ಬ್ರ್ಯಾಂಡ್ ಬೆಂಗಳೂರು; ಡಿಕೆಶಿಗೆ ಆಗುವ ಲಾಭಗಳ ಪಟ್ಟಿ!
ಬೆಂಗಳೂರು, ಅಕ್ಟೋಬರ್ 26: ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಕನಸು 'ಬ್ರ್ಯಾಂಡ್ ಬೆಂಗಳೂರು'. ಇದನ್ನು ಸಾಕಾರಗೊಳಿಸಲು ಅವರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನು ಪ್ರತಿಪಕ್ಷಗಳು ಟೀಕೆಯ ಅಸ್ತ್ರವಾಗಿ ಮಾಡಿಕೊಳ್ಳುತ್ತಿವೆ.
ಕರ್ನಾಟಕ ಬಿಜೆಪಿ ಈ ಕುರಿತು ಗುರುವಾರ ಟ್ವೀಟ್ ಮಾಡಿದೆ. 'ಬ್ರ್ಯಾಂಡ್ ಬೆಂಗಳೂರು' ಅನ್ನು 'ಬ್ಯಾಡ್ ಬೆಂಗಳೂರು' ಮಾಡುತ್ತಿರುವ ಡಿ. ಕೆ. ಶಿವಕುಮಾರ್ ಅವರಿಗೆ ಆಗುವ ಲಾಭಗಳು ಎಂದು ಪಟ್ಟಿಯೊಂದನ್ನು ನೀಡಿದೆ.

ಬಿಜೆಪಿ ಟ್ವೀಟ್‌ನಲ್ಲಿನ ಪಟ್ಟಿ
* ಆ ದಿನಗಳ ತನ್ನದೇ ಸಾಮ್ರಾಜ್ಯ ಕಟ್ಟಿಕೊಳ್ಳಲು ಅನುಕೂಲ..!
* ಕನಕಪುರವನ್ನು ಬೆಂಗಳೂರಿಗೆ ಸೇರಿದರೆ ಆಸ್ತಿಗಳ ಮೌಲ್ಯ ನೂರುಪಟ್ಟು ಹೆಚ್ಚಳ..!
* ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಯೋಜನೆಗಳ ಮೂಲಕ ಲೂಟಿ..!
* ₹85,000 ಕೋಟಿ ವೆಚ್ಚದ ಸುರಂಗ ಮಾರ್ಗದ ಹೆಸರಲ್ಲಿ ಕಲೆಕ್ಷನ್‌ಗೆ ಸ್ಕೆಚ್..!
* ಬಫರ್ ಜೋನ್‌ಗಳನ್ನು ಕಡಿಮೆ ಮಾಡಿ ಲ್ಯಾಂಡ್ ಮಾಫಿಯಾಗೆ ನಾಂದಿ..!
* 10 ಎಕರೆ ಪ್ರದೇಶದಲ್ಲಿ ಸ್ಕೈಡೆಕ್ ಎಂಬ ಹೂವಿಟ್ಟು ಜಮೀನು ಕಬಳಿಕೆ..!
'ಅಕ್ರಮ ಆಸ್ತಿ ಗಳಿಕೆ ಹಾಗೂ ದುಪ್ಪಟ್ಟು ಆದಾಯವನ್ನು ಏರಿಸಿಕೊಳ್ಳುವುದರಲ್ಲಿ ನಿಸ್ಸೀಮರಾಗಿರುವ ಡಿಕೆ ಸಾಹೇಬರ ಮುಂದೆ ಇರುವುದು ಬ್ರ್ಯಾಂಡ್ ಬೆಂಗಳೂರಲ್ಲ, ಭವ್ಯ ಬೆಂಗಳೂರಿನ ಲೂಟಿಯ ಕನಸು..!' ಎಂದು ಬಿಜೆಪಿ ಟ್ವೀಟ್‌ನಲ್ಲಿ ಆರೋಪ ಮಾಡಿದೆ.
