Beer Price: ಬಿಯರ್ ದರ ಏರಿಕೆ: ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು: ಅಂಕಿ-ಸಂಖ್ಯೆ ಮಾಹಿತಿ
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ರಾಜ್ಯ ಸರ್ಕಾರ ಬಿಯರ್ ಬೆಲೆಯನ್ನು ಫೆಬ್ರವರಿ ಆರಂಭದಿಂದಲೇ ಏರಿಕೆ ಮಾಡಿದ್ದರಿಂದ ಬಿಯರ್ ಪ್ರೀಯರು ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಹೆಚ್ಚು ಬೆಲೆ ಇರುವ ಬಿಯರ್‌ಗಳಿಗೆ ಬೇಡಿಕೆ ಕುಸಿತವಾಗಿದೆ.
ಹೌದು, ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಸುಂಕವನ್ನು ಶೇಕಡಾ 10ರಷ್ಟು ಹೆಚ್ಚಿಸಿತ್ತು. ಈ ಹೊಸ ದರ ಇದೇ ಫೆಬ್ರುವರಿ 1ರಿಂದ ಜಾರಿಗೆ ತಂದಿತ್ತು. ಇದೀಗ ಬಿಯರ್ ಮಾರಾಟವು ಕುಸಿತ ಕಂಡಿರುವುದು ಗೊತ್ತಾಗಿದೆ ಎಂದು ವಿಜಯವಾಣಿ ವರದಿ ಮಾಡಿದೆ.

ಫೆ.1ರಿಂದ ಬಿಯರ್ ಸುಂಕ ಏರಿಕೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಸೇರಿ ಮೂರು ಭಾರಿ ಬಿಯರ್ ಬೆಲೆ ಹೆಚ್ಚಾಗಿದೆ. ಕಳೆದ ಎಂಟು ತಿಂಗಳಲ್ಲಿ ಅಂದಾಜು ಒಂದು ಬಿಯರ್‌ಗೆ 40 ರೂ.ನಷ್ಟು ಹೆಚ್ಚಳವಾಗಿದೆ. ಸದ್ಯ ಸರ್ಕಾರ ಫೆಬ್ರವರಿಯಿಂದ ಬಿಯರ್ ಮೇಲಿನ ಸುಂಕವನ್ನು ಶೇಕಡಾ 185 ಇದ್ದದ್ದನ್ನು ಶೇಕಡಾ 195ಕ್ಕೆ ಏರಿಕೆ ಮಾಡಿದೆ. ಇದರಿಂದ ಒಂದು ಬಿಯರ್ ಖರೀದಿಸಲು ಹೆಚ್ಚುವರಿಯಾಗಿ 12ರೂ.ವರೆಗೆ ಹಣ ನೀಡಬೇಕಾಗಿದೆ. ಹೀಗಾಗಿ ಈ ತಿಂಗಳ ಮೊದಲ ವಾರವೇ ಬಿಯರ್ ಬೇಡಿಕೆಯು ಕುಸಿದಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಮಾರಾಟ ಕುಸಿತ
ಮೂಲಗಳ ಪ್ರಕಾರ, ಕಳೆದ ವರ್ಷ 2023ರ ಫೆಬ್ರವರಿ ಮೊದಲ ವಾರ (ಫೆ.1-7) ಒಟ್ಟು 7.2 ಲಕ್ಷ ಕೇಸ್ ಬಿಯರ್‌ಗಳು ಮಾರಾಟವಾಗಿದ್ದವು. ಆದರೆ ಈ ವರ್ಷ ಅದೇ ಸಮಯದಲ್ಲಿ ಕೇವಲ ಸುಮಾರು 6.4 ಲಕ್ಷ ಕೇಸ್ ಬಿಯರ್‌ಗಳು ಮಾತ್ರ ಮಾರಾಟವಾಗಿವೆ. ಇದಕ್ಕೆ ಸತತ ಬೆಲೆ ಏರಿಕೆ ಕಾರಣ ಎಂದು ತಿಳಿದು ಬಂದಿದೆ.
ನಿರಂತರವಾಗಿ ಬೆಲೆ ಏರಿಕೆ ಆದರೂ ಸಹಿತ ಬೇಡಿಕೆ, ಮಾರಾಟ ಕಡಿಮೆ ಆಗಿದೆಯೆ ಹೊರತು ಬಿಯರ್‌ನಿಂದ ಬರುವ ಆಧಾಯದಲ್ಲಿ ಸರ್ಕಾರಕ್ಕೆ ನಷ್ಟವಾಗಿಲ್ಲ. ಏಕೆಂದರೆ ಹೆಚ್ಚುವರಿ ವಿಧಿಸಿದ ದರ ಲಾಭ ತಂದುಕೊಂಡಿದೆ ಎನ್ನಲಾಗಿದೆ. ಇತ್ತ ದೇಸಿ ಮದ್ಯದ ಮಾರಾಟ, ವಹೀವಾಟುಗೆ ಯಾವ ತೊಂದರೆ ಆಗಿಲ್ಲ ಎಂದು ಅಬಕಾರಿ ಮೂಲಗಳು ತಿಳಿಸಿದ್ದಾರೆ.

ಕಡಿಮೆ ಬೆಲೆ ಬಿಯರ್‌ಗಳಿಗೆ ಹೆಚ್ಚಾಯ್ತು ಬೇಡಿಕೆ
ಸರ್ಕಾರಿ ಅಬಕಾರಿ ಇಲಾಖೆಗೆ ಬೆಲೆ ಏರಿಕೆ ಬಳಿಕ ನಿರೀಕ್ಷಿತ ಆದಾಯ ಬರುತ್ತಿದೆ. ಇತ್ತ ಬಿಯರ್ ಪ್ರಿಯರಿಗೆ ಈ ಬೆಲೆ ಏರಿಕೆ ಕೈಸುಡತ್ತಿದೆ. ಹೀಗಿದ್ದರೂ ಸಹಿತ ಅವರು ಅತ್ಯಧಿಕ ಬೆಲೆ ಬಿಯರ್ ಅಂದರೆ 185-200 ರೂ.ಬೆಲೆ ಕಿಂಗ್ ಫೀಷರ್ ಬಿಯರ್ ಬದಲಾಗಿ 130-140 ರೂಪಾಯಿ ಬೆಲೆಯ ರಾಯಲ್ ಚಾಲೆಂಜ್ ಮತ್ತು ಬ್ಲಾಕ್ ಪೋರ್ಟ್ ಬಿಯರ್ ಖರೀದಿಸುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ಕಡಿಮೆ ಬೆಲೆ ಬಿಯರ್‌ಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ.












Click it and Unblock the Notifications