Power Supply: ವಿದ್ಯುತ್ ಸಂಬಂಧಿ ದೂರುಗಳಿಗೆ ವಾಟ್ಸಾಪ್ ಸಹಾಯವಾಣಿ: BESCOM Updates
ಬೆಂಗಳೂರು, ಏಪ್ರಿಲ್ 06: ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತದೆ. ಈ ಕಾರಣದಿಂದ ಜನರು ಹಗಲು ರಾತ್ರಿಯೆನ್ನದೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೀವು ಈ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಪರಿಹಾರವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ನೀಡಿದೆ.
ಸಾರ್ವಜನಿಕರು ನಿಮ್ಮ ವಿದ್ಯುತ್ ಸಂಬಂಧಿತ ದೂರುಗಳನ್ನು ದಾಖಲಿಸುವುದು, ಸಮಸ್ಯೆಗೆ ಉಂಟಾದ ಪರಿಹಾರ, ಇತರ ಮಾಹಿತಿ ಪಡೆದುದು ಸುಲಭ. ಇದಕ್ಕಾಗಿ ಬೆಸ್ಕಾಂ ರಾಜ್ಯದಲ್ಲಿ ಜಿಲ್ಲಾವಾರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದೆ. ಈ ಸಂಖ್ಯೆಗಳ ಸಹಾಯದಿಂದ ನೀವು ದೂರುಗಳನ್ನು ದಾಖಲಿಸಬಹುದೆಂದು ಬೆಸ್ಕಾಂ ಪ್ರಕಟಣೆ ಭಾನುವಾರ ಮಾಹಿತಿ ನೀಡಿದೆ.

ಬೆಸ್ಕಾಂ ಸಂಖ್ಯೆಗಳು ಯಾವುವು, ಪಟ್ಟಿ ಇಲ್ಲಿದೆ ನೋಡಿ
ಬೆಂಗಳೂರು ನಗರ ವಾಸಿಗಳು ಗಮನಿಸಿ
ಬೆಂಗಳೂರು ದಕ್ಷಿಣ ವೃತ್ತ : 8277884011
ಬೆಂಗಳೂರು ಪಶ್ಚಿಮ ವೃತ್ತ : 8277884012
ಬೆಂಗಳೂರು ಪೂರ್ವ ವೃತ್ತ: 8277884013
ಬೆಂಗಳೂರು ಉತ್ತರ ವೃತ್ತ : 8277884014 ಸಂಖ್ಯೆಗಳಿಗೆ ಸಂಪರ್ಕಿಸಬೇಕು.
ಜಿಲ್ಲಾವಾರು ಮಾಹಿತಿಗೆ ಗಮನಿಸಿ
ಕೋಲಾರ : 8277884015
ಚಿಕ್ಕಬಳ್ಳಾಪುರ : 8277884016
ಬಿ.ಆರ್.ಸಿ : 8277884017
ರಾಮನಗರ : 8277884018
ತುಮಕೂರು : 8277884019
ಚಿತ್ರದುರ್ಗ : 8277884020
ದಾವಣಗೆರೆ : 8277884021
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯ ಪ್ರತಿ ಜಿಲ್ಲೆಗಳ ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು, ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ, ವೀಡಿಯೊಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಿಸಿದ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ ದೂರು ನೀಡಬೇಕು. ಅಲ್ಲಿನ ಸ್ಥಳಿಯ ಸಿಬ್ಬಂಧಿ ತ್ವರಿತ ಪರಿಹಾರ ನೀಡುತ್ತಾರೆ ಎಂದು ಬೆಸ್ಕಾಂ ಅಧಿಕಾರಿಗಳು ಗ್ರಾಹಕರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಬೇಸಿಗೆಯಲ್ಲಿ ಅಷ್ಟಾಗಿ ನೀರಿನ ಕೊರತೆ ಕಂಡು ಬಂದಿಲ್ಲ ಎನ್ನಲಾಗಿದೆ. ಹೀಗಿದ್ದರು ಸರ್ಕಾರ, ಹಳ್ಳಿ, ಸಿಟಿ ಎನ್ನದೇ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಇದಲ್ಲದೇ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (KERC) ಪ್ರಸ್ತಕ್ತ ವರ್ಷದಿಂದ ವಿದ್ಯುತ್ ಪ್ರತಿ ಯೂನಿಟ್ ದರ 36 ಪೈಸೆ ಹೆಚ್ಚಿಸಿದೆ. ಇದರ ಬೆನ್ನಲ್ಲೆ ಬಿರುಗಾಳಿ ಮಳೆಗೆ, ವಿದ್ಯುತ್ ಕಂಬ ಬೀಳುವುದು, ಟಿಸಿ ಸುಡುವುದು. ಪದೇ ಪದೇ ಕರೆಂಟ್ ಕಟ್ ಹಾಗೂ ಇನ್ನಿತರ ವಿದ್ಯುತ್ ಸರಬರಾಜು ಸಂಬಂಧ ತೊಂದರೆ ಆಗುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು, ಸೂಕ್ತ ಪರಿಹಾರ ತ್ವರಿತವಾಗಿ ಪಡೆಯಲು ನಾಗರಿಕರು ಈ ಮೇಲಿನ ಸಂಖ್ಯೆಗೆ ಸಮಸ್ಯೆ, ದೂರು ವಾಟ್ಸಾಪ್ ಮಾಡುವಂತೆ ಬೆಸ್ಕಾಂ ಕೋರಿದೆ.












Click it and Unblock the Notifications