ಬಿಜೆಪಿ ಮತ್ತೊಂದು ಪೋಸ್ಟ್‌ನಲ್ಲಿ, 'ಬ್ರ್ಯಾಂಡ್ ಬೆಂಗಳೂರನ್ನು "ಆ ದಿನಗಳ" ಬೆಂಗಳೂರನ್ನಾಗಿ ಮಾಡುವುದೇ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಗ್ಯಾರಂಟಿ' ಎಂದು ಬಿಜೆಪಿ ವ್ಯಂಗ್ಯವಾಡಿದೆ.
* ಮತ್ತೆ ತಲೆ ಎತ್ತಿದ ರಿಯಲ್ ಎಸ್ಟೇಟ್ ಮಾಫಿಯಾ..!
* ಬಿಬಿಎಂಪಿ ಗುತ್ತಿಗೆದಾರರಿಗಿಲ್ಲ ಕಾಮಗಾರಿ ಬಿಲ್..!
* ಕ್ರೈಮ್ ಸಿಟಿ ಆಗುತ್ತಿದೆ ರಾಜಧಾನಿ ಬೆಂಗಳೂರು..!
* ಕುಡಿಯುವ ಹನಿ ನೀರಿಗೂ ಬಂದಿದೆ ಕುತ್ತು..!
* ಲೋಡ್‌ಶೆಡ್ಡಿಂಗ್‌ನಿಂದ ಕೈಗಾರಿಕೆಗಳು ಕಂಗಾಲು..!
* ಉದ್ಘಾಟನೆಯಾಗದೆ ಉಳಿದ ಮೆಟ್ರೋ ನಿಲ್ದಾಣಗಳು..!
* ರಸ್ತೆಗಳ ಅಭಿವೃದ್ಧಿಯಂತೂ ಮಂಗಮಾಯ..!
* ಬೀದಿಗೆ ಬಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು..!
* ಜನಸಾಮಾನ್ಯರಿಗೆ ದುಬಾರಿಯಾಯ್ತು ಉದ್ಯಾನ ನಗರಿ..!
* ಐಟಿ ಸಿಟಿ ಬಿಟ್ಟು ಹೊರ ರಾಜ್ಯಕ್ಕೆ ಸ್ಟಾರ್ಟ್‌ಅಪ್‌ಗಳು ವಲಸೆ..!
'ಬೆಂಗಳೂರು ನಗರದಲ್ಲಿ ಈಗಾಗಲೇ ಇರುವ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಮತ್ತಷ್ಟು ಪ್ರದೇಶಗಳನ್ನು ಸೇರಿಸಿ ಸಮಸ್ಯೆಗಳನ್ನು ಹೆಚ್ಚಿಸಿ ಬ್ರ್ಯಾಂಡ್ ಬೆಂಗಳೂರನ್ನು ಬ್ಯಾಡ್ ಬೆಂಗಳೂರನ್ನಾಗಿ ಮಾಡುವುದೇ ಡಿಕೆ ಸಾಹೇಬರ ಮಹಾ ಗುರಿ..!' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಜೆಪಿ ಮತ್ತೊಂದು ಟ್ವೀಟ್‌ನಲ್ಲಿ, 'ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲಿ ಚಕ್ಕಡಿ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಕೈಯಲ್ಲಿ ಬಾರ್ಕೋಲು, ಇದು ರಾಜ್ಯದ ನಾಲ್ಕೂವರೆ ತಿಂಗಳ ಕಾಂಗ್ರೆಸ್ ಸರ್ಕಾರದ ಗಾಡಿ ಸಾಗುತ್ತಿರುವ ಪರಿ. ನಾಯಕರ ವೈಯುಕ್ತಿಕ ಪ್ರತಿಷ್ಠೆ, ಬಣಗಳ ಮೇಲಾಟ, ಒಣ ದರ್ಪ, ನಾನೇ ಸರಿ ಎಂಬ ಅಹಂಕಾರದಿಂದ ಅಕ್ಷರಶಃ ನಲುಗುತ್ತಿರುವುದು ಮಾತ್ರ ಕರ್ನಾಟಕದ ಮಹಾಜನತೆ!! ಸರ್ಕಾರ ಆರಂಭವಾದ ದಿನದಿಂದಲೂ ಒಂದಲ್ಲಾ ಒಂದು ರೀತಿ ಕಿತ್ತಾಟ ನಡೆಸುತ್ತಲೇ ರಾಜ್ಯದ ಆಡಳಿತವನ್ನು ಹಳ್ಳ ಹಿಡಿಸಿಯಾಗಿದೆ' ಎಂದು ಹೇಳಿದೆ.
