ವೈದ್ಯರ ಪ್ರಕಾರ ಸೋಂಕು ಕಮ್ಮಿಯಾಗಿದೆ ಎಂದು ಯಾವಾಗ ಹೇಳಬಹುದು?
ಬೆಂಗಳೂರು, ಮೇ 26: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಮ್ಮಿಯಾಗುತ್ತಿರುವುದರಿಂದ ವೈರಸ್ ಪ್ರಭಾವ ಕಮ್ಮಿಯಾಗಿದೆ ಎಂದು ಹೇಳಲು ಸಾಧ್ಯವೇ? ಈ ಬಗ್ಗೆ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರಾದ ಡಾ.ಗಿರಿಧರ ಬಾಬು ಹೇಳಿಕೆಯನ್ನು ನೀಡಿದ್ದಾರೆ.
ರಾಜಧಾನಿ ಮತ್ತು ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಾ ಸಾಗುತ್ತಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ದೈನಂದಿನ ಟೆಸ್ಟಿಂಗ್ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿರುವ ಡಾ.ಗಿರಿಧರ ಬಾಬು, ಟೆಸ್ಟಿಂಗ್ ಕಮ್ಮಿಯಾಗಿರುವುದರಿಂದ ಸೋಂಕಿನಲ್ಲಿ ಇಳಿಕೆಯಾದರೆ ಅದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.

"ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ, ಇದರಿಂದ ಟೆಸ್ಟಿಂಗ್ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇದರಿಂದ ಕೊರೊನಾ ಕೇಸುಗಳು ಕಮ್ಮಿಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ"ಎಂದು ಡಾ.ಗಿರಿಧರ ಬಾಬು ಅಭಿಪ್ರಾಯ ಪಟ್ಟಿದ್ದಾರೆ.
"ದೈನಂದಿನ ಕೋವಿಡ್ ಪರೀಕ್ಷೆಯ ಸಂಖ್ಯೆ ಒಂದು ಲಕ್ಷಕ್ಕಿಂತ ಕಮ್ಮಿಯಾಗಬಾರದು. ಜೊತೆಗೆ, ಸೋಂಕು ಪ್ರಕರಣಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆಯಾದಲ್ಲಿ ಮಾತ್ರ ಸೋಂಕು ಇಳಿಕೆಯಾಗಿದೆ ಎಂದು ಹೇಳಬಹುದು"ಎಂದು ವೈದ್ಯರು ಹೇಳಿದ್ದಾರೆ.
Recommended Video
"ಲಾಕ್ ಡೌನ್ ತೆರವಾದ ನಂತರ, ಟೆಸ್ಟಿಂಗ್ ಪ್ರಮಾಣ ಏರಿಕೆಯಾದ ನಂತರವಷ್ಟೇ ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗಿದೆಯಾ, ಇಲ್ಲವಾ ಎಂದು ಹೇಳಲು ಸಾಧ್ಯ"ಎಂದು ಡಾ.ಗಿರಿಧರ ಬಾಬು ಹೇಳಿದ್ದಾರೆ.












Click it and Unblock the Notifications