ ನಡೆಯಲಿದೆ. ಆದರೆ, ಜನವರಿ 8ರಂದು ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿಲ್ಲ.

Bharat Bandh : Holiday for school and colleges

ಪರೀಕ್ಷೆ ಮುಂದೂಡಿಕೆ : ಎರಡು ದಿನದ ಮುಷ್ಕರದ ಹಿನ್ನಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜನವರಿ 8 ಮತ್ತು 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಜನವರಿ 24 ಮತ್ತು 25ರಂದು ನಡೆಸಲಾಗುತ್ತದೆ.

ಯಾವ ಜಿಲ್ಲೆಯಲ್ಲಿ ರಜೆ ಇಲ್ಲ

* ಶಿವಮೊಗ್ಗ
* ಹಾವೇರಿ
* ಯಾದಗಿರಿ
* ಬೆಳಗಾವಿ
* ದಕ್ಷಿಣ ಕನ್ನಡ
* ಉಡುಪಿ
* ರಾಮನಗರ
* ಕೊಡಗು
* ಹಾಸನ
* ಚಿಕ್ಕಮಗಳೂರು
* ಉತ್ತರ ಕನ್ನಡ
* ವಿಜಯಪುರ

ಯಾವ ಜಿಲ್ಲೆಗಳಲ್ಲಿ ರಜೆ ಇದೆ

* ಕೋಲಾರ
* ದಾವಣಗೆರೆ
* ಕೊಪ್ಪಳ
* ಚಿಕ್ಕಬಳ್ಳಾಪುರ
* ಕಾರವಾರ
* ರಾಯಚೂರು
* ಚಿತ್ರದುರ್ಗ
* ಧಾರವಾಡ
* ಬಳ್ಳಾರಿ
* ಚಾಮರಾಜನಗರ
* ಮೈಸೂರು
* ಮಂಡ್ಯ
* ತುಮಕೂರು
* ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+