ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bengaluru – Mysuru Expressway : ಬಡವರ ಬದುಕಿಗೆ ಕಂಟಕವಾದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ

|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ರಹದಾರಿಯಾಗಿದ್ದರೆ, ಈ ಹೆದ್ದಾರಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದ ಜನರಿಗೆ ಕಂಟಕವಾಗಿ ಪರಿಣಮಿಸಿದೆ.

ಚನ್ನಪಟ್ಟಣ ಪಟ್ಟಣದಲ್ಲಿ ಅದರ ಪ್ರಸಿದ್ಧ ವರ್ಣರಂಜಿತ ಮರದ ಆಟಿಕೆಗಳನ್ನು ಮಾರಾಟ ಮಾಡುವ ಮಳಿಗೆಗಳು ಈಗ ನಿರ್ಜನವಾಗಿವೆ. ವಡೆಗಳಿಗೆ ಹೆಸರಾದ ಮದ್ದೂರಿನಲ್ಲಿ ಅಂಗಡಿಗಳು ಮುಚ್ಚಿವೆ ಎಂಬ ಸೂಚನಫಲಕ ಕಂಡು ಬರುತ್ತಿದೆ. ಇದರಂತೆ ರಾಮನಗರ, ಚನ್ನಪಟ್ಟಣ, ಮದ್ದೂರು ಮತ್ತು ಮಂಡ್ಯದಾದ್ಯಂತ ಸಾವಿರಾರು ಮಾರಾಟಗಾರರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ತಮ್ಮ ಜೀವನೋಪಾಯಕ್ಕೆ ಬಾರಿ ಸಂಕಷ್ಟ ತಂದಿದೆ. ಈ ರಸ್ತೆಯಿಂದ ವ್ಯಾಪಾರಸ್ಥರಿಗೆ ಶೇ. 60% ಆದಾಯವನ್ನು ಕಡಿಮೆ ಮಾಡಿದೆ.

5 ವರ್ಷದಲ್ಲಿ ಕರ್ನಾಟಕದಲ್ಲಿ ಜನರು ಕಟ್ಟಿದ ಟೋಲ್‌ ಒಟ್ಟು ಮೊತ್ತ 10,000 ಕೋಟಿ5 ವರ್ಷದಲ್ಲಿ ಕರ್ನಾಟಕದಲ್ಲಿ ಜನರು ಕಟ್ಟಿದ ಟೋಲ್‌ ಒಟ್ಟು ಮೊತ್ತ 10,000 ಕೋಟಿ

ಚನ್ನಪಟ್ಟಣದ ಆಟಿಕೆ ಮಾರಾಟಗಾರ ಚಂದ್ರಶೇಖರ್, ವಾರಾಂತ್ಯದಲ್ಲಿ, ಅಂಗಡಿಯು 20,000 ರೂಪಾಯಿ ಮೌಲ್ಯದ ವಹಿವಾಟು ಆಗುತ್ತಿತ್ತು. ಈಗ ನಾವು ಕೇವಲ 4,000 ರೂಪಾಯಿ ಗಳಿಸುತಿದ್ದೇವೆ."ಕಳೆದ ಎರಡು ಮೂರು ತಿಂಗಳುಗಳಲ್ಲಿ, ಬಾಡಿಗೆಗೆ ಇರುವ ಅನೇಕರು ಅಂಗಡಿಗಳನ್ನು ಮುಚ್ಚಿಕೊಂಡು ಹೋಗಿದ್ದಾರೆ ಎಂದು ಡಿಚ್‌ ವರದಿ ಮಾಡಿದೆ.

ಚಿಲ್ಲರೆ ವ್ಯಾಪಾರಿಗಳೂ ತಮ್ಮ ಭವಿಷ್ಯದ ಬಗ್ಗೆ ಚಿಂತಕ್ರಾಂತರಾಗಿದ್ದಾರೆ. ವ್ಯಾಪಾರ ತೀವ್ರವಾಗಿ ಕುಸಿದಿದ್ದು ಮೈಸೂರಿಗೆ ಹೋಗುವ ಪ್ರಯಾಣಿಕರು ಚನ್ನಪಟ್ಟಣದಲ್ಲಿ ವಾಹನ ನಿಲ್ಲಿಸಿ ಏನನ್ನಾದರೂ ಖರೀದಿಸಿಕೊಂಡು ಹೋಗುತ್ತಿದ್ದರು. ಈಗ ಅದು ಇಲ್ಲದಾಗಿದೆ ಎಂದು ಕಾವೇರಿ ಆಟಿಕೆ ಅಂಗಡಿಯ ಚಿಲ್ಲರೆ ಕೆಲಸಗಾರ ಅಹಮದ್ ಹೇಳುತ್ತಾರೆ. ಹಲವಾರು ಅಂಗಡಿಗಳು ಸಂಬಳವನ್ನು ಕಡಿತಗೊಳಿಸಿವೆ. ಮತ್ತೆ ಕೆಲವು ಉದ್ಯೋಗಿಗಳನ್ನು ತೆಗೆದುಹಾಕಿವೆ ಎಂದು ಅಹ್ಮದ್ ಅವರ ಸಹೋದ್ಯೋಗಿ ಬಾಬು ಹೇಳಿದ್ದಾರೆ.

