ವಿವಾಹದ ಹಿಂದಿನ ದಿನ ರೈಲಿಂದ ಜಿಗಿದು ಆತ್ಮಹತ್ಯೆ

belgaum-4-youth-including-bride-suicide-by-jumping-from-train-at-miraj
ಯಮಕನಮರಡಿ (ಬೆಳಗಾವಿ) , ನ.29: ವಿವಾಹ ದಿನದಂದು ಹಸೆಮಣೆ ಏರಬೇಕಾದವಳು ಇನ್ನೂ ಮೂವರನ್ನು ಜತೆಗೆ ಸೇರಿಸಿಕೊಂಡು ರೈಲೇರಿ ಮಾರ್ಗ ಮಧ್ಯೆ ರೈಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ವರೂ ಮೃತಪಟ್ಟಿದ್ದಾರೆ. ಇಷ್ಟಾಗಿ ಯುವತಿಯ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಪ್ರೇಮವೈಫಲ್ಯ ದುರಂತಕ್ಕೆ ಕಾರತವಿರಬಹುದು ಎಂದು ಶಂಕಿಸಲಾಗಿದೆ.

ಮೃತರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡ್ಡುಗಾಡು ಪ್ರದೇಶವಾದ ಯಮಕನಮರಡಿ ಗ್ರಾಮದ ಭಾಗೀರತಿ ಶಿವಪ್ಪಾ ಘಸ್ತಿ (28), ಸುರೇಶ ಲಿಂಗಪ್ಪಾ ಗುಡದೇರಿ (26), ವೈಷ್ಣವಿ ಶ್ರಾವಣ ಗುಡದೇರಿ (18) ಹಾಗೂ ಫಕೀರಪ್ಪಾ ಹೊಳೆಪ್ಪಾ ಗುಡದೇರಿ (24) ಎಂದು ಗುರುತಿಸಲಾಗಿದೆ.

ಭಾಗೀರತಿ ಶಿವಪ್ಪಾ ಘಸ್ತಿ ವಿವಾಹ ಗುರುವಾರ ನಿಗದಿಯಾಗಿತ್ತು. ಆದರೆ ಬುಧವಾರ ಬೆಳಗ್ಗೆ ಆಕೆ ಇನ್ನೂ ಮೂವರ ಜತೆಗೂಡಿ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ. ಮಿರಜ್‌- ಕುರಡವಾಡಿ ಪ್ಯಾಸೆಂಜರ್ ರೈಲಿನಿಂದ ಜಿಗಿದು ಈ ನಾಲ್ವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿರಜ್‌- ಪಂಢರಪುರ ಮಾರ್ಗದಲ್ಲಿ ಕೃಷ್ಣಾ ಘಾಟಿನ ರೈಲು ಗೇಟ್‌ ಬಳಿ ಈ ಕುಖತ್ಯವೆಸಗಿದ್ದಾರೆ.

ರೈಲಿನಿಂದ ಜಿಗಿದ ಮೂವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದುರಂತ ಅಂತ್ಯ ಕಂಡ 4 ಮಂದಿಯ ಅಂತ್ಯಕ್ರಿಯೆ ಮಿರಜ್‌ ನಲ್ಲಿಯೇ ನೆರವೇರಿಸಲಾಗಿದೆ. ಮಿರಜ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+