ಜಬ್ಬಾರ್ ಬಸ್ ಅಪಘಾತ: 5 ಟೆಕ್ಕಿ ಸಾವು, ಪಟ್ಟಿ ಬಿಡುಗಡೆ
ಬೆಂಗಳೂರು, ಅ.30: ಇಂದು ಬೆಳಗಿನ ಜಾವ ಸಂಭವಿಸಿದ ಜಬ್ಬಾರ್ ಟ್ರಾವೆಲ್ಸ್ ವೋಲ್ವೊ ಬಸ್ ಅಪಘಾತ ಪ್ರಕರಣದಲ್ಲಿ ಒಟ್ಟು 44 ಮಂದಿ ಸುಟ್ಟುಕರಕಲಾಗಿದ್ದಾರೆ. ಮೃತಪಟ್ಟವರ ಪೈಕಿ 5 ಮಂದಿ ಸಾಫ್ಟ್ ವೇರ್ ಇಂಜಿನಿಯರ್ ಗಳು ಸಹ ಇದ್ದರು ಎಂದು ತಿಳಿದುಬಂದಿದೆ. 110 ಕಿಮೀ ವೇಗದಲ್ಲಿ ಓಡುತ್ತಿದ್ದ ಬಸ್ ನಿಯಂತ್ರಣಕ್ಕೆ ಬಾರದೆ, ಹೈದರಾಬಾದಿನಿಂದ 110 ಕಿಮೀ ದೂರದಲ್ಲಿರುವಾಗ ಅಪಘಾತ ಸಂಭವಿಸಿದೆ.
ಈ ಮಧ್ಯೆ, ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಯ ಮುಖ್ಯಸ್ಥ ನಯೀಮ್ ನನ್ನು ಹೈದರಾಬಾದ್ ಪೊಲೀಸರು ಇದೀಗ ತಾನೆ ಬಂಧಿಸಿದ್ದಾರೆ. ಮೃತ ಟೆಕ್ಕಿಗಳು IBM ಸೇರಿದಂತೆ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಿಗೆ ಸೇರಿದವರೆನ್ನಲಾಗಿದೆ. ಇವರೆಲ್ಲಾ ದೀಪಾವಳಿ ತಜೆ ನಿಮಿತ್ತ ಹೈದರಾಬಾದಿಗೆ ಮರಳುತ್ತಿದ್ದರು.
ಒಡಿಶಾದ ಕಟಕ್‌ನ ಜ್ಯೋತಿ ಮಹಾಪಾತ್ರಾ (33), ಭುವನೇಶ್ವರದ ಶಕ್ತಿ ಕಾಂತ್ (33) ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ವಿಟ್ಟು ಅಮರೀಂದರ್ (29), ಹೈದರಾಬಾದಿನ ಜವಾಹರ್ ನಗರ್ ಪ್ರದೇಶದ ನಿವಾಸಿಯಾಗಿರುವ ಬಿ. ಅಕ್ಷಯ್ ಸಿಂಗ್ (22) ಮತ್ತು ಮೆಹದಿಪಟ್ಟಣಂನ ರೂಹಿಯಾ ಅಸುನೀಗಿದವರು.

ಸರಕಾರಿ ಬಸ್ಸು ಆಗಿದ್ದರೆ ಅವುಗಳಿಗೆ ಸ್ಪೀಡ್ ಗವರ್ನರ್ ಗಳನ್ನು ಅಳವಡಿಸಲಾಗಿರುತ್ತದೆ. ಹಾಗಾಗಿ ಖಾಸಗಿ ಬಸ್ಸುಗಳಷ್ಟು ವೇಗವಾಗಿ ಸಂಚರಿಸುವುದಿಲ್ಲ. ಇನ್ನು ಅಪಘಾತಕ್ಕೀಡಾದ ಬಸ್ ಹವಾನಿಯಂತ್ರಿತವಾಗಿದ್ದು, ಸೆಂಟ್ರಲ್ ಲಾಕಿಂಗ್ ಸಿಸ್ಟಂ ಹೊಂದಿರುತ್ತದೆ. ಹಾಗಾಗಿ ಪ್ರಯಾಣಿಕರು ಅಗ್ನಿ ಜ್ವಾಲೆಗಳಿಂದ ಪಾರಾಗಲು ಸಾಧ್ಯವಾಗಿಲ್ಲ.