"ನಾವು ಈಗ ದೈನಂದಿನ ವೇತನದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮರುದಿನ ಕೆಲಸವಿದೆಯೇ ಎಂಬ ಖಾತ್ರಿಯಿಲ್ಲ ಎಂದು ಅವರು ಹೇಳುತ್ತಾರೆ. ದಶಪಥದ 117 ಕಿಮೀ ಎಕ್ಸ್‌ಪ್ರೆಸ್‌ವೇ ಇನ್ನೂ ಉದ್ಘಾಟನೆಯಾಗಬೇಕಿದೆ. ಆದರೆ ಬಹುತೇಕ ಸಂಚಾರಕ್ಕೆ ಮುಕ್ತವಾಗಿದೆ. ಇದು 6 ಬೈಪಾಸ್‌ಗಳನ್ನು ಹೊಂದಿದೆ. ಅದರಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಇವೆಲ್ಲವೂ ಈಗ ಸಂಚಾರಕ್ಕೆ ಮುಕ್ತವಾಗಿದೆ. ಯೋಜನೆಯ ಒಟ್ಟು ವೆಚ್ಚ 9,551 ಕೋಟಿ ರೂಪಾಯಿಗಳಾಗಿದೆ.

ಇನ್ನೂ ವಾಹನ ಸವಾರರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಮೂರರಿಂದ ನಾಲ್ಕು ಗಂಟೆಗಳು ತೆಗೆದುಕೊಳ್ಳುತ್ತದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಹೋದರೆ ಇದು ಕೇವಲ ಎರಡು ಗಂಟೆಗಳನ್ನು ತೆಗೆದುಕೊಳ್ಳಬಹುದು. ಪ್ರಯಾಣಿಕರು ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಮೈಸೂರು ರಸ್ತೆಯನ್ನು ಆಗಾಗ್ಗೆ ಬಳಸುವ ಚಾಲಕರೊಬ್ಬರು ಹೇಳುತ್ತಾರೆ.

ಸೇವೆಗಳ ಮೇಲೆ ನೇರ ಪರಿಣಾಮ

ಸೇವೆಗಳ ಮೇಲೆ ನೇರ ಪರಿಣಾಮ

ಉದಾಹರಣೆಗೆ ಚೆನ್ನೈ ಮತ್ತು ಮುಂಬೈಯನ್ನು ಸಂಪರ್ಕಿಸುವ ಇತರ ಎಕ್ಸ್‌ಪ್ರೆಸ್‌ವೇಗಳ ಪರಿಣಾಮಗಳನ್ನು ಅಧ್ಯಯನ ಮಾಡಿದ ಸಂಶೋಧಕರು, ನೆರೆಹೊರೆಯ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ಸಣ್ಣ ವ್ಯಾಪಾರಗಳು ಸೇರಿದಂತೆ ನೇರ ಸೇವೆಗಳಿಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕೆಲವೇ ನಿರ್ಗಮನಗಳ ಕಾರಣ ಪಟ್ಟಣಗಳಿಗೆ ಸೀಮಿತ ಪ್ರವೇಶವಿದೆ. ಇದು ಈ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರಕ್ಕಾಗಿ ರಸ್ತೆಯ ಮೇಲೆ ಅವಲಂಬಿತ

