ಕಾಂಗ್ರೆಸ್‌ ಸೇರುವ - ಹೊಸ ಪಕ್ಷದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ!

ಬಿಜೆಪಿಯಿಂದ 6 ವರ್ಷಗಳ ಅವಧಿಗೆ ಉಚ್ಚಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್‌ ಪಕ್ಷವನ್ನು ಸೇರುವ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಹಲವು ವಿಷಯಗಳ ಬಗ್ಗೆ ಮಾನತಾಡಿದ್ದಾರೆ. ಯತ್ನಾಳ್ ಅವರು ಈಚೆಗಷ್ಟೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರೊಂದಿಗೆ ರಹಸ್ಯ ಸಭೆ ನಡೆಸಿದ್ದರು. ಇದೀಗ ವಿವಿಧ ವಿಷಯಗಳ ಬಗ್ಗೆಯೂ ಅವರು ಮಾತನಾಡಿದ್ದು. ಕಾಂಗ್ರೆಸ್‌ ಸೇರುವ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಸುದ್ದಿಗೋಷ್ಠಿ ನಡೆಸಿದ್ದು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶನಿವಾರ ಪಂಚಮಸಾಲಿ ಮುಖಂಡರು ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿ ನಡೆಸಿ ಜಯಮೃತ್ಯುಂಜಯ ಶ್ರೀಗಳ ನಡೆಗೆ ಪಂಚಮಸಾಲಿ ಟ್ರಸ್ಟ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಭಾನುವಾರ ಅದೇ ಹೋಟೆಲ್‌ನಲ್ಲಿ ಯತ್ನಾಳ್ ಸುದ್ದಿಗೋಷ್ಠಿ ನಡೆಸಿದ್ದಾರೆ.

Basanagouda Patil Yatnals Explosive Statement Joining Congress and Forming New Party

ಸುವರ್ಣಸೌಧದ ಮುಂದೆ ಮೀಸಲಾತಿ ಹೋರಾಟ ನಡೆದಾಗ 50,000 ಸಾವಿರ ಜನ ಸೇರಿದ್ದರು. ಕೇಂದ್ರ ಸಚಿವ ಅಮಿತ್ ಶಾ, ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕರಂದ್ಲಾಜೆ, ಕಟೀಲು ಸೇರಿದಂತೆ ಹಲವರು ಇದ್ದರು. ಅಂದು ನಮಗೆ ಮೀಸಲಾತಿ ಕೊಟ್ಟಿದ್ದರು. ಕೊನೆಯ ದಿನ ನಮಗೆ ಮೀಸಲಾತಿ ನೀಡಲಾಗಿತ್ತು. ಆದರೆ, ಮುಂದೆ ಬಂದ (ಕಾಂಗ್ರೆಸ್‌) ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಇಚ್ಛಾ ಶಕ್ತಿ ತೋರಿಸಿಲ್ಲ. ಇನ್ನು ಸುಪ್ರೀಂ ಕೋರ್ಟ್‌ ಸಹ ಇದನ್ನೇ ಹೇಳಿದೆ ಎಂದು ಅವರು ಹೇಳಿದ್ದಾರೆ.

Take a Poll

ವೀರಶೈವರ, ಲಿಂಗಾಯತರು ಮೀಸಲಾತಿ ಕೇಳಿದರೆ ಸಂವಿಧಾನ ವಿರೋಧಿ ಅಂತಾರೆ. ಆದರೆ ಮುಸ್ಲಿಂರಿಗೆ ಸಂವಿಧಾನ ವಿರೋಧಿಯಾಗಿ ಮೀಸಲಾತಿ ಕೊಟ್ಟಿದ್ದಾರೆ. ಧರ್ಮಾಧಾರಿತ ಮೀಸಲಾತಿ ಇಲ್ಲ ಅಂದರೂ ಕರ್ನಾಟಕದಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಸುವರ್ಣ ಸೌಧದ ಮುಂದೆ ಶಾಂತಿಯುತ ಹೋರಾಟ ಮಾಡಿದರೆ, ನಮಗೆ ಹೊಡೆದಿದ್ದರು. ನಮ್ಮ ಸಮಾಜಕ್ಕೆ ಚಿತ್ರಹಿಂಸೆ ಕೊಟ್ಟಿದ್ದರು. ಕಾನೂನು ಬಾಹಿರವಾಗಿ ಲಾಠಿ ಚಾರ್ಜ್‌ ಮಾಡಿಸಲಾಗಿತ್ತು.

ರಾಷ್ಟ್ರೀಯ ಮನವ ಹಕ್ಕುಗಳ ನಿಯಮ ಮೀರಿ ಲಾರಿ ಚಾರ್ಜ್ ಮಾಡಿಸಲಾಗಿತ್ತು. ನಮ್ಮ ಮೇಲೆ ನಿಯಮ ಮೀರಿ ಲಾಠಿ ಚಾರ್ಜ್ ಮಾಡಿಸಿದ್ದರು.

