ಮಾಜಿ ಗೆಳತಿಯ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಟೆಕ್ಕಿ ಬಂಧನ

Subscribe to Oneindia Kannada
ಚಿಕ್ಕಮಗಳೂರು, ಫೆಬ್ರವರಿ 17: ಮಾಜಿ ಗೆಳತಿಯ ಸೆಕ್ಸ್ ವಿಡಿಯೋವನ್ನು ಅಶ್ಲೀಲ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ ಟೆಕ್ಕಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ಹೇಮಂತ್ ಬಂಧಿತ ಆರೋಪಿ. ಈತನ ಜತೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯೊಬ್ಬಳು ಕಳೆದ ಎರಡು ವರ್ಷದಿಂದ ಲಿವ್ ಇನ್ ಸಂಬಂಧದಲ್ಲಿದ್ದಳು. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಯುವಕ ಮತ್ತು ಯುವತಿ ಕಳೆದ ಮೂರು ತಿಂಗಳಿನಿಂದ ಬೇರೆ ಬೇರೆಯಾಗಿದ್ದರು.

 Bengaluru techie was arrested in a sex tape upload case of his ex girlfriend

ಇತ್ತೀಚೆಗೆ ಎರಡು ವಾರದ ಕೆಳಗೆ ಟೆಕ್ಕಿ ಆಕೆಯ ಸೆಕ್ಸ್ ವಿಡೀಯೋವನ್ನು ಆಶ್ಲೀಲ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವತಿ ತಕ್ಷಣ "ನನ್ನ ಸೆಕ್ಸ್ ವಿಡಿಯೋವನ್ನು ಪೋರ್ನ್ ವೆಬ್ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದಾನೆ," ಎಂದು ಯುವಕನ ವಿರುದ್ದ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರನ್ನಾಧರಿಸಿ ಕಾರ್ಯಾಚರಣೆ ನಡೆಸಿರುವ ಚಿಕ್ಕಮಗಳೂರು ಪೊಲೀಸರು ಹೇಮಂತ್ ನನ್ನು ಬಂಧಿಸಿದ್ದಾರೆ.

ಎರಡು ವರ್ಷದ ಹಿಂದೆ ಯುವಕ ಮತ್ತು ಯುವತಿ ಜತೆಗಿದ್ದಾಗ ಈ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಅವರಿಬ್ಬರು ಬೇರೆ ಬೇರೆಯಾಗುವ ಮೊದಲು, ಚಿಕ್ಕಮಗಳೂರಿಗೆ ಹಿಂದಿರುಗುವಂತೆ ಮತ್ತು ಕಾಲೇಜು ಬದಲಿಸುವಂತೆ ಆತ ನನಗೆ ಬೆದರಿಕೆ ಒಡ್ಡುತ್ತಿದ್ದ ಎಂಬುದಾಗಿ ಯುವತಿ ದೂರಿದ್ದಾಳೆ, ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾಹಿತಿ ನೀಡಿದ್ದಾರೆ.

ನಾವು ಆಕೆಯನ್ನು ಮತ್ತು ಆತನನ್ನು ಜತೆಯಾಗಿಸಲು ಪ್ರಯತ್ನ ಪಟ್ಟೆವು ಆದರೆ ಯುವತಿ ಒಪ್ಪಿಲಿಲ್ಲ ಎಂದೂ ಅಣ್ಣಾಮಲೈ ಹೇಳಿದ್ದಾರೆ.

ಸದ್ಯ ಯುವಕನನ್ನು ಆತನ ಕಚೇರಿಯಿಂದಲೇ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 29 year old Hemanth was arrested by the Chikkamagalur Police on Thursday, allegedly he had uploaded a sex tape of his ex girlfriend on a porn website.
Please Wait while comments are loading...