ಸಿಎಂ ರುಂಡ ಚೆಂಡಾಡುತ್ತೇನೆ ಎಂದ ಬಿಜೆಪಿ ಮುಖಂಡ ಬಂಧನ
ಶಿವಮೊಗ್ಗ, ನವೆಂಬರ್. 03: ಸಿಎಂ ಸಿದ್ದರಾಮಯ್ಯ ಅವರ ರುಂಡ ಚೆಂಡಾಡುತ್ತೇನೆ ಎಂದಿದ್ದ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ಅವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಗೋಮಾಂಸ ಹೇಳಿಕೆಯನ್ನು ಖಂಡಿಸಿ ಬಿಜಿಪಿ ಸೋಮವಾರ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಚೆನ್ನಬಸಪ್ಪ ಆಕ್ರೋಶಭರಿತರಾಗಿ ಮಾತನಾಡಿದ್ದರು.[ಮಸೀದಿ ಮುಂದೆ ಹಂದಿಮಾಂಸದ ಸಮಾರಾಧನೆ ನಡೆದ್ರೆ ಸಿಎಂ ಸುಮ್ನಿರ್ತಾರಾ?]

"ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೆ ಶಿವಮೊಗ್ಗಕ್ಕೆ ಬಂದು ಗೋಮಾಂಸ ಸೇವಿಸಲಿ. ಅವರ ರುಂಡ ಚೆಂಡಾಡುತ್ತೇವೆ" ಎಂದು ಹೇಳಿದ್ದರು.
ಮುಖ್ಯಮಂತ್ರಿಗಳು ಗೋಹತ್ಯೆಯನ್ನು ಸ್ವಾಗತಿಸುತ್ತಾ ತಾವೂ ಕೂಡಾ ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಉನ್ನತ ಸ್ಥಾನವನ್ನು ಕೊಟ್ಟಿದ್ದೇವೆ. ಗೋ ಮಾತೆಯ ಹಾಲನ್ನೇ ಕುಡಿದು ನಾವು ಬೆಳೆದವರು. ಇಂಥ ಉದ್ಧಟತನದ ಹೇಳಿಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.['ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ']
ಚೆನ್ನಬಸಪ್ಪ ಅವರ ಹೇಳಿಕೆ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪೊಲೀಸ್ ವರಿಷ್ಠಾಧಿಕಾರಿ ರವಿ ಚಿನ್ನಣ್ಣನವರ್ ಅವರಿಗೆ ದೂರು ಸಲ್ಲಿಕೆ ಮಾಡಿದ ನಂತರ ಪೊಲೀಸರು ಚೆನ್ನಬಸಪ್ಪ ಅವರನ್ನು ಬಂಧಿಸಿದ್ದಾರೆ.
ಮಾಹಿತಿ ಗೊತ್ತಿಲ್ಲ
ನನ್ನ ರುಂಡ ಚೆಂಡಾಡುತ್ತೇನೆ ಎಂದು ಯಾರು ಹೇಳಿದ್ದಾರೆ ಎನ್ನುವ ಮಾಹಿತಿ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಕಲ ಮಾಹಿತಿ ಕಲೆ ಹಾಕುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರುಂಡ ಚೆಂಡಾಡುತ್ತೇನೆ ಎಂದಿದ್ದ ವಿಡಿಯೋ












Click it and Unblock the Notifications