ಗ್ಯಾರಂಟಿ ನೆಪದಲ್ಲಿ ಅಭಿವೃದ್ದಿ ಕಾರ್ಯಗಳನ್ನ ತಡೆಹಿಡಿದರೇ ನಾವು ಬೀದಿಗೆ ಇಳಿಯುತ್ತೇವೆ: ಬಿ ಸಿ ಪಾಟೀಲ್
ಹಾವೇರಿ, ಮೇ 30: ಗ್ಯಾರಂಟಿ ನೆಪದಲ್ಲಿ ಅಭಿವೃದ್ದಿ ಕಾರ್ಯಗಳನ್ನ ತಡೆಹಿಡಿದರೇ ನಾವು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದರು
ಈ ಕುರಿತು ಮಂಗಳವಾರ ಹಾವೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಯೋಜನೆ ತರುವದಾಗಿ ತಿಳಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ದಿನವಾದರೂ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಪಾಟೀಲ್ ಆರೋಪಿಸಿದರು.

ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಚಿವ ಜಾರಕಿಹೊಳಿ ಗ್ಯಾರಂಟಿ ಕಾರ್ಡ್ ನೀಡಿದಂತೆ ಯೋಜನೆಗಳನ್ನ ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಕ್ಕೆ ಬರುವವರೆಗೆ ಒಂಥರಾ ಅಧಿಕಾರಕ್ಕೆ ಬಂದ ಮೇಲೆ ಒಂದು ತರಾ ಎಂದು ಬಿ ಸಿ ಪಾಟೀಲ್ ಟೀಕಿಸಿದ್ದಾರೆ.
ಸತ್ಯ ಬಾಗಿಲಿನಿಂದ ಹೊರಗೆ ಬರುವಷ್ಟರಲ್ಲಿ ಸುಳ್ಳು ಊರು ತಿರುಗಿರುತ್ತೆ ಎನ್ನುವ ಹಾಗೇ ನಾವು ಮಾಡಿದ ಅಭಿವೃದ್ದಿ ಕಾರ್ಯಗಳು ತಲುಪುವ ಮೊದಲೆ ಕಾಂಗ್ರೆಸ್ ಸುಳ್ಳು ಮತದಾರರನ್ನ ತಲುಪಿದ್ದರಿಂದ ಬಿಜೆಪಿಗೆ ಸೋಲಾಯಿತು ಎಂದು ಹೇಳಿದ ಅವರು, ರಾಜ್ಯ ಹಾಳಾದರು ಚಿಂತೆಯಿಲ್ಲ ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆ ಬರುವವರಿಗೆ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತಾರೆ ಎಂದುಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.
ಸಿಎಂ ಕಾಂಗ್ರೆಸ್ ಶಾಸಕರಿಗೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ದುಡ್ಡು ಕೇಳಬೇಡಿ ಎಂದು ಹೇಳಿದ್ದಾರಂತೆ ಎಂದು ಪಾಟೀಲ್, ರಾಜ್ಯವನ್ನ ದಿವಾಳಿ ಮಾಡಿ ರಾಜ್ಯದ ಅಭಿವೃದ್ದಿ ಕುಂಠಿತಗೊಳಿಸಿ ಅಧಿಕಾರ ಅನುಭವಿಸಬೇಕು ಎನ್ನುವ ಕಾಂಗ್ರೆಸ್ ರಾಜ್ಯಕ್ಕೆ ಮಾಡುತ್ತಿರುವ ದೊಡ್ಡ ದ್ರೋಹ. ನೂತನ ಸರ್ಕಾರ ಬಿಜೆಪಿ ಸರ್ಕಾರದಲ್ಲಿನ ಒಂದು ಕೋಟಿ ರೂಪಾಯಿ ಮೇಲಿನ ಯೋಜನೆಗಳ ಪರಿಶೀಲನೆಗೆ ಮುಂದಾಗಿದೆ ಒಂದು ಕೋಟಿಯಲ್ಲ ಐವತ್ತು ಕೋಟಿವರೆಗಿನ ಯೋಜನೆಗಳನ್ನ ಪರಿಶೀಲನೆ ಮಾಡಲಿ ಆದರೆ ಅಭಿವೃದ್ದಿ ಕಾರ್ಯಗಳನ್ನ ನಿಲ್ಲಿಸುವಾಗಿಲ್ಲ ಎಂದು ಪಾಟೀಲ್ ತಿಳಿಸಿದರು.

