Karnataka Highway: ಕಡೂರು ಮಾರ್ಗದ ಹೆದ್ದಾರಿ ಸವಾರರಿಗೆ ಗುಡ್‌ನ್ಯೂಸ್

ಬೆಂಗಳೂರು, ಜನವರಿ 09: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಗೊಳ್ಳುತ್ತಿದ್ದು, ವರ್ಷಗಳಿಂದ ನಡೆಯುತ್ತಿರುವ ಬೆಂಗಳೂರು-ಶಿವಮೊಗ್ಗ ಹೆದ್ದಾರಿಯಲ್ಲಿ (NH 206) ಗಣನೀಯ ಪ್ರಗತಿ ಸಾಧಿಸಲಾಗಿದೆ. ಸುಮಾರು 300 ಕಿಲೋ ಮೀಟರ್ ಉದ್ದದ ಈ ರಸ್ತೆಯಲ್ಲಿ ಅಲ್ಲಲ್ಲಿ ಕಾಮಗಾರಿಗಳು, ಅಗಲೀಕರಣ ಮತ್ತು ಬೈಪಾಸ್ ನಿರ್ಮಾಣ ಕಾರ್ಯ ಒಂದೊಂದಾಗೆ ಅಂತಿಮ ಹಂತಕ್ಕೆ ಬರುತ್ತಿವೆ. ಇದೀಗ ಕಡೂರು ಮಾರ್ಗವಾಗಿ ಸಾಗುವ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಬೆಂಗಳೂರಿನಿಂದ ಕಡೂರು ಸುಮಾರು 236 ಕಿಲೋ ಮೀಟರ್ ದೂರವಿದೆ. ಅಲ್ಲಿಂದ ಶಿವಮೊಗ್ಗ ಸುಮಾರು 68 ಕಿಲೋ ಮೀಟರ್ ದೂರವಿದೆ. ಕಡೂರು ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ವಾಹನ ಸವಾರರಿಗೆ ಕಡೂರು ಬೈಪಾಸ್ ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಇದೀಗ ಕಡೂರು ಬೈಪಾಸ್ (Kadur Bypss Open) ಒನ್ ವೇ ಸಂಪೂರ್ಣ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ.

Bengaluru-Shivamogga Highway NH-69 Kadur Bypass Open For Public

ಕಡೂರು ಬೈಪಾಸ್ ಎರಡು ಬದಿಗಳ ಹೆದ್ದಾರಿ ರಸ್ತೆ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಕೇವಲ ಒಂದು ಬದಿಯ ಹೆದ್ದಾರಿ ರಸ್ತೆ ಪೂರ್ಣಗೊಂಡಿದೆ. ಕಡೂರು ಸುತ್ತುವರಿದು ಸಾಗುವ ಈ ರಸ್ತೆಯ ಒನ್‌ವೇ ಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಮತ್ತೊಂದು ಬದಿಯ ಕಾಮಗಾರಿ ಇನ್ನೇನು ಪೂರ್ತಿಯಾಗಲಿದೆ. ಅಲ್ಪ ಕೆಲಸ ಬಾಕಿ ಎಂದು ಮೂಲಗಳು ತಿಳಿಸಿವೆ.

ತಪ್ಪಿದ ಕಿರಿ ಕಿರಿ, ಸಮಯ ಉಳಿತಾಯ

ಈವರೆಗೆ ಬೈಪಾಸ್ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಕಡೂರು ಊರಿನ ಮೂಲಕವೇ ಶಿವಮೊಗ್ಗ ಮಾರ್ಗದಲ್ಲಿ ಸಾಗಬೇಕಿತ್ತು. ಹೆಚ್ಚು ಸಮಯ ಹಿಡಿಯುತ್ತಿತ್ತು. ಇದೀಗ ಬೈಪಾಸ್ ಮೂಲಕ ಕೆಲವೇ ನಿಮಿಷಗಳಲ್ಲಿ ಊರನ್ನು ದಾಟಿಬಿಡಬಹುದಾಗಿದೆ. ಇದರಿಂದ ಸಣ್ಣ, ಲಘು ಹಾಗೂ ದೊಡ್ಡ ದೊಡ್ಡ ವಾಹನಗಳ ಸವಾರರು ಖಷಿಯಾಗಿದ್ದಾರೆ.

Bengaluru-Shivamogga Highway NH-69 Kadur Bypass Open For Public

ಎರಡು ಬದಿ ಬೈಪಾಸ್ ರಸ್ತೆ ಶೀಘ್ರವೇ ಓಪನ್

ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ತೆರಿಕೇರೆ ಮತ್ತು ಬಾಣಾವರ ಮಧ್ಯೆ ಬರುವ ಕಡೂರಿನ ಬೈಪಾಸ್ ಬರುತ್ತದೆ. ಇದನ್ನು ಕಡೂರು-ಬಿರೂರು ಬೈಪಾಸ್ ಅಂತಲೂ ಕರೆಯುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಎರಡು ಬದಿಯಲ್ಲಿ ಬೈಪಾಸ್ ತೆರೆಯಲಿದೆ ಎಂದು ಭಾರತೀಯ ಹೆದ್ದಾರಿ ಪ್ರಾಧಿಕಾರ (NHAI) ಮಾಹಿತಿ ನೀಡಿದೆ.

ಬೆಂಗಳೂರಿನಿಂದ ದಾಬಾಸ್‌ಪೇಟೆ, ತುಮಕೂರು, ಗುಬ್ಬಿ, ಕೆಜಿ ಕ್ರಾಸ್ ತಿಪಟೂರು, ಅರಸಿಕೆರೆ, ಬಾಣಾವರ, ಕಡೂರು, ಬಿರೂರು, ತರೀಕರೆ, ಭದ್ರಾವತಿ ಮಾರ್ಗವಾಗಿ ಶಿವಮೊಗ್ಗ ಕ್ಕೆ ವಾಹನಗಳು ಸಂಚರಿಸುತ್ತವೆ. ಲಕ್ಷಾಂತರ ವಾಹನಗಳಿಗೆ ಕಡೂರು ಬೈಪಾಸ್ ಅನುಕೂಲ ಒದಗಿಸುತ್ತದೆ. ಕಡೂರು ಮಾರ್ಗವಾಗಿ ಓಡಾಡುವ ಬಾಣವಾರ, ಭದ್ರಾವತಿ ಸೇರಿದಂತೆ ವಿವಿಧ ಪಟ್ಟಣಗಳ ಸವಾರರಿಗೂ ಈ ಬೈಪಾಸ್ ಹೆಚ್ಚು ಸಹಾಯವಾಗಲಿದೆ.

ಇನ್ನೂ ತುಮಕೂರು ಹಾಗೂ ಶಿವಮೊಗ್ಗ ಹೆದ್ದಾರಿ ಅಲ್ಲಲ್ಲಿ ಡಿವೈಡರ್, ರಸ್ತೆ ವಿಭಜಕ, ಕ್ರಾಸ್‌ ಮುಂತಾದ ಮೂಲಸೌಕರ್ಯಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಕೆಲಸವು ಬೇಗ ಪೂರ್ಣಗೊಳ್ಳಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+