ವ್ಯಾಪಾರಕ್ಕಾಗಿ ರಸ್ತೆಯ ಮೇಲೆ ಅವಲಂಬಿತ

ಹೆದ್ದಾರಿಯ ಉದ್ದಕ್ಕೂ 10 ಕಿಮೀ ಬಫರ್ ವಲಯದಲ್ಲಿ 2018 ರಲ್ಲಿ 20.27% ಭೂಪ್ರದೇಶವನ್ನು ನಗರೀಕರಣಗೊಳಿಸಲಾಯಿತು. 2021ರಲ್ಲಿ ನಗರೀಕರಣದ ಭೂಪ್ರದೇಶವು 22.81% ಕ್ಕೆ ಏರಿತು. ನಿರ್ದಿಷ್ಟವಾಗಿ ಮಂಡ್ಯ ಮತ್ತು ರಾಮನಗರವು ರಸ್ತೆ ಸಂದಿಗಳಿಗೆ ನೆಲೆಯಾಗಿರುವುದರಿಂದ ವ್ಯಾಪಾರಕ್ಕಾಗಿ ರಸ್ತೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಪಟ್ಟಣಗಳು ​​ಬೈಪಾಸ್‌ಗಳಿಂದ 5 ಕಿ.ಮೀ ದೂರ

ಪಟ್ಟಣಗಳು ​​ಬೈಪಾಸ್‌ಗಳಿಂದ 5 ಕಿ.ಮೀ ದೂರ

ಎಕ್ಸ್‌ಪ್ರೆಸ್‌ವೇ, ನಿಸ್ಸಂದೇಹವಾಗಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಇದು ರಸ್ತೆ ಸಂಚಾರವನ್ನು ಅವಲಂಬಿಸಿರುವ ಹಲವಾರು ಪಟ್ಟಣಗಳನ್ನು ಬೈಪಾಸ್ ಮಾಡುತ್ತದೆ. ಪಟ್ಟಣಗಳು ​​ಬೈಪಾಸ್‌ಗಳಿಂದ 1 ಕಿ.ಮೀ ನಿಂದ 5 ಕಿ.ಮೀ ವರೆಗಿನ ದೂರದಲ್ಲಿವೆ. ಟ್ರಾಫಿಕ್ ಈಗಾಗಲೇ ಎಕ್ಸ್‌ಪ್ರೆಸ್‌ವೇಗೆ ಸ್ಥಳಾಂತರಗೊಂಡಿರುವುದರಿಂದ, ವ್ಯಾಪಾರವು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಮಾರಾಟಗಾರರು ಆತಂಕವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ವಿಶೇಷ ಮಳಿಗೆಗಳಿಗೆ ಜಾಗ

ಪ್ರಾದೇಶಿಕ ವಿಶೇಷ ಮಳಿಗೆಗಳಿಗೆ ಜಾಗ

ಚನ್ನಪಟ್ಟಣ ಬಳಿ 30 ಎಕರೆ ವಿಸ್ತೀರ್ಣದಲ್ಲಿ ತಂಗುದಾಣ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಇದು ರಸ್ತೆಯ ಎರಡೂ ಬದಿಗಳಿಗೆ ಪ್ರವೇಶವನ್ನು ಹೊಂದಿರುತ್ತದೆ ಮತ್ತು ರೆಸ್ಟೋರೆಂಟ್‌ಗಳು, ಪ್ರಾದೇಶಿಕ ವಿಶೇಷ ಮಳಿಗೆಗಳು ಮತ್ತು ಇತರರಿಗೆ ಸ್ಥಳವನ್ನು ನೀಡಲಾಗುತ್ತದೆ. ಮಂಡ್ಯ, ಮದ್ದೂರು, ಚನ್ನಪಟ್ಟಣ ಮತ್ತು ರಾಮನಗರದ ಜನರು ಕಷ್ಟದಲ್ಲಿದ್ದಾರೆ ಎಂದು ನನಗೆ ತಿಳಿದಿದೆ, ಆದರೆ ನಾವು ಎಕ್ಸ್‌ಪ್ರೆಸ್‌ವೇ ನಿರ್ಮಿಸುತ್ತಿದ್ದೇವೆ. ಆದ್ದರಿಂದ ನಾವು ಅವರನ್ನು ಕೈಗಾರಿಕೆಗಳಲ್ಲಿ ಕೆಲಸ ನೀಡುತ್ತೇವೆ. ಅವರು ತಮ್ಮ ಮಕ್ಕಳಿಗಾಗಿ ದೊಡ್ಡ ಕನಸು ಕಾಣಬಹುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

English summary
While the Bengaluru Mysuru Expressway is a traficfree road for motorists, it has become a thorn in the side for the people doing small business on this highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X