ರಾಷ್ಟ್ರಕ್ಕಾಗಿ ಹೋರಾಟ ಮಾಡಿದವರ ಇತಿಹಾಸ ಸೇರಿದಂತೆ ಹಲವು ಮಾರ್ಪಾಡುಗಳನ್ನು ಬಿಜೆಪಿ ಸರ್ಕಾರಿ ಪಠ್ಯಪುಸ್ತಕದಲ್ಲಿ ತಂದಿದೆ. ಅದನ್ನ ಬದಲಾಯಿಸಲು ಹೊರಟರೆ ಕಾಂಗ್ರೆಸ್ ಅದರ ದುಷ್ಪರಿಣಾಮಗಳನ್ನ ಅನುಭವಿಸಲಿದೆ. ಕಾಂಗ್ರೆಸ್‌ನವರು ಹೇಳಿದ್ದನ್ನು ಎಂದು ಮಾಡುವದಿಲ್ಲ. ಈಗ ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರಲು ಆಗುತ್ತಿಲ್ಲ ಎಂದು ಪಾಟೀಲ್ ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದರು ಕಾಂಗ್ರೆಸ್ ಸರ್ಕಾರ ಒಬ್ಬರಿಗೆ ಸಹ ಸಚಿವ ಸ್ಥಾನ ನೀಡದಿರುವದು ಹಾವೇರಿ ಜಿಲ್ಲೆಯ ದೌರ್ಭಾಗ್ಯ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಹಾವೇರಿ ಜಿಲ್ಲೆ ಅಭಿವೃದ್ದಿಯಲ್ಲಿ ಹಿಂದೆ ಬೀಳುತ್ತೆ ಎಂದು ಪಾಟೀಲ್ ಆರೋಪಿಸಿದರು. ಗುತ್ತಿಗೆದಾರರು ನಮ್ಮ ಮೇಲೆ 40 ಪ್ರತಿಶತ ಲಂಚ ನೀಡಬೇಕು ಎಂದು ಆರೋಪಿಸಿದವರ ಬಿಲ್ ತಡೆ ಹಿಡಿಯುವ ಮೂಲಕ ಗುತ್ತಿಗೆದಾರರನ್ನ ಕಾಂಗ್ರೆಸ್ ಉಪಯೋಗಿಸಿ ಬಿಸಾಕಿದೆ ಎಂದು ಪಾಟೀಲ್ ಕಿಡಿಕಾರಿದರು.
ನಾನು 2023 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇನೆ ಗೆದ್ದ ಮೇಲೆ ಐದು ವರ್ಷದ ನಂತರ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಆದರೆ ಕಾರ್ಯಕರ್ತರ ಸ್ಥಿತಿ ಅವರ ಒತ್ತಾಯಕ್ಕೆ ಮಣಿದು ಈ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ. ಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಐದು ವರ್ಷ ಅಧಿಕಾರ ನಡೆಸಿ ನಂತರ ತೀರ್ಮಾನ ಕೈಗೊಳ್ಳುವದಾಗಿ ಪಾಟೀಲ್ ತಿಳಿಸಿದರು.
ಹಾವೇರಿ ಲೋಕಸಭೆ ಚುನಾವಣೆಗಿ ನನ್ನನ್ನ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರೇ ಸ್ಪರ್ಧಿಸುವದಾಗಿ ಬಿ.ಸಿ.ಪಾಟೀಲ್ ತಿಳಿಸಿದರು. ಸ್ಪರ್ಧಿಸುವದಲ್ಲಿ ಯಾವ ತಪ್ಪಿದೆ ಈ ಖಾಲಿ ಇದ್ದೇನಿ ಎಂ ಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸ್ಪರ್ಧಿಸುವದಾಗಿ ಬಿ.ಸಿ.ಪಾಟೀಲ್ ತಿಳಿಸಿದರು.












Click it and Unblock the Notifications