Basanagouda Patil Yatnal: ಬೊಮ್ಮಾಯಿ ಸೋಲಿಸಲು ಮಾಡಿದ್ದೇನು ಗೊತ್ತಿದೆ: ವಿಜಯೇಂದ್ರ ಜತೆ ರಾಜೀ ಇಲ್ಲವೇ ಇಲ್ಲ: ಯತ್ನಾಳ್
ಬೆಂಗಳೂರು, ಫೆಬ್ರವರಿ 11: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿಯಲ್ಲಿ ಸಹ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ಮುಂದುವರೆಸಿದ್ದಾರೆ.
ಹಾವೇರಿಯಲ್ಲಿ ಭಾನುವಾರ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಿಜಯೇಂದ್ರ ಜೋಡಿ ರಾಜೀ ಆಗೋ ಪ್ರಶ್ನೆನೇ ಇಲ್ಲ. ಯಾರ್ ಜೋಡಿ ರಾಜೀ ಆಗಬೇಕು? ಅಪ್ಪ ಮಕ್ಕಳ ಜೊತೆ ರಾಜೀ ಆಗಬೇಕಾ?. ಅವರೊಂದಿಗಿನ ರಾಜೀ ಅವಷ್ಯಕತೆ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ವಿಜಯೇಂದ್ರ ಜೊತೆ ರಾಜೀ ಆಗಲು ನಾನೇನು ಲೋಕಸಭಾ ಟಿಕೆಟ್ ಕೇಳಿದ್ದೇನಾ?. ವಿಜಯೇಂದ್ರನಿಂದ ನನಗೇನು ಆಗಬೇಕಿಲ್ಲ. ಅವರೊಂದಿಗೆ ನನ್ನದೇನು ವ್ಯವಹಾರ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಕೈವಾಡ?: ಆರೋಪ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂಬುದಷ್ಟೇ ನನ್ನ ಮುಂದಿದೆ. ವಿಜಯೇಂದ್ರ ಅವರ ಉದ್ದೇಶ ಏನು?. ಅವರು ಮಾಜಿ ಸಚಿವ ವಿ. ಸೋಮಣ್ಣ ಅವರ ಮೇಲೆ ಏನು ಮಾಡಿದರು?, ವಿಜಯಪುರದಲ್ಲಿ ಏನ್ ಮಾಡಿದ್ದರು ಎಂಬುದೆಲ್ಲ ನನಗೆ ಗೊತ್ತಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಅವರು ಏನ್ ಮಾಡಿದಾರೆ ? ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭಾ ಚುನಾವಣೆ ಬಳಿಕ ಇತಿಹಾಸ ಹೇಳುವುದಾಗಿ ಅವರು ಬಾಂಬ್ ಸಿಡಿಸಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಹೋಗುತ್ತಿಲ್ಲ
ನಾನು ಯಾವ ಕಾರಣಕ್ಕೆ ಅಂಜಿ ಓಡಿ ಹೋಗಿ ರಾಜೀ ಆಗುವವನಲ್ಲ. ನಾನು ಯಾವ ವಿಜಯೇಂದ್ರಗೂ ಅಂಜಲ್ಲ, ಅವರ ಅಪ್ಪನಿಗೂ ಅಂಜಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ಇಲ್ಲಿ ವಿಜಯೇಂದ್ರ ಪ್ರಶ್ನೆಯೇ ಬರಲ್ಲ. ನಾವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ವಿಜಯೇಂದ್ರ ಬರಲಿ, ಬಿಡಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಅಲ್ಲ ಇದು. ಇದು ಅಯೋಧ್ಯೆ ಶ್ರೀರಾಮನ ಆಶೀರ್ವಾದದ ಮೇಲೆ ನಡೆಯುತ್ತಿರುವ ಚುನಾವಣೆ ಎಂದು ಅವರು ಸ್ಪಷ್ಟಪಡಿಸಿದರು.

ಡಿಕೆಶಿ ಸೆಟ್ಲಮೆಂಟ್ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ
ಕೆ.ಎಸ್.ಈಶ್ವರಪ್ಪ ಅವರಿಗೆ ಸೆಟ್ಲಮೆಂಟ್ ಮಾಡುತ್ತೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಡಿಕೆ ಶಿವಕುಮಾರ್ ಏನು ಎಂದು ಗೊತ್ತಿದೆ. ಅವರು ಯಾರ್ಯಾರ ಜೋಡಿ ಸೆಟ್ಲಮೆಂಟ್ ಮಾಡುತ್ತಾರೆ ಎಂಬುದು ಗೊತ್ತಿದೆ. ಸೆಟ್ಲಮೆಂಟ್ ಮಾಡಿಕೊಂಡೇ ಅವರು ಹೊರಗಿದಾರೆ. ಇನ್ನು ಮುಂದೆ ಅವರು ಈ ರೀತಿ ಹೊರಗಿರಲು ಆಗಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್ ನಡೆಯುವುದಿಲ್ಲ. ಸದ್ಯದಲ್ಲೇ ಡಿಕೆಶಿ ಅವರದ್ದು ಸೆಟ್ಲಮೆಂಟ್ ಆಗಲಿದೆ. ದೇಶ ವಿಭಜನೆ ಕುರಿತು ಮಾತಾಡುವುದು ಅಂದರೇನೆ ದೇಶದ್ರೋಹ ಎಂದ ಅವರು, ಸಂಸದ ಡಿಕೆ ಸುರೇಶ್ ಅವರಿಗೆ ಶೋಕಾಸ್ ನೋಟೀಸ್ ಕೊಟ್ಟಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ನೋಟಿಸ್ ಕೊಟ್ಟಿಲ್ಲ ಎಂದರೆ ಅಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ದೇಶ ವಿಭಜನೆಗೆ ಬೆಂಬಲ ಕೊಡುತ್ತಿದ್ದಾರೆ ಎಂದರ್ಥ. ಮೊದಲು ಅವರ ನಿಲುವೇನೆಂದು ತಿಳಿಸಬೇಕು. ಭಾರತ್ ತೋಡೋ ಮಾಡಲು ಹೋಗಿ ಅವರ ಇಂಡಿಯಾ ಅಲೈಯನ್ಸ್ ಥೋಡೋ ಆಗಿದೆ ಎಂದು ಲೇವಡಿ ಮಾಡಿದರು.
ಅಧಿವೇಶನದಲ್ಲಿ ಬಣ್ಣ ಬಯಲು
ಅದ್ಯಾರೋ ಅಂಜುಮನ್ ಕಮಿಟಿ ಮುಖಂಡನಿಂದ ಕೋರ್ಟ್ ಗೆ ಅರ್ಜಿ ಹಾಕಿಸಿದ್ದು ಕಾಂಗ್ರೆಸ್ ನವರು. ಪಂಚಮಸಾಲಿ ಮೀಸಲಾತಿ ಬಗ್ಗೆ ನಮ್ಮ ಸಮಾಜದ ಕಾಂಗ್ರೆಸ್ ನಾಯಕರು ಮೊದಲು ಬೇರೆ ಮಾತಾಡಿದ್ದರು. ಈಗ ಬೇರೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಧಿವೇಶನದಲ್ಲಿ ಅವರ ಎಲ್ಲಾ ಬಣ್ಣ ತೆಗೆಯುತ್ತೇನೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು..
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications