ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 06 : ಸದಾ ಓದು, ಬರಹ, ಪಾಠ ಪ್ರವಚನಗಳಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು ಅದೆಲ್ಲವನ್ನು ಮರೆತು ಸೀರೆಯುಟ್ಟು, ಅಡುಗೆ ಮಾಡಿ, ಹಾಡು ಹಾಡಿ, ಜನಪದ ಕಲೆಗಳಿಗೆ ಜೀವ ತುಂಬಿ ನಾವೇನು ಸಂಪೂರ್ಣ ಮಾಡರ್ನ್ ಆಗಿದ್ದರೂ ಸಂಪ್ರದಾಯವನ್ನು ಮರೆತಿಲ್ಲ ಎಂದು ಜನರಿಗೆ ತೋರಿಸಿಕೊಟ್ಟರು.

ಇದೆಲ್ಲವೂ ನಡೆದಿದ್ದು ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ. ಇತರೆ ದಿನಗಳಲ್ಲಿ ಚೂಡಿದಾರ್, ಜೀನ್ಸ್ ಅಂಥ ತರಾವರಿಯ ಉಡುಗೆ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರು ಸೀರೆಯುಟ್ಟು ಹೂವು ಮುಡಿದು ಅಲಂಕರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಜಾನಪದ ಜಾತ್ರೆಗೆ ಜೀವ ತುಂಬಿದರು.

ಒಂದೆಡೆ ವಿದ್ಯಾರ್ಥಿನಿಯರು ಗ್ರಾಮೀಣ ಸೊಗಡಿನ ತಿಂಡಿಗಳಾದ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಕೋಸಂಬರಿ, ಸಕ್ಕರೆ ಮಿಠಾಯಿ, ನಿಪ್ಪಟ್ಟು, ಕಡ್ಲೆಕಾಳು ಗುಗ್ಗರಿ, ಸಿಹಿಪೂರಿ, ಹುರುಳಿಕಾಳು ಪಲ್ಯ ಮಾಡುತ್ತಿದ್ದರೆ, ಅದರ ಘಮ ಬಾಯಲ್ಲಿ ನೀರೂರಿಸುತ್ತಿದ್ದರೆ, ಮತ್ತೊಂದೆಡೆ ಕುಣಿತ, ಆಟ, ಮದುವೆ ದರ್ಬಾರು. [ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!]

Beautiful girls in saree rock at folk festival in Mandya

ಒಟ್ಟಾರೆ ಇಡೀ ಕಾಲೇಜಿನಲ್ಲಿ ಜಾನಪದ ಸಂಭ್ರಮ ಮನೆ ಮಾಡಿತ್ತು. ಇನ್ನು ಡೊಳ್ಳು ಕುಣಿತ, ಪೂಜಾ ಕುಣಿತ, ಗೊರವನ ಕುಣಿತ, ಯಕ್ಷಗಾನ, ಗತಕಾಲದ ಹಳ್ಳಿಯ ವೈಭವವನ್ನು ಕಣ್ಮುಂದೆ ತಂದಿರಿಸಿದ್ದವು. ಬೇಸಿಗೆಯ ಬೇಗೆ ನೀಗಿಸಿಕೊಳ್ಳುವುದಕ್ಕಾಗಿ ರುಚಿಯಾದ ಮಜ್ಜಿಗೆ, ಸಿಹಿ ಪಾನಕವೂ ಸಿದ್ಧವಾಗಿತ್ತು. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]

ಇಷ್ಟೆಲ್ಲ ಆದ ಮೇಲೆ ಮದುವೆ ಸಡಗರ ಇಲ್ಲ ಅಂದ್ರೆ ಹೇಗೆ? ಹಾಗಾಗಿ ವಿದ್ಯಾರ್ಥಿನಿಯರೆಲ್ಲರೂ ಸೇರಿಕೊಂಡು ಹಾಡು-ಹಸೆಗೆ ಹೆಜ್ಜೆ ಹಾಕುತ್ತಾ ಮದುವೆ ಸಂಭ್ರಮದಲ್ಲಿದ್ದರು, ಕೆಲವರು ವಧುವನ್ನು ಸಿಂಗರಿಸುತ್ತಿದ್ದರೆ, ಮತ್ತೊಂದೆಡೆ ಮದುಮಗ ತಯಾರಾಗಿ ಕುಳಿತಿದ್ದ. ಮದುವೆ ಮನೆ ಎಂದ ಮೇಲೆ ತಮಾಷೆ, ಕಚಗುಳಿ, ಹರಟೆ ಹೀಗೆ ಎಲ್ಲವೂ ಅಲ್ಲಿತ್ತು.

ಇದೆಲ್ಲದರ ನಡುವೆ ಬಣ್ಣದ ಓಕುಳಿ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಆಟ. ಒಟ್ಟಾರೆ ಎಲ್ಲದರಲ್ಲೂ ಪಾಲ್ಗೊಂಡು ಸಂಭ್ರಮಪಟ್ಟ ವಿದ್ಯಾರ್ಥಿಯರು ಮೂಲೆಗುಂಪಾಗುತ್ತಿರುವ ಜನಪದ ಕಲೆಗಳನ್ನು ಮತ್ತೆ ನೆನಪಿಸುವ ಪ್ರಯತ್ನ ಮಾಡಿದರು. [ಸೀರೆ ಕಡ್ಡಾಯವಲ್ಲ, ಸಭ್ಯವಾದ ಡ್ರೆಸ್ ಇರಲಿ]

ಮಂಡ್ಯದಲ್ಲಿ ಜನಪದ ಜಾತ್ರೆ

ಮಂಡ್ಯದಲ್ಲಿ ಜನಪದ ಜಾತ್ರೆ

ಹೊಡೀ ಚಕ್ಕಡಿ, ನಡೀ ಜನಪದ ಜಾತ್ರೆಗೆ ಅಂತ ಎತ್ತು ಹೂಡಿಕೊಂಡು ಬಂದ ಗಣ್ಯರು.
ಝಕ್ಕಣಕ್ಕ ಝಕ್ಕ, ಝಕ್ಕಣಕ್ಕ ಝಕ್ಕ

ಝಕ್ಕಣಕ್ಕ ಝಕ್ಕ, ಝಕ್ಕಣಕ್ಕ ಝಕ್ಕ

ಬಿಸಿಲನ್ನೂ ಲೆಕ್ಕಿಸದೆ ಝಕ್ಕಣಕ್ಕ ಅಂತ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು.
ಏನು ಬೇಕೋ ಹೇಳಿ ಎಲ್ಲಾ ರೆಡಿ!

ಏನು ಬೇಕೋ ಹೇಳಿ ಎಲ್ಲಾ ರೆಡಿ!

ಜನಪದ ಜಾತ್ರೆಯಲ್ಲಿ ಯಾವುದಕ್ಕೆ ಕಮ್ಮಿಯಿರಲಿಲ್ಲ. ಹಾಡು, ಕುಣಿತ, ತರಹೇವಾರಿ ಅಡುಗೆ... ವಾರೆವ್ಹಾ ಎನ್ನುವಂತಿತ್ತು.
ಬಾರೇ ಸೆಲ್ಫಿ ತಕ್ಕೊಳ್ಳೋಣ

ಬಾರೇ ಸೆಲ್ಫಿ ತಕ್ಕೊಳ್ಳೋಣ

ಹುಡುಗೀರಂದ ಮೇಲೆ ಕೈಯಲ್ಲಿ ಮೊಬೈಲ್ ಇಲ್ಲದೇ ಇರಲು ಸಾಧ್ಯವೆ? ಮೊಬೈಲ್ ಇದ್ದ ಮೇಲೆ ಸೆಲ್ಫೆ ತೆಗೆದುಕೊಳ್ಳದಿರಲು ಸಾಧ್ಯವೆ?
ಮಂಡ್ಯ ಜನಪದ ಜಾತ್ರೆಗೆ ಜೀವ ತುಂಬಿದ ಸೀರೆ ಸುಂದರಿಯರು

ಮಂಡ್ಯ ಜನಪದ ಜಾತ್ರೆಗೆ ಜೀವ ತುಂಬಿದ ಸೀರೆ ಸುಂದರಿಯರು

ಮಸ್ತಾಗಿ ಅಲಂಕರಿಸಿಕೊಂಡು ಸೀರೆಯುಟ್ಟು ಬಂದ ಸುಂದರ ಯುವತಿಯರು ಜನಪದ ಹಬ್ಬಕ್ಕೆ ಭಾರೀ ಕಳೆ ತಂದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Beautiful college girls of Mandya women's govt college showed they are not just modern, they are ready to rock in tradition dress too. In the folk festival organized girls in saree and other traditional attire danced, cooked, played holi... and what not!
Please Wait while comments are loading...