'ರಾಜ್ಯದಲ್ಲಿ ಭ್ರಷ್ಟಾಚಾರ, ಬರಗಾಲ, ನಿರುದ್ಯೋಗ, ಅರಾಜಕತೆ ತಾಂಡವವಾಡುತ್ತಿದೆ. ಕಾವೇರಿ ವಿವಾದ ಸೇರಿದಂತೆ ರಾಜ್ಯದ ಅಸ್ಮಿತೆಗೆ ಧಕ್ಕೆ ತರುವ ಎಲ್ಲಾ ವಿಷಯಗಳಲ್ಲಿಯೂ ಕಾಂಗ್ರೆಸ್ ಮುಖಂಡರು ಒಳಜಗಳದಲ್ಲಿ ನಿರತರಾಗಿದ್ದರೇ ಹೊರತು, ರಾಜ್ಯದ ಹಿತ ಕಾಪಾಡಲಿಲ್ಲ. ಅಸಲಿಗೆ ಕಾಂಗ್ರೆಸ್‌ನ ಸಿಎಂ ಮತ್ತು ಡಿಸಿಎಂ ಬಣ ಒಗ್ಗಟ್ಟಾಗಿದ್ದು ರಾಜ್ಯವನ್ನು ಲೂಟಿ ಹೊಡೆಯುವ ವಿಷಯದಲ್ಲಿ ಮಾತ್ರ!!' ಎಂದು ಪೋಸ್ಟ್ ಹಾಕಿದೆ.
'ಸಿಎಂ ಮತ್ತು ಡಿಸಿಎಂ ಬಣ ರಾಜ್ಯವನ್ನು ಹೈಕಮಾಂಡ್‌ನ #ATM ಆಗಿ ಮಾಡುವಲ್ಲಿ ತೋರುತ್ತಿರುವ ಒಗ್ಗಟ್ಟನ್ನು ರಾಜ್ಯದ ಅಭಿವೃದ್ಧಿಯ ಬಗ್ಗೆ ಕಡೆಗೆ ಎಳ್ಳಷ್ಟು ತೋರುತ್ತಿಲ್ಲ. ಯಾರು ಹೆಚ್ಚು ಕಲೆಕ್ಷನ್ ಮಾಡುತ್ತಾರೆ ಎಂಬ ಪೈಪೋಟಿಗೆ ಬಿದ್ದಿರುವುದಕ್ಕೆ ಕಳೆದ ವಾರ ಅಕ್ರಮವಾಗಿ ದೊರೆತ ₹100 ಕೋಟಿಗೂ ಅಧಿಕ ಹಣವೇ ಪುರಾವೆ. ದಿನ ಕಳೆದಂತೆ ಸಿಎಂ ಸಿದ್ದರಾಮಯ್ಯರವರ ಕುರ್ಚಿಯ ವ್ಯಾಲಿಡಿಟಿ ಸಹ ಕಡಿಮೆ ಆಗುತ್ತಿದೆ' ಎಂದು ಬಿಜೆಪಿ ಹೇಳಿದೆ.












Click it and Unblock the Notifications