'ಪ್ರಧಾನಿ ಹೆಸರಿನಲ್ಲಿ ಮತ ಕೇಳಿದರೆ ಬಿಜೆಪಿ ನಾಯಕರಿಗೆ ಚಪ್ಪಲಿಯಿಂದ ಹೊಡೆಯಿರಿ' ಪ್ರಮೋದ್ ಮುತಾಲಿಕ್
ಕರ್ನಾಟಕ ವಿಧಾನಸಭಾ ಚುನಾವಣೆ: ರಾಷ್ಟ್ರೀಯ ಹಿಂದೂ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯದ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ, ರಾಷ್ಟ್ರೀಯ ಹಿಂದೂ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಹಲವರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರ ಹೆಸರು ಮತ್ತು ಫೋಟೋ ಬಳಸದೆ ಮತ ಸೆಳೆಯಲು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
"ಈ ಬಾರಿ ಮೋದಿ ಹೆಸರನ್ನು ಬಳಸದೆ ಮತ ಕೇಳಿ. ಕರಪತ್ರಗಳು ಮತ್ತು ಬ್ಯಾನರ್‌ಗಳಲ್ಲಿ ಮೋದಿಯವರ ಫೋಟೋಗಳನ್ನು ಬಳಸಬೇಡಿ. ನೀವು ಅಭಿವೃದ್ಧಿ ಮಾಡಿದ್ದೀರಿ, ಗೋವುಗಳನ್ನು ರಕ್ಷಿಸಿದ್ದೀರಿ, ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದೀರಿ ಎಂದು ಮತದಾರರಿಗೆ ಹೇಳಿ. ಇಷ್ಟು ದುಡಿದಿದ್ದೀನಿ ಎಂದು ಎದೆ ತಟ್ಟಿ ಅಭಿಮಾನದಿಂದ ಮತ ಕೇಳಲು ಪ್ರಯತ್ನಿಸಿ'' ಎಂದು ಮುತಾಲಿಕ್ ಕಾರವಾರದಲ್ಲಿ ಹೇಳಿದರು.

ಭಾರತೀಯ ಜನತಾ ಪಕ್ಷದ ಪರವಾಗಿ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಕೇಸರಿ ಪಕ್ಷಕ್ಕೆ ಮೋದಿ ಹೆಸರನ್ನು ಹೇಳುವುದು ಮಾತ್ರ ಗೊತ್ತಿದೆ ಎಂದು ಆರೋಪಿಸಿದರು.
"ಕೇಸರಿ ಪಕ್ಷದವರು ಮುಂದೆ ಹೀಗೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಪ್ರಧಾನಿ ಮೋದಿಯವರ ಹೆಸರನ್ನು ಬಳಸದೆ ಮತ ಕೇಳುತ್ತಾರೆ ಎಂದು ನಾನು ನಂಬಿದ್ದೇನೆ. ಒಂದು ವೇಳೆ ಜನಪ್ರತಿನಿಧಿಗಳು ನಿಮ್ಮ ಮನೆ ಬಾಗಿಲಿಗೆ ಬಂದು 'ದಯವಿಟ್ಟು ನಿಮ್ಮ ಮತವನ್ನು ಮೋದಿಗೆ ಹಾಕಿ' ಎಂದು ನಿಮ್ಮೆಲ್ಲರಲ್ಲಿ ಕೇಳಿಕೊಂಡರೆ ಚಪ್ಪಲಿಯಿಂದ ಹೊಡೆಯಿರಿ. ಅವರು ನಿಮ್ಮ ಬಳಿ ಮತ ಕೇಳಲು ನಾಲಾಯಕರು (ಅನುಪಯುಕ್ತ). ಈ ನಿಷ್ಪ್ರಯೋಜಕರು ಮೋದಿಯವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಅಂತವರು ತಮ್ಮ ಕಾರ್ಯಕರ್ತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ'' ಎಂದು ಪ್ರಮೋದ್ ಮುತಾಲಿಕ್ ಹೇಳಿದರು.












Click it and Unblock the Notifications