BREAKING: ರಾಜ್ಯ ಹೈಕೋರ್ಟ್‌ನಲ್ಲಿ ಜಡ್ಜ್ ಮುಂದೆ ಆತ್ಮಹತ್ಯೆಗೆ ಯತ್ನ: ಕತ್ತು ಕೊಯ್ದುಕೊಂಡ ವ್ಯಕ್ತಿ
ಬೆಂಗಳೂರು, ಏಪ್ರಿಲ್ 03: ಕರ್ನಾಟಕ ರಾಜ್ಯ ಹೈಕೋರ್ಟ್‌ನಲ್ಲಿ ಅಪರೂಪದ ಘಟನೆ ನಡೆದಿದೆ. ನ್ಯಾಯ ಕೊಡುವ ನ್ಯಾಯಮೂರ್ತಿಗಳ ಮುಂದೆಯೇ ಪ್ರಕರಣದ ವಿಚಾರಣೆಗೆ ಬಂದಿದ್ದ ವ್ಯಕ್ತಿ ಬ್ಲೇಡ್‌ನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಬೆಂಗಳೂರಿನಲ್ಲಿರುವ ಹೈಕೋರ್ಟ್ ಹಾಲ್-1ರಲ್ಲಿ ಘಟನೆ ನಡೆದಿದೆ. ಪ್ರಕರಣವೊಂದರ ಅರ್ಜಿ ವಿಚಾರಣೆಯು ಅಂತ್ಯವಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿರುವ ಈ ವ್ಯಕ್ತಿ ನ್ಯಾಯಮೂರ್ತಿಗಳ ಎದುರು ಬಂದಿದ್ದಾರೆ. ಬಳಿಕ ಅರ್ಜಿಯನ್ನು ಕೋರ್ಟ್ ಸಿಬ್ಬಂದಿ ಕೈಗೆ ನೀಡಿ ನೋಡ ನೋಡುತ್ತಿದ್ದಂತೆ ತಾನೇ ತಂದಿದ್ದ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು 'ಟಿವಿ ನೈನ್' ವರದಿ ಮಾಡಿದೆ.

ಸದ್ಯ ಘಟನೆಯಿಂದಾಗಿ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗಿದೆ. ಕೋರ್ಟ್ ಹಾಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಅಲ್ಲಿಯೇ ಇದ್ದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತನಿಖೆ ಕೈಗೆತ್ತಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಕೋರ್ಟ್ ಹಾಲ್ 1ರಲ್ಲಿ ರಕ್ತ ಜೊತೆಗೆ ಬಿದ್ದಿರುವ ಸಣ್ಣ ಚಾಕು ರೀತಿಯ ಬ್ಲೇಡ್ ಅನ್ನು ಯಾರು ಮುಟ್ಟದಂತೆ ಸೂಚಿಸಿದ್ದಾರೆ.
ಮೆಡಿಕಲ್ ಸೀಟು ವಿಚಾರವಾಗಿ ಮನನೊಂದಿದ್ದ ವ್ಯಕ್ತಿ ಎನ್ನಲಾಗಿದೆ. ಸದ್ಯ ಈತ ಏಕೆ ಈ ರೀತಿ ಮಾಡಿಕೊಂಡಿದ್ದಾನೆ ಎಂಬ ಸತ್ಯ ಪೊಲೀಸ್ ತನಿಖೆಯಿಂದ ಹೊರ ಬೀಳಬೇಕಿದೆ. ಹೈಕೋರ್ಟ್‌ನ ಹಾಲ್‌ನೊಳಗೆ ಹೀಗೆ ನಿಷೇಧಿತ ವಸ್ತುಗಳು ಒಳಗೆಡೆ ಒಯ್ದಿದ್ದರ ಬಗ್ಗೆಯು ಪೊಲೀಸರು ತನಿಖೆ ನಡೆಸಲಿದ್ದಾರೆ.
ಹೈಕೋರ್ಟ್‌ನಲ್ಲಿ ಭದ್ರತಾ ಲೋಪ
ನ್ಯಾಯ ನೀಡುವ ಸ್ಥಾನ ಹೈಕೋರ್ಟ್‌ನಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿರುತ್ತದೆ. ಪ್ರತಿಯೊಬ್ಬರನ್ನು ಪರಿಶೀಲಿಸಿ ಬಿಡಲಾಗುತ್ತದೆ. ಪ್ರಮುಖ ದ್ವಾರ ಸೇರಿದಂತೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಹೀಗಿದ್ದರೂ ವ್ಯಕ್ತಿಯೊಬ್ಬ ಬ್ಲೇಡ್ ನಂತಹ ಆಯುಧದೊಂದಿಗೆ ಹೇಗೆ ಒಳಗೆ ಬಂದಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications