ಅಹಿಂದ ವರ್ಗಗಳನ್ನು ಬಜೆಟ್ ನಲ್ಲಿ ಮರೆಯದ ಸಿದ್ದು!

ಬೆಂಗಳೂರು, ಫೆ.14 : ಅಹಿಂದ ವರ್ಗದ ನಾಯಕನಾಗಿ ಬೆಳೆದು ಸಿಎಂ ಗದ್ದುಗೆ ಏರಿದ ಸಿದ್ದರಾಮಯ್ಯ ತಮ್ಮ 2014-15ನೇ ಸಾಲಿನ ಬಜೆಟ್ ನಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಅಗತ್ಯ ಅನುದಾನ ನೀಡಿದ್ದಾರೆ.

ಏಳು ಜಿಲ್ಲೆಗಳಲ್ಲಿ ದೇವರಾಜ ಅರಸು ಭವನ ನಿರ್ಮಾಣ, ಕುರಿ ಮತ್ತು ಮೇಕೆ ಸಾಕಾಣಿಕೆಗೆ 1 ಲಕ್ಷ ರೂ. ವರೆಗೆ ಸಬ್ಸಿಡಿ ಮತ್ತು ಸಾಲದ ನೆರವು ಮುಂತಾದ ಯೋಜನೆಗಳನ್ನು ಘೋಷಿಸಿದ್ದಾರೆ. ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ 110 ಕೋಟಿ ರೂ. ಮೀಸಲಿಟ್ಟಿದ್ದಾರೆ. [ಸಿದ್ದರಾಮಯ್ಯ ಬಜೆಟ್ ಮುಖ್ಯಾಂಶಗಳು]

Siddaramaiah

ಹಿಂದುಳಿದ ವರ್ಗಗಳಿಗೆ
* 7 ಜಿಲ್ಲಾ ಕೇಂದ್ರ ಹಾಗೂ 50 ತಾಲೂಕು ಕೇಂದ್ರಗಳಲ್ಲಿ ದೇವರಾಜ ಅರಸು ಭವನಗಳ ನಿರ್ಮಾಣ
* ಹುಣಸೂರಿನಲ್ಲಿ ದೇವರಾಜ ಅರಸು ಸ್ಮಾರಕ ಭವನ 5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ
* ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿನಿಲಯಗಳಿಗೆ ಮುಂದಿನ ಮೂರು ವರ್ಷಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 35 ಕೋಟಿ
* ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನದಲ್ಲಿ 4 ಪುರುಷ ಮತ್ತು 4 ಮಹಿಳೆಯರ ವಿದ್ಯಾರ್ಥಿ ನಿಲಯ ಸ್ಥಾಪನೆ
* ನಾಗರೀಕ ಸೇವಾ ಪರೀಕ್ಷೆ ತೆಗೆದುಕೊಳ್ಳುವ 2000 ವಿದ್ಯಾರ್ಥಿಗಳಿಗೆ ತರಬೇತಿ ನೆರವು
* ಗೊಲ್ಲ ಮತ್ತು ಇತರ ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 50 ಕೋಟಿ
* 75 ಕೋಟಿ ವೆಚ್ಚದಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ಮತ್ತು ಪಿಎಚ್ ಡಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ವಿಸ್ತರಣೆ
* ಹೆಚ್ಚು ಅಂಕ ಪಡೆದ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆ [ಬಜೆಟ್ ಗೆ ಪ್ರತಿಪಕ್ಷಗಳ ಅತೃಪ್ತಿ]
* ಕೇಂದ್ರ ಸರ್ಕಾರದ ಮಾದರಿಯಲ್ಲಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನದರದಲ್ಲಿ ಹೆಚ್ಚಳ
* ಹಿಂದುಳಿದ ವರ್ಗಗಳ ಧಾರ್ಮಿಕ ಸಂಘ/ಸಮುದಾಯ ಭವನ/ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ನೀಡುವ ಅನುದಾನ 75 ರಿಂದ 100 ಕೋಟಿಗೆ ಏರಿಕೆ
* ಧೋಬಿ, ಸವಿತಾ ಸಮಾಜ, ತಿಗಳರ ಸಮುದಾಯದ ಜನರಿಗೆ ತಮ್ಮ ವೃತ್ತಿ ಕೌಶಲ್ಯ ಅಭಿವೃದ್ಧಿಗಾಗಿ ಶೇ 2ರ ಬಡ್ಡಿದರದಲ್ಲಿ 2 ಲಕ್ಷ ರೂ.ವರೆಗೆ ಸಾಲ
* ಧೋಬಿ ಘಾಟ್ ಗಳ ಅಭಿವೃದ್ಧಿ, ಕುಂಬಾರ ಸಮಾಜದ ವೃತ್ತಿ ಅಭಿವೃದ್ಧಿಗೆ ಯೋಜನೆ
* ಕುರಿ, ಮೇಕೆ ಸಾಕಾಣಿಕೆಗೆ 1 ಲಕ್ಷ ರೂ ವರೆಗೆ ಸಬ್ಸಿಡಿ ಮತ್ತು ಸಾಲದ ನೆರವು
* ಹಿಂದುಳಿದ ವರ್ಗದ ಜನರಿಗೆ ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು 10 ಸಾವಿರ ಸಬ್ಸಿಡಿ ನೆರವು, 1.10 ಲಕ್ಷ ಸಾಲ
* ಸಾರಾಯಿ ಮರಾಟ ನಿಷೇಧದಿಂದ ನಿರುದ್ಯೋಗಿಗಳಾದವರಿಗೆ ಪುನರ್ವಸತಿ ಆರ್ಥಿಕ ಸೌಲಭ್ಯ
* ವಿಶ್ವಕರ್ಮ ಸಮುದಾಯದವರಿಗೆ ಅವರ ವೃತ್ತಿ ಕೈಗೊಳ್ಳಲು ಆರ್ಥಿಕ ನೆರವು
* ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ಆರ್ಥಿಕ ನೆರವು.

ಅಲ್ಪ ಸಂಖ್ಯಾತರಿಗೆ (ಹಜ್ ಮತ್ತು ವಕ್ಫ್) 110 ಕೋಟಿ

* ಅಲ್ಪ ಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ 110 ಕೋಟಿ ಮೀಸಲು
* 30 ಜಿಲ್ಲೆಗಳಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಜಿಲ್ಲಾ ಕಚೇರಿ ಪ್ರಾರಂಭ
* ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಲ್ಲಿರುವ ವಿದ್ಯಾರ್ಥಿಗಳಿಗೆ ಭೋಜನ ವೆಚ್ಚ 600 ರೂ.ಗಳಿಂದ 750 ರೂ.ಗೆ ಹೆಚ್ಚಳ
* ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ವಾರ್ಷಿಕ ವರಮಾನ 15 ಸಾವಿರದಿಂದ 1 ಲಕ್ಷ ರೂ.ಗಳಿಗೆ ಹೆಚ್ಚಳ
* 100 ಶಾಲೆಗಳಿಗೆ ಇ-ಲರ್ನಿಂಗ್ ಕಲಿಕೆ, ಬೋಧನಾ ಸಾಮಗ್ರಿ, ಗಣಕಯಂತ್ರಕ್ಕೆ 1.5 ಕೋಟಿ ಮೀಸಲು
* ಎಸ್‍ಡಿಪಿ ಯೋಜನೆಯಡಿ 70 ವಿದ್ಯಾರ್ಥಿ ನಿಲಯ ನಿರ್ಮಾಣ
* ಮೆಟ್ರಿಕ್ ನಂತರದ 60 ವಿದ್ಯಾರ್ಥಿಗಳ ಸಂಖ್ಯಾಬಲದ ನೂತನ 50 ವಿದ್ಯಾರ್ಥಿನಿಲಯಗಳ ಆರಂಭ
* ಅಲ್ಪಸಂಖ್ಯಾತ ಹಾಸ್ಟೆಲ್‍ಗಳ ದುರಸ್ತಿ, ಸ್ವಂತ ಕಟ್ಟಡ ನಿರ್ಮಾಣಕ್ಕೆ 24.65 ಕೋಟಿ ಮೀಸಲು
* ರಾಜ್ಯದಲ್ಲಿನ ಅಲ್ಪಸಂಖ್ಯಾತ ಹಾಸ್ಟೆಲ್‍ಗಳ ಮೂಲಭೂತ ಸೌಕರ್ಯ, ಆಧುನೀಕರಣಕ್ಕೆ 6.2 ಕೋಟಿ
* ಮೂರು ಮೊರರ್ಜಿ ದೇಸಾಯಿ ವಸತಿ ಶಾಲೆ, 2 ಪದವಿ ಪೂರ್ವ ಕಾಲೇಜಿಗೆ 6 ಕೋಟಿ
* ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಬ್ಸಿಡಿ ಸಾಲಕ್ಕೆ ಆದ್ಯತೆ - 75 ಕೋಟಿ ಮೀಸಲು
* ರಾಜ್ಯದಲ್ಲಿ ವಕ್ಫ ಆಸ್ತಿ ಅತಿಕ್ರಮಕ್ಕೆ ಕಡಿವಾಣ, ಆಸ್ತಿ ರಕ್ಷಣೆ, ಗೋಡೆ ನಿರ್ಮಾಣಕ್ಕೆ 10 ಕೋಟಿ ಮೀಸಲು
* ಕ್ರೈಸ್ತರ ಅಭಿವೃದ್ಧಿ ಯೋಜನೆಗೆ 125 ಕೋಟಿ
* ನವೋದಯ ವಿದ್ಯಾಲಯ ಮಾದರಿ ಪ್ರತಿಜಿಲ್ಲೆಗಳಲ್ಲಿ ಶಾಲೆ ನಿರ್ಮಾಣ, ಮೊದಲ 2 ಜಿಲ್ಲೆಗಳಲ್ಲಿ ಸ್ಥಾಪನೆಗೆ 5 ಕೋಟಿ
* ಬೆಂಗಳೂರಿನಲ್ಲಿ ಹಜ್ ಭವನಕ್ಕೆ 17 ಕೋಟಿ ಮೀಸಲು
* ಗುಲ್ಬರ್ಗ ಮತ್ತು ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+