ಹಳಿ ತಪ್ಪಿದ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು
ಬೆಂಗಳೂರು, ಅಕ್ಟೋಬರ್. 23: ಮೈಸೂರು ದಸರಾ ಕಣ್ಣು ತುಂಬಿಕೊಳ್ಳಲು ತೆರಳುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು ನಾಯಂಡಹಳ್ಳಿ ಬಳಿ ಹಳಿ ತಪ್ಪಿದೆ. ರೈಲು ನಿಧಾನವಾಗಿ ಸಾಗುತ್ತಿದ್ದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.
ರೈಲ್ವೆ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು. ರೈಲನ್ನು ವ್ಯವಸ್ಥಿತವಾಗಿ ಹಳಿಗೆ ಮರಳಿಸಿದರು. ಇದಾದ ಮೇಲೆ ರೈಲು ಸುರಕ್ಷಿತವಾಗಿ ಮೈಸೂರಿಗೆ ತೆರಳಿತು.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ರೈಲು ಹಳಿ ಮೇಲೆ ಬೃಹತ್ ಗಾತ್ರದ ಕಲ್ಲೊಂದು ಇದ್ದದ್ದು ಹಳಿ ತಪ್ಪಲು ಕಾರಣ ಎಂದು ಹೇಳಲಾಗಿದೆ. ಪ್ರವಾಸಿಗರನ್ನು ಹೊತ್ತ ರೈಲು ಅಕ್ಟೋಬರ್ 23 ರಂದು ಬೆಳಗ್ಗೆ ಬೆಂಗಳೂರನ್ನು ಬಿಟ್ಟಿತ್ತು. ನಾಯಂಡಹಳ್ಳಿ ಬಳಿ ಆಗಮಿಸಿದ ರೈಲು ಇದ್ದಕ್ಕಿದಂತೆ ಹಳಿ ತಪ್ಪಿತು.[ಹೊಸದಾಗಿ ಎಲ್ ಪಿಜಿ ಸಂಪರ್ಕ ಪಡೆಯುವುದು ಹೇಗೆ?]
ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರೀಶಿಲನೆ ನಡೆಸಿದ್ದಾರೆ. ಘಟನೆಗೆ ನಿಜವಾದ ಕಾರಣ ಏನು ಎಂಬುದು ಸಮಗ್ರ ತನಿಖೆಯ ನಂತರವೇ ತಿಳಿದು ಬರಲಿದೆ. ಪ್ರಯಾಣಿಕರನ್ನು ಒಂದಷ್ಟು ಕಾಲ ಈ ಘಟನೆ ಆತಂಕಕ್ಕೆ ದೂಡಿತ್ತು.












Click it and Unblock the Notifications