ಟ್ರ್ಯಾಕಿಂಗ್ ಮೂಲಕ ಏರ್‌ಪಾಡ್‌ಗಳನ್ನು ಹಿಂತಿರುಗಿಸಿದ ಬೆಂಗಳೂರಿನ ಆಟೋ ಡ್ರೈವರ್

ಬೆಂಗಳೂರು,ನವೆಂಬರ್ 18: ಕೆಲವೊಮ್ಮ ಸಾರ್ವಜನಿಕ ಸಾರಿಗೆಯಲ್ಲಿ ಕೆಲಸದ ಒತ್ತಡದಿಂದಲೋ ಅಥವಾ ಗೊತ್ತು ಗೊತ್ತಿಲ್ಲದೇ ಬೆಲೆಬಾಳುವ ವಸ್ತುಗಳು, ವ್ಯಾಲೆಟ್‌ಗಳಿಂದ ಹಿಡಿದು ಎಲೆಕ್ಟ್ರಾನಿಕ್ ಸಾಧನಗಳವರೆಗೆ, ಪ್ರಯಾಣಿಕರು ತಮ್ಮ ಸವಾರಿಯಲ್ಲಿ ಕಳೆದುಕೊಂಡಿರುವುದನ್ನ ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಕಳೆದುಹೋದ ಮತ್ತು ಕಂಡುಕೊಂಡ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸುವ ಪ್ರಾಮಾಣಿಕ ಜನರ ಬಗ್ಗೆ ಕೆಲವೇ ಕೆಲವು ಕಥೆಗಳ ನೋಡಿರುತ್ತೇವೆ. ಅಂತಹ ಒಂದು ಕಥೆಯನ್ನು ಶಿಡಿಕಾ ಉಬ್ರ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಚಾರವನ್ನ ಹಂಚಿಕೊಂಡಿದ್ದಾರೆ.

ಸಿನಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರಿಗೆ ತಕ್ಕಂತೆ ಬೆಂಗಳೂರಿನ ಆಟೋ ಡ್ರೈವರ್ ತಮ್ಮ ಪ್ರಯಾಣಿಕರು ಕಳೆದುಕೊಂಡ ಏರ್‌ಪಾಡ್‌ಗಳನ್ನ ಮರಳಿಸಿದ್ದಾರೆ.

ಟ್ರ್ಯಾಕಿಂಗ್ ಮೂಲಕ ಮಹಿಳೆಯನ್ನ ಆಟೋ ಡ್ರೈವರ್ ಪತ್ತೆ ಹಚ್ಚಿದ್ದು ಹೇಗೆ..?

ಶಿಡಿಕಾ ಎಂಬ ಮಹಿಳಾ ಪ್ರಯಾಣಿಕರು ಕೆಲಸಕ್ಕೆ ಹೋಗಲು ಆಟೋವನ್ನು ಹತ್ತಿದ್ದರು, ನಂತರ ಹಣವನ್ನ ಪಾವತಿಸುವಾಗ ಆಕಸ್ಮಿಕವಾಗಿ ತನ್ನ ಏರ್‌ಪಾಡ್ಗಳನ್ನು ಬಿಟ್ಟು ಹೋಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಆಟೋ ಡ್ರೈವರ್ ಈ ಏರ್‌ಪಾಡ್‌ಗಳನ್ನ ಮಾಲೀಕರಿಗೆ ತಲುಪಿಸುವವರೆಗೂ ಸುರಕ್ಷಿತವಾಗಿ ಹಿಂದಿರುಗಿಸಲು ನಿರ್ಧರಿಸಿದ್ದರು.

Bangalore Auto Driver Tracks Passenger To Return Her Lost AirPods

ಈ ಜವಾಬ್ದಾರಿಯುತ ಆಟೋ ಡ್ರೈವರ್ ತಮ್ಮ ಆಟೋದಲ್ಲಿ ಬಿಟ್ಟುಹೋದ ಜೋಡಿ ಏರ್‌ಪಾಡ್‌ಗಳನ್ನು ಹಿಂದಿರುಗಿಸಲು ಹೆಚ್ಚುವರಿ ಮೈಲಿ ದೂರ ಸಂಚಾರಿಸಿದ್ದಾರೆ.

ನಂತರ, ತಾಂತ್ರಿಕವಾಗಿ ಹಾಗೂ ಬುದ್ಧಿವಂತಿಕೆಯಿಂದ ಚಾಲಕ ಮಾಲೀಕರನ್ನು ಪತ್ತೆಹಚ್ಚಿದ್ದಾರೆ. ಏರ್‌ಪಾಡ್‌ಗಳನ್ನು ಮಾಲೀಕರ ಸಾಧನಕ್ಕೆ ಸಂಪರ್ಕಿಸುವ ಮೂಲಕ, ಮಾಲೀಕನ ಹೆಸರನ್ನು ಕಂಡುಹಿಡಿಯಲು ಸಾಧ್ಯವಾಯಿದೆ. ನಂತರ ಆಟೋ ಚಾಲಕ ತಮ್ಮ ಫೋನ್ ಪೇ ಡಿಜಿಟಲ್ ವಹಿವಾಟುಗಳ ಪಟ್ಟಿಯಲ್ಲಿ ಅದನ್ನು ಪತ್ತೆಹಚ್ಚಿದ್ದಾರೆ. ಸುಮಾರು ಅರ್ಧ ಗಂಟೆಯಲ್ಲಿ, ಆಟೋ ಚಾಲಕ ಶಿಡಿಕಾಳ ಕಛೇರಿಗೆ ಹಿಂದಿರುಗಿದ್ದಾರೆ. ಆಕೆಯ ಕಛೇರಿಯ ಪ್ರವೇಶದ್ವಾರದಲ್ಲಿದ್ದ ಸೆಕ್ಯುರಿಟಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನ ಮೆರೆದಿದ್ದಾರೆ.

Bangalore Auto Driver Tracks Passenger To Return Her Lost AirPods

ಪ್ರಾಮಾಣಿಕತೆಯಿಂದ ಏರ್ ಪಾಡ್ ಗಳನ್ನ ಆಟೋ ಡ್ರೈವರ್ ಹಿಂತಿರುಗಿಸಿದ್ದನ್ನ ಶಿಡಿಕಾ ಎಂಬ ಮಹಿಳೆ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಇದು ಅನೇಕರ ಗಮನ ಸೆಳೆದಿದ್ದು, ಕೆಲ ನೆಟ್ಟಿಗರಿಂದಲೂ ಪ್ರತಿಕ್ರಿಯೆ ಬಂದಿದೆ. ಈ ಒಂದು ಟ್ವೀಟ್ ಗೆ 9,800 ಲೈಕ್ ಗಳು ಮತ್ತು 600 ರೀ ಟ್ವೀಟ್ ಗಳು ಬಂದಿದೆ. ಕೆಲವರು ಆ ಪ್ರಾಮಾಣಿಕ ಆಟೋ ಡ್ರೈವರ್ ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+