ಗಣೇಶ ಕೂರಿಸಲು ನಾವ್ಯಾಕ್ರಿ ಪರ್ಮಿಷನ್ ತಗೋಬೇಕು, ಇದು ಹಿಂದೂಸ್ತಾನ ಐತಿ: ಸರ್ಕಾರಕ್ಕೆ ಯತ್ನಾಳ್ ಸವಾಲ್
ರಾಯಚೂರು, ಸೆಪ್ಟೆಂಬರ್ 08: ಗಣೇಶ್ ಕುರಿಸಲು ನಾವ್ಯಾಕ್ರಿ ಪರ್ಮಿಷನ್ ತಗೊಬೇಕು. ಇದು ಹಿಂದೂಸ್ಥಾನ ಐತಿ, ಇದೇನೂ ಪಾಕಿಸ್ತಾನನಾ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು, ಕಾಂಗ್ರೆಸ್ ಅಂದ್ರೆ ಯಾವಾಗಲೂ ಹಿಂದೂ ವಿರೋಧಿ ಹಿನ್ನಲೆ ಇದೆ,ಆದ್ರೆ ನಾವು ಒಂದು ಮಾತು ಹೇಳುತ್ತೇನೆ. ನಮ್ಮ ಹಬ್ಬ ಹರಿ ದಿನಗಳಮೇಲೆ ಯಾರು ಯಾವ ನಿರ್ಬಂಧ ಹಾಕಿದರೂ ನಾವು ಕೇಳುವುದಿಲ್ಲ. ನಾವು ವಿಜಯಪುರದಲ್ಲಿ ಡಿಜೆ ನೂ ಹಾಕುತ್ತೇವೆ. ರಾಮ ಮಂದಿರದ ಹಾಡು ಹಾಕ್ತೀವಿ. ಈಗಲ್ಲ ಹಿಂದಿನಿಂದಲೂ ನಾವು ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಈಗಲೂ ನಾವು ಗಣಪತಿ ಕೂರಿಸಲು ಪೊಲೀಸ್ ಅನುಮತಿ ತೆಗೆದುಕೊಳ್ಳುವುದಿಲ್ಲ. ಎಷ್ಟು ಪ್ರಕರಣ ಹಾಕುತ್ತಾರೆ ಹಾಕಲಿ, ಅವರ ಪರ್ಮಿಷನ್ ನಾವ್ಯಾಕ್ರೀ ತಗೋಬೇಕು. ಗಣಪತಿ ಕೂಡಿಸೋದಕ್ಕೆ ಇದು ಹಿಂದೂಸ್ತಾನ ಐತಿ, ಪಾಕಿಸ್ತಾನಾ ಎಂದು ಕಿಡಿಕಾರಿದ್ದಾರೆ.
ಮತ್ತೆ ನಮ್ಮಿಂದಲೇ ಕೋಮು ಗಲಭೆ ಯಾಗ್ತಾವಾ.? ಅವರಿಂದ ಏನೂ ಆಗೋದಿಲ್ಲವಾ.? ಅವರು ಏನೇನೋ ಮಾಡ್ತಾರಲ್ಲ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗ್ತಾರೆ. ಅವರ ಮೇಲೆ ಕ್ರಮ ಇಲ್ಲ. ನಾವು ವಿಜಯಪುರ ಸಿಟಿನ್ಯಾಗ ಯಾವ ಪೊಲೀಸ್ ಪರಮಿಷನ್ ಇಲ್ಲ, ಮೈಕ್ ಪರಮಿಷನ್ ಇಲ್ಲ ಎಂದು ಹೇಳಿದ್ದಾರೆ.

