ಮಳೆ.. ಮಳೆ.. ಮುಂದಿನ 48 ಗಂಟೆ ಭರ್ಜರಿ ಮಳೆ!
ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೆ ಕೂಡ ನಿಲುಕುವುದಿಲ್ಲ. ಯಾಕಂದ್ರೆ ಮನುಷ್ಯರ ಬಹುಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದರೆ ಮನುಷ್ಯ ತಾನೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿಲ್ಲ. ಅಲ್ಲದೆ ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿಯೇ ಮನುಷ್ಯರು ಪರದಾಡುತ್ತಿದ್ದು, ಬಡ ಜನರಿಂದ ಹಿಡಿದು ಕೋಟಿ ಕೋಟಿ ರೂಪಾಯಿಗೆ ಬಾಳುವ ಶ್ರೀಮಂತರ ತನಕ, ಎಲ್ಲರೂ ಜೀವನ ನಡೆಸುವುದು ಕಷ್ಟವಾಗುತ್ತಿದೆ.

ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಮಳೆ!
ಈ ವರ್ಷ ಮನುಷ್ಯರಂತೂ ಬಿಸಿ ಗಾಳಿಯ ಸ್ಯಾಂಪಲ್ ಎಫೆಕ್ಟ್ ನೋಡುತ್ತಿದ್ದು, ಕರ್ನಾಟಕದ ಜನರು ನರಳಿ ಹೋಗಿದ್ದರು. ಹೀಗಿದ್ದಾಗಲೇ ಪ್ರಕೃತಿ ಮಾತೆ ಒಂದಷ್ಟು ಕರುಣೆ ತೋರಿಸಿದ್ದು ಮಳೆ ಶುರುವಾಗಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ? & ದಕ್ಷಿಣ ಭಾರತದ ಯಾವ ರಾಜ್ಯದಲ್ಲಿ ಮಳೆಯಾಗುತ್ತೆ? ಬೆಂಗಳೂರಿನಲ್ಲಿ ಇನ್ನೂ ಎಷ್ಟು ದಿನ ಇದೇ ರೀತಿಯಾಗಿ ಭರ್ಜರಿ ಗುಡುಗು & ಸಿಡಿಲು ಸಹಿತ ಮಳೆ ಬರಲಿದೆ? ಬನ್ನಿ ಈ ಬಗ್ಗೆ ಮಾಹಿತಿ ತಿಳಿಯೋಣ.
ಬೆಂಗಳೂರಿಗೆ ಭರ್ಜರಿ ಮಳೆ ಗಿಫ್ಟ್!
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಈಗ ಹೀಟ್ ವೇವ್, ಅಂದ್ರೆ ಬಿಸಿಗಾಳಿಯ ಪರಿಣಾಮ ಸಂಪೂರ್ಣವಾಗಿ ಕಡಿಮೆ ಆಗಲಿದ್ದು. ಭಾರಿ ಮಳೆಯ ಪ್ರಭಾವದಿಂದ ವಾತಾವರಣ ಒಂದಷ್ಟು ತಂಪಾಗುತ್ತಿದೆ. ಮುಂದಿನ 48 ಗಂಟೆ ಕಾಲ ಇದೇ ರೀತಿ ಭಾರಿ ಮಳೆ ಬೀಳಲಿದ್ದು ದಕ್ಷಿಣ ಭಾರತದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮಾಹಿತಿ ನೀಡಲಾಗಿದೆ. ಮತ್ತೊಂದು ಕಡೆ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಸೇರಿದಂತೆ ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಇದರ ಜೊತೆ ಪಶ್ಚಿಮ ಭಾರತದ ರಾಜ್ಯಗಳಲ್ಲೂ ವಿಪರೀತ ಮಳೆಯ ಮುನ್ಸೂಚನೆ ನೀಡಲಾಗಿದೆ.
ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...
ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.












Click it and Unblock the Notifications