ಬಿಬಿಎಂಪಿಯಿಂದ ಭರ್ಜರಿ ಗುಡ್‌ ನ್ಯೂಸ್: 12692 ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು,ನವೆಂಬರ್‌ 16: ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ 12692 ಪೌರಕಾರ್ಮಿಕರನ್ನು ಅಂತಿಮವಾಗಿ ಆಯ್ಕೆ ಮಾಡಿ ಪಟ್ಟಿಯನ್ನು ಇಂದು ಬಿಡುಗಡೆಗೊಳಿದಲಾಗಿದೆ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್ ರವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಿರುವ 12692 ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿಯನ್ನು ದಿನಾಂಕ: 09-10-2024 ರಂದು ಪಾಲಿಕೆ ವೆಬ್‌ಸೈಟ್ https://bbmp.gov.in/home ನಲ್ಲಿ ಪ್ರಕಟಿಸುವ ಜೊತೆಗೆ, ಆಯಾ ವಲಯಜಂಟಿ ಆಯುಕ್ತರು ರವರ ಕಛೇರಿ ಹಾಗೂ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲೂ ಸಹ ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.

BBMP Final Selection List Of 12692 pourakarmikas Published

ಅದರಂತೆ, ವಲಯವಾರು ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ರಮವಹಿಸಿ ಅಂತಿಮವಾಗಿ 12692 ಸಂಖ್ಯೆಯ ಪೌರಕಾರ್ಮಿಕರನ್ನು ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಅಂತಿಮ ಆಯ್ಕೆ ಪಟ್ಟಿಯನ್ನು ಆಯಾ ವಲಯ ಜಂಟಿ ಆಯುಕ್ತರು ರವರ ಕಛೇರಿ ಹಾಗೂ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ಪ್ರಕಟಿಸಲಾಗುವುದು. ಅಲ್ಲದೆ ಪಾಲಿಕೆಯ ವೆಬ್‌ಸೈಟ್ ನಲ್ಲೂ ಸಹ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾಗಿರುವವರು ಯಾವುದೇ ಆಸೆ/ ಆಮಿಷಗಳಿಗೆ ಒಳಗಾಗಬಾರದು ಹಾಗೂ ಮಧ್ಯವರ್ತಿಗಳ ಮಾತುಗಳನ್ನು ಕೇಳಿ ವಂಚನೆಗಳಿಗೆ ಒಳಗಾಗಬಾರದು. ಸದರಿ ಅಂತಿಮ ಆಯ್ಕೆ ಪಟ್ಟಿಯ ವಿವರಣೆ ಅಥವಾ ಮಾಹಿತಿಗಾಗಿ ತಮ್ಮ ವ್ಯಾಪ್ತಿಗೆ ಒಳಪಡುವ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ನೇರವಾಗಿ ಭೇಟಿ ನೀಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಪೌರಕಾರ್ಮಿಕರು ಮೀಸಲಾತಿಗೆ ಅನುಗುಣವಾಗಿ ಒದಗಿಸಬೇಕಿರುವ ದಾಖಲೆಗಳು ಇಲ್ಲಿವೆ

(1) ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಜಾತಿ ಮೀಸಲಾತಿ ಪ್ರಮಾಣ ಪತ್ರ.
(2) ಕನ್ನಡ ಮಾಧ್ಯಮ ಪ್ರಮಾಣ ಪತ್ರ.
(3) ಗ್ರಾಮೀಣ ಪ್ರಮಾಣ ಪತ್ರ.
(4) ಅಂಗವಿಕಲ ಪ್ರಮಾಣ ಪತ್ರ.
(5) ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ.
(6) ಮಾಜಿ ಸೈನಿಕ ಪ್ರಮಾಣ ಪತ್ರ.
(7) ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ.
(8) ತೃತೀಯ ಲಿಂಗ ಪ್ರಮಾಣ ಪತ್ರ.
(9) ಇತರೇ (ಅನ್ವಯಿಸುವ ದಾಖಲೆ ಮಾತ್ರ).

ಆಯ್ಕೆಯಾಗಿರುವ ಪೌರಕಾರ್ಮಿಕರು ತಮ್ಮ ಆಯ್ಕೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ವಲಯ ಮಟ್ಟದಲ್ಲಿ ರಚಿಸಲಾಗಿರುವ ದಾಖಲಾತಿ ಪರಿಶೀಲನಾ ತಂಡಗಳ ಮುಂದೆ ದಿನಾಂಕ: 25.11.2024 ರಿಂದ 30.11.2024ರ ವರೆಗೆ ವಲಯ ಮಟ್ಟದಲ್ಲಿ ನೀಡಲಾಗುವ ವೇಳಾಪಟ್ಟಿಯ ಅನುಗುಣವಾಗಿ ಮೇಲ್ಕಂಡಂತೆ ದಾಖಲೆಗಳನ್ನು ಖುದ್ದು ಹಾಜರುಪಡಿಸಬೇಕು.

RR ನಗರ ವಲಯದಲ್ಲಿ ಅನಧಿಕೃತವಾಗಿ ಕಟ್ಟಿದ ಮಹಡಿ ತೆರವು

ಆರ್.ಆರ್ ನಗರ ವಲಯದ ವಾಜರಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿಗಿಂತ ಹೆಚ್ಚುವರಿಯಾಗಿ ಅನಧಿಕೃತವಾಗಿ ನಿರ್ಮಿಸಿದ 2 ಅಂತಸ್ತುಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ವಲಯ ಆಯುಕ್ತರಾದ ಶ್ರೀ ಬಿ.ಸಿ ಸತೀಶ್ ರವರ ನೇತೃತ್ವದಲ್ಲಿ ಇಂದು ಹೆಮ್ಮಿಗೆ ಪುರ ವಾರ್ಡ್ ವ್ಯಾಪ್ತಿಯ ಬಾಲಾಜಿ ಹೆಚ್.ಬಿ.ಸಿ.ಎಸ್ ವಾಜರಹಳ್ಳಿಯಲ್ಲಿ ಸ್ವತ್ತಿನ ಸಂಖ್ಯೆ. 271ರಲ್ಲಿ ಕಟ್ಟಡ ಮಾಲೀಕರಾದ ಮದನ್ ದೇವಾಸಿ ಬಿ ಮತ್ತು ಮಹೇಂದ್ರ ದೇವಾಸಿ ರವರು 30 X 40 ಸೈಟ್ ನಲ್ಲಿ ಪಾಲಿಕೆಯಿಂದ ಪಡೆದಿರುವ ನಕ್ಷೆ ಮಂಜೂರಾತಿ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.

ಪಾಲಿಕೆಯಿಂದ ಎಸ್ + ನೆಲ ಮಹಡಿ + ಮೊದಲನೇ ಹಾಗೂ ಎರಡನೇ ಮಹಡಿ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿತ್ತು. ಆದರೆ ಸ್ವತ್ತಿನಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅನಧಿಕೃತವಾಗಿರುವ 3ನೇ ಮತ್ತು 4 ಅಂತಸ್ತುಗಳನ್ನು ನಿರ್ಮಾಣ ಮಾಡಿರುವುದಲ್ಲದೇ ಅನುಮತಿ ನೀಡಿರುವ ಭಾಗದಲ್ಲಿ ವ್ಯತಿರಿಕ್ತವಾಗಿ ನಿರ್ಮಿಸಿರುವ ಭಾಗಗಳನ್ನು ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗಿದೆ.

ಕಡ್ಡದಲ್ಲಿ ನಿರ್ಮಿಸಿರುವ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಬಗ್ಗೆ ಬಿಬಿಎಂಪಿ 2020 ಕಾಯ್ದೆ ರಡಿಯಲ್ಲಿ 7ನೇ ಜೂನ್ 2024 ರಂದು 248(1) & 248(2) ನೋಟೀಸ್, 19ನೇ ಜೂನ್ 2024 ರಂದು 248(3) ನೋಟೀಸ್, 29ನೇ ಜೂನ್ 2024 ರಂದು 356(1) ಹಾಗೂ 30ನೇ ಆಗಸ್ಟ್ 2024 ರಂದು 356(2) ನೋಟಿಸ್ ಗಳನ್ನು ಜಾರಿ ಮಾಡಲಾಗಿತ್ತು. ಹೀಗೆ ನಾಲ್ಕು ಬಾರಿ ನೋಟಿಸ್ ಗಳನ್ನು ಕಟ್ಟಡದ ಮಾಲೀಕರಿಗೆ ಜಾರಿ ಮಾಡಿದರೂ ಸಹ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿಲ್ಲವಾದ್ದರಿಂದ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ 2 ಮಹಡಿ ಹಾಗೂ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+