ನಾವು ಡಿಜೆನೂ ಹಾಕುತ್ತೇವೆ, ಕುಣಿಯುತ್ತೇವೆ. ನಮಗೆ ಹೆಂಗ್ ಹಬ್ಬ ಮಾಡಬೇಕೋ ಹಂಗ್ ಮಾಡ್ಕೊಳ್ತೇವೆ. ಅದೂ ನಮ್ಮ ಅಧಿಕಾರ ಐತಿ, ನಮಗೂ ಹಕ್ಕಿದೆ. ನಾವು ಮಾಡ್ತೇವೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತದೆಯೂ ಮಾಡಿಲಿ, ಅದನ್ನ ಎದರಿಸಲು ನಾವು ಸಿದ್ದಿವಿದ್ದೇವೆ. ಕಾಂಗ್ರೆಸ್ ನವರು ಏನಾದ್ರೂ ಕಠಿಣ ಕಾನೂನು ತರುತ್ತೇವೆ ಎಂದ್ರೆ, ನೀವು ಎಲ್ಲಾ ಧರ್ಮದವರಿಗೂ ತನ್ನಿ. ಆಗ ನಾವು ಒಪ್ಪುತ್ತೇವೆ.. ಬರೀ ಹಿಂದೂಗಳಿಗಲ್ಲ. ನಮಗೇ ಮಾತ್ರ ತರ್ತೇವೆ ಅಂದ್ರೆ ನಾವು ಒಪ್ಪುವುದಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ನಲ್ಲಿ ಎರಡ್ಮೂರು ತಿಂಗಳಲ್ಲಿ ಅಸಮಾಧಾನ ಸ್ಪೋಟವಾಗುತ್ತೆ ನೋಡ್ತಾ ಇರಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಟ ಆಡುತ್ತಿದ್ದಾನೆ. ನಮ್ಮ ಮನಸ್ಥಿತಿ ಕಳೆಯಲು ಹಾಗೂ ಕಾರ್ಯಕರ್ತರ, ಮುಖಂಡ ಮನೋಸ್ಥೈರ್ಯ ಕುಗ್ಗಿಸಲು ಹೀಗೆ ಮಾಡ್ತಿದ್ದಾರೆ. 135 ಜನರನ್ನೇ ಸಮಾಧನಾ ಮಾಡುವುದಕ್ಕೆ ಅವರ ಕೈಯಲ್ಲಿ ಆಗುತ್ತಿಲ್ಲ, ಎರಡು ಮೂರು ತಿಂಗಳಲ್ಲಿ ಅಲ್ಲೇ ಸ್ಫೋಟ ಆಗುತ್ತೆ ನೋಡ್ತಿರಿ. ಇನ್ನೂ ಬಿಜೆಪಿ ಅವ್ರನ್ನ ಕರೆದುಕೊಂಡು ಹೋಗಿ ಟಿಕೆಟ್ ಕೊಡ್ತಾರಾ..? ಲೇವಡಿ ಮಾಡಿದರು.
ಬೈಂದೂರು ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಹೋಗೊವಾಗ ಎಲ್ಲರೂ ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಅಂತಲೇ ಹೇಳ್ತಾರೆ. ಆದ್ರೆ ಅವರ ಭವಿಷ್ಯವೇ ಮುಗಿದಿರತ್ತೆ. ಅಲ್ಲಿ ಹಾಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹಾಗಾಗಿ ಅಲ್ಲೇ ಬಿಜೆಪಿಗೆ ಭವಿಷ್ಯವಿದ್ದಾಗ. ಇವರ ಭವಿಷ್ಯ ಹೇಗೆ ಇರಲ್ಲ. ಕಾರ್ಯಕರ್ತರು, ಬೆಂಬಲಿಗರ ಮೇಲೆ ವಿಶ್ವಾಸವಿಲ್ಲ ಹಾಗಾಗಿ ಹೋಗಿರ್ತಾರೆ. ವಿಧಾನಸಭೆ, ಲೋಕಸಭೆಯಲ್ಲಿನ ಫಲಿತಾಂಶವೇ ಬೇರೆ. ಲೋಕಸಭೆಗೆ ಯಾರನ್ನ ಕಳುಹಿಸಬೇಕು,ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಗೊತ್ತಿದೆ.
ಜನರಿಗೆ ಮೋದಿ ಬೇಕು ಅನ್ನೋ ಆಸೆಯಿದೆ. ಸದ್ಯ ಭದ್ರತೆ, ಆರ್ಥಿಕತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತ ಈಗ ಜಗತ್ತಿನ ಮೂರನೇ ಶಕ್ತಿಯಾಗಿ ಬೆಳೆದಿದೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತಿದೆ ಎಂದ ಅವರು ಇಂಡಿಯಾ ಮೈತ್ರಿ ಕೂಟದಲ್ಲಿ ಸೋನಿಯಾ, ರಾಹುಲ್,ಲಾಲು ಜಾಮೀನಿನ ಮೇಲಿದ್ದು, ಎಲ್ಲರೂ ಜಾಮೀನು ಗುರಾಕಿಗಳು ಎಂದು ಕಟುಕಿದರು.












Click it and Unblock the Notifications