ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್ : ಹಲವು ನಾಯಕರಿಂದ ಕರೆ
ಹುಬ್ಬಳ್ಳಿ, ಮಾರ್ಚ್ 24: ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಪ್ರಕರಣ ಗದ್ದಲದ ಜೋರಾಗಿದ್ದು, ಇದರ ನಡುವೆ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಹಿರಿಯ ನಾಯಕರಾದ ಬಸವರಾಜ್ ಹೊರಟ್ಟಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಪತ್ರ ಹರಿದಾಡುತ್ತಿದೆ. ನಿನ್ನೆ(ಮಾರ್ಚ್ 23) ಬೆಳಗ್ಗೆ ಮಾಧ್ಯಮಗಳ ಮುಂದೆ ರಾಜೀನಾಮೆ ಮಾತುಗಳನ್ನಾಡಿರುವ ಬೆನ್ನಲ್ಲೇ ಇದೀಗ ಹೊರಟ್ಟಿ ಅವರ ರಾಜೀನಾಮೆ ಪತ್ರ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಪತ್ರ ವೈರಲ್ ಆಗಿರುವ ಪತ್ರದಲ್ಲಿ ಮಾರ್ಚ್ 18 ಎನ್ನುವ ದಿನಾಂಕ ನಮೂದಾಗಿದೆ. ಹಾಗೇ ಪತ್ರದಲ್ಲಿ ಬಸವರಾಜ್ ಹೊರಟ್ಟಿ ಅವರ ಸಹಿ ಸಹ ಇಲ್ಲ. ಹೀಗಾಗಿ ರಾಜೀನಾಮೆ ಪತ್ರ ಹಲವು ಗೊಂದಲಗಳಿಗೆ ಕಾರಣವಾಗಿದೆ. ಇನ್ನೂ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕುರಿತು ಬಸವರಾಜ ಹೊರಟ್ಟಿ ಅವರು ಮಾತನಾಡಿ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ನಿನ್ನೆ (ಮಾರ್ಚ್ 23) ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಈಗಾಗಲೇ ತಮ್ಮ ರಾಜೀನಾಮೆಯನ್ನು ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾರ್ಚ್ 18ರಂದೇ ಹೊರಟ್ಟಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಾಣೇಶ್ ಅವರಿಗೆ ಕಳುಹಿಸಿದ್ದು, ದಿನಾಂಕ 1-4-25ರಂದು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ವೈಯಕ್ತಿ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಸದರಿ ರಾಜೀನಾಮೆಯನ್ನು 31-3-25ರೊಳಗೆ ಸ್ವೀಕರಿಸಿ ದಿನಾಂಕ 1-4-2025ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ಹಾಗೂ ನನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿದೆ. ಅದರೆ, ಪತ್ರದ ಕೊನೆಯಲ್ಲಿ ಮಾತ್ರ ಹೊರಟ್ಟಿ ಅವರ ಸಹಿ ಇಲ್ಲ. ಹೀಗಾಗಿ ಈ ರಾಜೀನಾಮೆ ಪತ್ರ ಕುರಿತು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಹಲವು ನಾಯಕರು ಕರೆ
ಇನ್ನೂ ಹುಬ್ಬಳ್ಳಿಯಲ್ಲಿ ರಾಜೀನಾಮೆ ಪತ್ರ ವೈರಲ್ ಆಗುತ್ತಿರುವ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾತನಾಡಿ, ಆ ರಾಜೀನಾಮೆ ಪಾತ್ರಕ್ಕೆ ಸಹಿ ಇರಲಾರದ ಪತ್ರ ಆಗಿದ್ದು, ಅದು ನನ್ನದೇ ಪತ್ರ. ಟೈಪಿಸ್ಟ್ ಗೆ ಹೇಳಿದ್ದೆ ಸಹಿ ಮಾಡಲು ಇಟ್ಟುಕೊಂಡಿದ್ದೆ ಎಂದು ಸ್ಪಷ್ಟಪಡಿಸಿದರು. ಸಹಿ ಮಾಡಿದ ಪತ್ರ ಇನ್ನು ಲಾಕರ್ ನಲ್ಲಿದ್ದು, ನನ್ನ ಪಿ.ಎ.ಆ ಪತ್ರವನ್ನು ವೈರಲ್ ಮಾಡಿದ್ದಾರೆಂದು ಬಸವರಾಜ್ ಹೊರಟ್ಟಿ ಅವರು ಹೇಳಿದರು.
ದಿನಾಂಕ 21 ಹಾಕಿದ್ದೆ ಅದು ನಿನ್ನೆ ಪತ್ರ ಬಹಳ ಜನರ ಹತ್ತಿರ ಹೋಗಿ. ದೆ ಮತ್ತೆ ಎಲ್ಲರೂ ಕುಡಿ ಬಹಳ ಜನ ಬೇಡ ಎಂದಿದ್ದಾರೆ ಆದರೆ, ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ , ಆದರೆ, ಇದೀಗ ಬಹಳ ಜನ ನನಗೆ ಕಾಲ್ ಮಾಡತೀದಾರೆ. ಸಾಕಷ್ಟು ಸಚಿವರು,ಪರಿಷತ್ ಸದಸ್ಯರು ಕಾಲ್ ಮಾಡತೀದಾರೆ. ದುಡುಕಿನ ನಿರ್ಧಾರ ಬೇಡ ಅಂತೀದಾರೆ. ಕೆಲ ಸಲ ಹಿತೈಷಿಗಳ ಮಾತು ಕೇಳಬೇಕಾಗತ್ತೆ. ಪತ್ರ ಇನ್ನು ಲಾಕರ್ ನಲ್ಲಿದೆ. ರಾಜೀನಾಮೆ ಕುರಿತು ವಿಚಾರ ಮಾಡತೀನಿ ಈಗ ಸ್ವಲ್ಪ ಮಾನಸಿಕವಾಗಿ ಬೇಸರವಾಗಿದೆ ಎಂದರು.
ಮಾನಸಿಕವಾಗಿ ಬೇಸರವಾಗಿದೆ . ಹೀಗಾಗಿ ನಾನು ರಾಜೀನಾಮೆ ಕೊಡೋ ನಿರ್ಧಾರ ಮಾಡಿದ್ದೆ. ಕೆಲವರು ನಡುವಳಿಕೆ ನನ್ನ ಮನಸಿಗೆ ಸಮಾಧಾನ ವಾಗಿಲ್ಲ.ಕಳೆದ ಮೂರು ವರ್ಷಗಳಿಂದ ಅಸಮಾದಾನ ವಾಗಿದೆ. ರಾಜ್ಯದ ಎಲ್ಲ ಕಡೆಯಿಂದ ಕರೆ ಬಂದಿದೆ. ಮಾನಸಿಕ ನೆಮ್ಮದಿ ಹಾಳಗಿದೆ. ಇನ್ನು ಈ ಕುರಿತು ನಾಳೆ ಒಂದು ದಿನ ಕುಳಿತು ವಿಚಾರ ಮಾಡುತ್ತೇನೆ. ಆತ್ಮೀಯರ ಕೇಳಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.












Click it and Unblock the Notifications