ನಾವು ಯಾರೂ ಕಲ್ಲು ತೂರಾಟ ಮಾಡಿರಲಿಲ್ಲ ಇಲ್ಲವೇ ಬಸ್‌ಗೆ ಬೆಂಕಿ ಹಚ್ಚಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದುವರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ಲಿಂಗಾಯತರದ್ದು ಬಹಳ ಆಗಿದೆ ಎಂದಿದ್ದಾರೆ. ನನ್ನ ಹೊಡೆಯೋಕೆ ಬಂದಿದ್ದರು.

ಲಾಠಿಚಾರ್ಜ್ ಮಾಡಿದ ಮುಸ್ಲಿಂ ಅಧಿಕಾರಿಗೆ ಬಹುಮಾನ ಕೊಟ್ಟಿದ್ದಾರೆ. ಹಿಂದೂಗಳಿಗೆ ಈ ಸರ್ಕಾರ ಏನೂ ಮಾಡಿಲ್ಲ. ಹೀಗಾಗಿ ನಮ್ಮ ಗುರುಗಳ ರಾಷ್ಟ್ರೀಯ ಮಾನವ ಹಕ್ಕುಗಳ‌ ಆಯೋಗಕ್ಕೆ ದೂರು ಕೊಟ್ಟಿದ್ದರು. ಇದೀಗ ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ. ನಾನು ಇದನ್ನು ಸ್ವಾಗತ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ನನ್ನನ್ನು ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದೆ. ಬಿಜೆಪಿಯಿಂದ ನನ್ನ ಉಚ್ಚಾಟನೆಗೆ ಕಾರಣ ಎನು. ನಾನೇನದಾರೂ ಪಕ್ಷ ವಿರೋಧಿ ಚುಟುವಟಿಕೆ ಮಾಡಿದ್ದೇನೆ.. ಒಂದು ಭ್ರಷ್ಟ ಕುಟುಂಬದ ಮಾತು ಕೇಳಿ ಉಚ್ಚಾಟನೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರು ಇಡೀ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾನು ಯಾವುದೇ ಹೋರಾಟಕ್ಕೂ ಯಾರಿಗೂ ಹೋರಾಟ ಮಾಡುವಂತೆ ಹೇಳಿಲ್ಲ. ಇದು ಯಾರ ಪ್ರಚೋದಿತ ಹೋರಾಟ ಅಲ್ಲ..

ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಇರಿಸಿದ್ದಾರೆ. ಯಾವ ನಾಯಕರಿಗೂ ಹೋರಾಟ ಆಗಿಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ಹೊರಗೆ ಹಾಕಿದಾಗ ಸಹ ಇಷ್ಟು ಹೋರಾಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಹಿಂದೂಪರ ನಾಯಕರನ್ನು ತುಳಿಯುತ್ತಿದ್ದಾರೆ ಎನ್ನುವುದು ಜನರ ಭಾವನೆ. ಹಿಂದೂಗಳ ಕೊಲೆಯಾದಾಗ ಯಾವ ಬಿಜೆಪಿ ನಾಯಕರು ಹೋಗಿಲ್ಲ. ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಕೊಲೆಯಾಗಿದೆ. ಯಾರಿಗಾದರೂ ಶಿಕ್ಷೆಯಾಗಿದೆಯೇ. ಎಲ್ಲೆ ಅನ್ಯಾಯ ಆದರೂ ನಾನು ಹೋಗಿದ್ದೇನೆ.

ಬಿಜೆಪಿಯ ಕಾನೂನು ಘಟಕದಿಂದ ಯಾರಿಗೂ ಸಹಾಯ ಮಾಡಿಲ್ಲ ಎಂದೂ ಅವರು ದೂರಿದ್ದಾರೆ.

ನಮ್ಮ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ನಾನು ಸ್ವಾಮೀಜಿಗೆ ಹೋರಾಟ ಮಾಡಿ ಅಂತ ಹೇಳಿಲ್ಲ. ಅವರೇ ನಮ್ಮ ಪರವಾಗಿ ಮಾತಾಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭ ಮಾಡಿದ್ದೇ ನಾನು. ಬೆಂಗಳೂರುವರೆಗೂ ಪಾದಯಾತ್ರೆ ಮಾಡಿದ್ದೆವು.

ಹುಬ್ಬಳ್ಳಿಯ ಮಹಾನ್ ವಕೀಲ ಸ್ವಾಮೀಜಿಗೆ ಭೇಟಿಗೆ ಬಂದಿದ್ದ. ಹೋರಾಟ ಸ್ಥಗಿತ ಮಾಡುವಂತೆ ಹೇಳಲು ಬಂದಿದ್ದ. ಯಡಿಯೂರಪ್ಪ ಅವರ ಆದೇಶದಂತೆ ವಕೀಲ ಬಂದಿದ್ದ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ಮೋಹನ ಲಿಂಬಿಕಾಯಿ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.

ಸ್ವಾಮೀಜಿ ಸಮುದಾಯರ ಪರ ಹೋರಾಟ ಮಾಡುತ್ತಿದ್ದಾರೆ. ಸಮುದಾಯದವರಿಗೆ ಅನ್ಯಾಯದ ಆದಾಗ ಹೋರಾಟ ಮಾಡಿದ್ದಾರೆ. ವಿನಯ ಕುಲಕರ್ಣಿ,ಲಕ್ಷ್ಮೀ ಅಕ್ಕನ ಪರ ಮಾತಾಡಿದ್ದಾರೆ. ಶನಿವಾರ ಅಖಿಲ್ ಭಾರತೀಯ ಪಂಚಮಸಾಲಿ ಟ್ರಸ್ಟ್ ನಿಂದ ಸುದ್ದಿಗೋಷ್ಠಿ‌ ಮಾಡಿದ್ದಾರೆ.

ಅಧ್ಯಕ್ಷ ಕೂಡಲಸಂಗಮ ಆಸ್ತಿಯನ್ನು ತನ್ನ ಕುಟುಂಬಕ್ಕೆ ಮಾಡಿಕೊಂಡಿದ್ದಾನೆ. ಕೆಲವರು ಸಮುದಾಯದ ಹೆಸರಲ್ಲಿ ರೊಕ್ಕ ತಂದಿದ್ದಾರೆ. ಟ್ರಸ್ಟ್‌ನಲ್ಲಿ ಎಲ್ಲರೂ ಕುಟುಂಬಸ್ಥರೇ. ಒಂದು ದಿನ ಹೋರಾಟ ಮಾಡಿಲ್ಲ. ಯಡಿಯೂರಪ್ಪ ಅವರ ಚೇಲಾ ನಿನ್ನೆ ಮಾತಾಡಿದರು ಎನ್ನುವ ಮೂಲಕ ಮೋಹನ‌ ಲಿಂಬಿಕಾಯಿಗೆ ಯಡಿಯೂರಪ್ಪ ಚೇಲಾ ಎಂದು ಯತ್ನಾಳ್ ಹೇಳಿದ್ದಾರೆ.

ನಾನು ಮಠಾಧೀಶರ ಸಹಾಯ ತಗೆದುಕೊಂಡಿಲ್ಲ. ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್ ಹಾಗೂ ಜಗದೀಶ್ ಶೆಟ್ಟರ್ ಸೋಲಿಸಲು ಯಡಿಯೂರಪ್ಪ ಚೇಲಾರನ್ನು ಕಾಂಗ್ರೆಸ್‌ಗೆ ಕಳುಹಿಸಿದ್ದರು. ಯಡಿಯೂರಪ್ಪ ವೀರಶೈವರ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ ಮಾಡಿ‌ ದೊಡ್ಡ ವ್ಯಕ್ತಿಯಾದ್ದಾರೆ.

ಯಡಿಯೂರಪ್ಪ ಅವರು ಮಾಡಿದ ಭ್ರಷ್ಟಾಚಾರದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳ್ಸಿದ್ದರು. ವಿಜಯೇಂದ್ರ ನಕಲಿ ಸಹಿ ಮಾಡಿದ್ದ. ಆ ಕುಟುಂಬದಿಂದ ಮೋಸ ಆಗಿದೆ. ಇಂದು ನನ್ನನ್ನೇ ಹೊರೆಗೆ ಹಾಕಿರಬಹುದು. ಈ ರಾಜ್ಯದಲ್ಲಿ ಹಿಂದೂತ್ವದ ನಾಯಕರು ಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸೇರುವ ಬಗ್ಗೆ ಯತ್ನಾಳ್ ಹೇಳಿದ್ದೇನು ?

ಇನ್ನು ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆಯೂ ಮಾತನಾಡಿದ್ದಾರೆ. ನಾನು ಅಲ್ಲ ನನ್ನ ಹೆಣ ಹಾಗೂ ಚಪ್ಪಲಿನೂ ಕಾಂಗ್ರೆಸ್‌ಗೆ ಹೋಗಲ್ಲ ಅಂತ ಹೇಳಿದ್ದಾರೆ. ಹೊಸ ಪಕ್ಷದ ಬಗ್ಗೆ ಆಲೋಚನೆ ಇದೆ. ಅದು ಅಷ್ಟ ಸುಲಭವೂ ಇಲ್ಲ. ಹಿಂದೂಗಳ ಮತ ವಿಭಜನೆ ಆಗಬಾರದು ಎನ್ನುವುದು ನನ್ನ ಪ್ಲ್ಯಾನ್. ನಾನು ಪಕ್ಕ ಪ್ಲ್ಯಾನ್ ಮಾಡ್ದೀನಿ ಎನ್ನುವ ಮೂಲಕ ಪರೋಕ್ಷವಾಗಿ ಹೊಸ ಪಕ್ಷದ ಸುಳಿವು ನೀಡಿದ್ದಾರೆ.

ಇನ್ನು ರಾಜಕೀಯ ಜೀವನದಲ್ಲಿ‌ ಕೆಲ ಸಲ ಮಾತು‌ ಮುಳುವಾಗಿದೆ ಎಂದು ಯತ್ನಾಳ್ ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+