ಬೇಲೇಕೇರಿ:ರೆಡ್ಡಿಯೇ ರೂವಾರಿ, ರೆಡ್ಡಿ ವಿಚಾರಣೆ ಸಾಧ್ಯತೆ

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ರೂವಾರಿ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿರುವುದರಿಂದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ (OMC) ಪ್ರಸ್ತುತ ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯನ್ನು ಈ ಪ್ರಕರಣದಲ್ಲೂ ಬೆಂಗಳೂರು ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ರೆಡ್ಡಿಗೆ ಸದ್ಯಕ್ಕೆ ಜೈಲು ವಾಸದಿಂದ ಮುಕ್ತಿ ಇಲ್ಲವಾಗುತ್ತದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆ ತೀವ್ರಗೊಗೊಂಡಿದ್ದು, ಬಂಧಿತ ಆರೋಪಿಗಳಾದ ಶಾಸಕ ಸುರೇಶ್ ಬಾಬು, ಸತೀಶ್ ಸೈಲ್ ಅವರು ಅಕ್ರಮದ ಬಗ್ಗೆ ಹಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿಯೇ ರೂವಾರಿ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆಂದು ಸಿಬಿಐ ಮೂಲಗಳು ತಿಳಿಸಿವೆ. ಈಗಾಗಲೇ ಬಂಧಿತರಾಗಿರುವ ಕಾರಂಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರು ಸುರೇಶ್ ಬಾಬು ಸೂಚನೆ ಮೇರೆಗೆ ಅದಿರನ್ನು ಸಾಗಿಸಲಾಗಿತ್ತು ಎಂದು ಸಿಬಿಐ ಮುಂದೆ ಬಾಯ್ಬಿಟ್ಟಿರುವುದು ಗಮನಾರ್ಹ. ಈ ಹೇಳಿಕೆಗಳನ್ನು ಆಧರಿಸಿ ಶಾಸಕರು, ಅಧಿಕಾರಿಗಳು, ಇನ್ನಿತರರನ್ನು ಸಿಬಿಐ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್ ರವರು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದ ಜನಾರ್ದನ ರೆಡ್ಡಿಯ ಸೂಚನೆ ಮೇರೆಗೆ ಅದಿರನ್ನು ರಫ್ತು ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಸತೀಶ್ ಸೈಲ್ 2.5 ಲಕ್ಷ ಟನ್ ಅದಿರನ್ನು ವಿದೇಶಕ್ಕೆ ಸಾಗಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಒಟ್ಟಾರೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಉರುಳು ಹಲವರಿಗೆ ಕೊರಳಿಗೆ ಬಿಗಿಯಾಗ ತೊಡಗಿದೆ. ಹೊಸಪೇಟೆ ಶಾಸಕ ಆನಂದ್ ಸಿಂಗ್, ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಸಿಬಿಐ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕಿದೆ.












Click it and Unblock the Notifications