ಅಪಘಾತ ಹೇಗಾಯಿತು?: ಬೆಳಗಿನ ಜಾವ ಡ್ರೈವರುಗಳು ಎಷ್ಟೇ ಎಚ್ಚರಿಕೆಯಿಂದ ಇದ್ದರೂ 4 ರಿಂದ 6 ಗಂಟೆವರೆಗೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಅದರಲ್ಲೂ ಬಸ್ಸು ಶರವೇಗದಲ್ಲಿದ್ದರೆ ಇಂತಹ ದುರ್ಘಟನೆಗಳಿಗೆ ತುತ್ತಾಗುವುದು ಅನೇಕ ಬಾರಿ ಕಂಡು ಬಂದಿದೆ.
ಈ ಪ್ರಕರಣದಲ್ಲೂ ಅದೇ ಆಗಿದೆ. ಭಾರಿ ವೇಗದಲ್ಲಿದ್ದ ಬಸ್ಸು ನಿಯಂತ್ರಣ ತಪ್ಪಿದೆ. ರಸ್ತೆ ಬದಿಯಿದ್ದ ಚಿಕ್ಕ ಸೇತುವೆಯ ತಡೆಗೋಡೆಗೆ ಬಸ್ ಮುಂಭಾಗ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ಡೀಸೆಲ್ ಟ್ಯಾಂಕ್ ತಡೆಗೋಡೆಗೆ ಉಜ್ಜಿಕೊಂಡು ಹೋದಾಗ ಕಿಡಿಹೊತ್ತಿದೆ.
ಘಟನೆಯಲ್ಲಿ ಒಟ್ಟು 44 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಕರ್ನಾಟಕವರು 28 ಮಂದಿ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಆಂಧ್ರ ಪ್ರದೇಶದ 8, ರಾಜಸ್ಥಾನದ ಒಬ್ಬರು ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಒಟ್ಟು 15 ದೇಹಗಳ ಗುರುತು ಪತ್ತೆಯಾಗಿದ್ದು, 29 ದೇಹಗಳ ಗುರುತು ಪತ್ತೆಯಾಗಿಲ್ಲ.
ಮೃತರ ಹೆಸರುಗಳು ಹೀಗಿವೆ:
ಗಾಲಿ ಬಾಲ ಸುಂದರರಾಜು (54), ಗಾಲಿ ಮಾನು ವಿಜಯಕುಮಾರಿ (50), ಗೌರವ್ ವಿಕ್ರಾಂತ್ ರಾಯ್ (30), ಕಿರಣ್ (30), ಶೋಯಬ್ (40), ಅಜರ್ (41), ಕೃಷ್ಣ (36), ಅಡಾರಿ (27), ಜ್ಯೋತಿ (33), ಪ್ರಕಾಶ್ ಗುಪ್ತ (23), ಮೊಹಿದೀನ್ (21), ವೆಂಕಟೇಶ್ (45), ವೆಂಕಟೇಶ್ (50), ಚಂದ್ರಶೇಖರ್ (41), ಹಫೀಜ್ (45), ಅಮರ್ (31), ಪೂಟಿಯಾ (28), ರಾಮ್ ರಾಜು (30) ವೇದವತಿ (27), ಅಕ್ಷಯ್ ಸಿಂಗ್ (28), ರಾಜೇಶ್ (28), ಶಕ್ತಿಕಾಂತ್ (28), ಮಣಿಕುಮಾರ್ (28), ರಘುವೀರ್ (35), ಸುರೇಶ್ ಬಾಬು (35), ಮಹ್ಮದ್ ಸರ್ದಾರ್ (35), ಎಂಡಿ ಆಸಿಫ್ (35), ರಾಮರಾಜು (30), ದಿನೇಶ್ (30), ರೇಣುಕಾ (28), ರವಿ (27), ನಾಗಪ್ಪ (21), ಮೋಸಿನ್ (21), ಅಸ್ಮತ್ ವುಲ್ಲಾ.
Mahabubnagar district police have opened a helpline to provide information. Following are the helpline numbers: 9494600100, 08542-245927, 245930, 245932.












Click it and Unblock the Notifications