ಕರೆಂಟ್ ಬಿಲ್ ಇನ್ನು ಕಟ್ಟಿಲ್ಲ ದಂಡ ಕಟ್ಟಬೇಕು ಅಂತ ಯೋಚಿಸ್ತಿದ್ದಿರಾ?; ಭಯ ಬೇಡ ದಂಡ ಕಟ್ಟೋ ಹಾಗಿಲ್ಲ!

ಬೆಂಗಳೂರು, ಮಾರ್ಚ್ 23: ನಿಗದಿತ ದಿನಾಂಕದ ಮೊದಲು ಮಾರ್ಚ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ ಅಂದರೆ ಚಿಂತಿಸಬೇಡಿ. ಏಕೆಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಯಾವುದೇ ವಿಳಂಬ ಶುಲ್ಕವನ್ನು ವಿಧಿಸದಿರಲು ಮತ್ತು ಈ ತಿಂಗಳವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು ನಿರ್ಧರಿಸಿದೆ.

ಮಾರ್ಚ್ 10 ರಿಂದ ಮಾರ್ಚ್ 19 ರವರೆಗೆ ಬೆಸ್ಕಾಂ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿದ್ದ ಕಾರಣ ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್) ಆನ್‌ಲೈನ್ ಸೇವೆಗಳು ಲಭ್ಯವಿರಲಿಲ್ಲ. ಮಾರ್ಚ್ 20 ರಿಂದ ಈ ಸೇವೆಗಳು ಪುನರಾರಂಭಗೊಂಡಿದೆ. ಆದರೂ, ಆನ್‌ಲೈನ್ ಪೋರ್ಟಲ್‌ನಲ್ಲಿನ ದೋಷಗಳಿಂದಾಗಿ ಅನೇಕ ಗ್ರಾಹಕರು ತಮ್ಮ ಬಿಲ್‌ಗಳನ್ನು ಮಾರ್ಚ್ 20 ಮತ್ತು ಮಾರ್ಚ್ 21 ರಂದು ಪಾವತಿಸಲು ಹೆಣಗಾಡಿದ್ದಾರೆ.

Bescom No late Payment Penalty on March Electricity Bills

ವಿದ್ಯುತ್ ಬಿಲ್ ಪಾವತಿಸಲು ಮಾರ್ಚ್ 20 ಕೊನೆಯ ದಿನಾಂಕವಾಗಿರುವುದರಿಂದ ಬೆಸ್ಕಾಂ ಕಚೇರಿಗಳ ಹೊರಗೆ ದೊಡ್ಡ ಸರತಿ ಸಾಲುಗಳು ಕಂಡುಬಂದಿವೆ. ಅಲ್ಲಿಯೂ ತಾಂತ್ರಿಕ ದೋಷದಿಂದ ಕೆಲ ಗ್ರಾಹಕರಿಗೆ ಪಾವತಿ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿಯೇ ವಿದ್ಯುತ್ ಸರಬರಾಜು ಕಂಪನಿ ಈ ತಿಂಗಳ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ದಂಡ ವಿಧಿಸುತ್ತಿಲ್ಲ.

"ಕರ್ನಾಟಕದಾದ್ಯಂತ, ಎಲ್ಲಾ ನಗರ ಮುನ್ಸಿಪಲ್ ಕೌನ್ಸಿಲ್ (CMC) ಮತ್ತು ಟೌನ್ ಮುನ್ಸಿಪಲ್ ಕೌನ್ಸಿಲ್ (TMC) ಮಿತಿಗಳಲ್ಲಿ, ಮೂಲಭೂತವಾಗಿ ನಗರ ಪ್ರದೇಶಗಳು, ಬಿಲ್‌ಗಳ ವಿಳಂಬ ಪಾವತಿಗೆ ಯಾವುದೇ ದಂಡವಿರುವುದಿಲ್ಲ. ಇದು ಗ್ರಾಮೀಣ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಈ ನಿಯಮವು ಈ ತಿಂಗಳಿಗೆ ಮಾತ್ರ ಅನ್ವಯಿಸುತ್ತದೆ" ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Bescom No late Payment Penalty on March Electricity Bills

ವಿಳಂಬ ವಿದ್ಯುತ್ ಬಿಲ್ ಪಾವತಿಗಿಲ್ಲ, ಬಡ್ಡಿ

ಈ ಸಂಬಂಧ ಬೆಸ್ಕಾಂ ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಎಲ್ಲಾ ಎಸ್ಕಾಂಗಳ ಆನ್ ಲೈನ್ ವಿದ್ಯುತ್ ಸೇವೆಗಳು ಸ್ಥಗಿತಗೊಂಡಿದ್ದು, ಇದೀಗ ಪುನಾರಂಭಗೊಂಡಿದೆ. ಈ ತಿಂಗಳ 30ರೊಳಗೆ ಎಲ್ಲಾ ಆನ್ ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ಇಂಧನ ಇಲಾಖೆ ತಿಳಿಸಿದೆ.

ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಅದು ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಲಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+