ಕರ್ನಾಟಕದ ಮಹಿಳೆಯರನ್ನು ನಾಯಕಿ ಮಾಡಲು ಕಾಂಗ್ರೆಸ್ ತಯಾರಿಲ್ಲ, ನಾ ನಾಯಕಿ ಟೈಟಲ್ ಕುರಿತು ಸಿಎಂ ವ್ಯಂಗ್ಯ
ಹುಬ್ಬಳ್ಳಿ,ಜನವರಿ 16: ಕಾಂಗ್ರೆಸ್ ನವರ ನಾ ನಾಯಕಿ ಟೈಟಲ್ ನೋಡಿದೆ. ನಾ ನಾಯಕಿ ಅಂದ್ರೇನು, ಅವರ ಫೋಟೋ ಹಾಕಿ ಅವರೇ ನಾಯಕಿ ಅಂತಿದ್ದಾರೆ. ನಮ್ಮ ಕರ್ನಾಟಕದ ಮಹಿಳೆಯರನ್ನು ನಾಯಕಿ ಮಾಡಲು ಕಾಂಗ್ರೆಸ್ ನವರು ತಯಾರಿಲ್ಲ ಎಂದು ನಾ ನಾಯಕಿ ಸಮಾವೇಶದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸೋಮವಾರ ಹುಬ್ಬಳ್ಳಿಯಲ್ಲಿ ಮಾಧfಯಮಗಳೊಂದಿಗೆ ಮಾತನಾಡಿದ ಅವರು, ನಾ ನಾಯಕಿ' ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಬರಲಿ ಬಿಡಲಿ, ಆದರೆ ಅದಕ್ಕೆ ನಮ್ಮ ತಕರಾರು ಇಲ್ಲ ಎಂದಿದ್ದಾರೆ.
ಇನ್ನೂ ಇವತ್ತು ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭ ಮಾಡ್ತೀದಿವಿ. ಕೇಂದ್ರದ ನಾಯಕರಾದ ಅನುರಾಗ್ ಸಿಂಗ್ ಠಾಕೂರ ಬಂದಿದ್ದಾರೆ. ಈಗಾಗಲೇ ಬಹಳ ಅದ್ಭುತವಾಗಿ ಯುವಜನೋತ್ಸವ ಆಗಿದೆ. ಈ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಭಾಗದಲ್ಲಿ ಈ ರೀತಿ ಕಾರ್ಯಕ್ರಮ ಆದರೆ ಯುವಕರಿಗೆ ಸ್ಪೂರ್ತಿ ಸಿಗುತ್ತದೆ. ನಾವು ಯುವಕರಿಗಾಗಿ ಹೊಸ ಪಾಲಿಸಿ ಮಾಡಿದ್ದೇವೆ.

ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಕೊಟ್ಟಿದ್ದೇವೆ. ಯುವಕರಿಗಾಗಿ ನಾವು ಕ್ರೀಡೆ,ಶಿಕ್ಷಣದಲ್ಲಿ ಅವಕಾಶ ಕಲ್ಪಿಸಿದ್ದೇವೆ. ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಅವಕಾಶ ಕೊಟ್ಟು ಪ್ರತಿಭೆ ಗುರುತಿಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಯುವಜನೋತ್ಸವ ಅಲ್ಲ ವಿನಾಶೋತ್ಸವ ಎಂದು ಹೇಳಿದ್ದು ಖಂಡನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರಿಹಾಯ್ದಿದ್ದಾರೆ.
ಇನ್ನೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರ, ಕಾಂಗ್ರೆಸ್ ನವರದ್ದು ಯಥಾ ಬುದ್ದಿ ತಥಾ ಮಾತು. ಕಾಂಗ್ರೆಸ್ ಗೆ ವಿನಾಶದ ಕನಸುಗಳು ಬೀಳ್ತೀವೆ. ಇತ್ತೀಚೆಗೆ ಅವರ ಮಾತು ನಡುವಳಿಕೆ ಕೆಳ ಮಟ್ಟದ ಮಾತುಗಳನ್ನು ಆಡ್ತೀದಾರೆ. ಅವರು ಬಹಳ ಹತಾಶೆದಿಂದ ಇದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಕಾಂಗ್ರೆಸ್ ನ ನಾ ನಾಯಕಿ ಸಮಾವೇಶದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ವಿಚಾರವಾಗಿ ಮಾತನಾಡಿದ ಅವರು, ಮಹಿಳೆಯರಿಗೆ ಅಧಿಕಾರ ಸಿಕ್ರೇ ತಾನೆ. ಅವರ ಏನೇನೋ ಅಶ್ವಾಸನೆ ಕೊಡುತ್ತಿದ್ದಾರೆ ಎಂದರು.
ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಗೆ ಬೆದರಿಕೆ ಕರೆ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಜೈಲಿನಿಂದಲೇ ಕರೆ ಹೋಗಿರೋದ್ರಿಂದ ಖಂಡಿತಾ ಆರೋಪಿಗಳು ಸಿಗ್ತಾರೆ. ಕರೆ ಮಾಡಿದವರ ಹಿನ್ನೆಲೆ ಏನು, ಯಾರು ಅವರ ಹಿಂದೆ ಇದಾರೆ ಅನ್ನೋದು ಬಹಳ ಮುಖ್ಯ. ಅದನ್ನು ನಾವು ಹೊರ ತೆಗೆಯುತ್ತೇವೆ ಎಂದು ಹೇಳಿದರು.












Click it and Unblock the Notifications