ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ರೈಲು ಸಂಚಾರ ಸದ್ಯಕ್ಕಿಲ್ಲ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟ್ ರಸ್ತೆ ಮಾತ್ರ ಬಂದ್ ಆಗಿಲ್ಲ. ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಮಳೆಯಿಂದಾಗಿ ರೈಲು ಮಾರ್ಗಕ್ಕೆ ಭಾರಿ ಹಾನಿಯಾಗಿದೆ.

ಸಕಲೇಶಪುರದ ಯಡಕುಮರಿ ಹಾಗೂ ಕಡಗರವಳ್ಳಿ ನಡುವೆ ಬೆಂಗಳೂರು-ಮಂಗಳೂರು ರೈಲು ಮಾರ್ಗಕ್ಕೆ ಹಾನಿ ಉಂಟಾಗಿದೆ. ಗುಡ್ಡದ ಮಣ್ಣು ಕುಸಿದಿ ಹಳಿಗಳ ಮೇಲೆ ಬಿದ್ದಿದೆ. ಆದ್ದರಿಂದ, ಸದ್ಯ ಬೆಂಗಳೂರು-ಮಂಗಳೂರು ರೈಲು ಸೇವೆ ಆರಂಭವಾಗುವುದು ಅನುಮಾನವಾಗಿದೆ.

ಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ

ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ನಡುವೆ 40 ಕಡೆ ರೈಲ್ವೆ ಹಳಿಯ ಮೇಲೆ ಭೂ ಕುಸಿತವಾಗಿದೆ. ಹಳಿಗಳ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ, ಹಳಿಗಳನ್ನು ಸರಿಪಡಿಸಲು ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಯಡಕುಮರಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 16 ಸಿಬ್ಬಂದಿ ರಕ್ಷಣೆಯಡಕುಮರಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 16 ಸಿಬ್ಬಂದಿ ರಕ್ಷಣೆ

Bengaluru-Mangaluru train will not run soon says Railways

ಮಳೆ ಸುರಿಯುತ್ತಲೇ ಇರುವುದರಿಂದ ಹಳಿಗಳ ಮೇಲಿನ ಮಣ್ಣನ್ನು ತೆರವುಗೊಳಿಸುವುದ ಸವಾಲಾಗಿದೆ. ಬಂಡೆಗಳು ಸಹ ಹಳಿಗಳ ಮೇಲೆ ಬಿದ್ದಿದ್ದು ಹಳಿಗೆ ಹಾನಿಯಾಗಿದೆ. ಬಂಡೆ ತೆರವುಗೊಳಿಸಿ, ಹಳಿಗಳನ್ನು ಜೋಡಿಸಿದ ಮೇಲೆ ರೈಲು ಸಂಚಾರ ಆರಂಭವಾಗಲಿದೆ.

ಮಳೆ, ಭೂ ಕುಸಿತ : ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ರಸ್ತೆ ಬಂದ್ಮಳೆ, ಭೂ ಕುಸಿತ : ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ರಸ್ತೆ ಬಂದ್

ಯಡಕುಮರಿ ರೈಲ್ವೆ ನಿಲ್ದಾಣದ ಎರಡೂ ಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು. ಹೆಲಿಕಾಪ್ಟರ್ ಸಹಾಯದಿಂದ ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ್ದ ಇಲಾಖೆಯ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿತ್ತು.

English summary
Indian Railways Mysuru division said that Bengaluru-Mangaluru train's will not run soon. More than 30 landslide case reported in railway track after heavy rain and landslide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X