ಹಿರಿಯ ಸಾಹಿತಿ ಅನಂತಮೂರ್ತಿಗೆ ಬಸವ ಪುರಸ್ಕಾರ

ಬಸವ ಪುರಸ್ಕಾರ 10 ಲಕ್ಷ ರೂ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ರಾಜ್ಯ ಸರಕಾರವು 2001ರಲ್ಲಿ ಬಸವ ಪ್ರಶಸ್ತಿಯನ್ನು ಆರಂಭಿಸಿತು . ಉಳಿದಂತೆ, ಬಳ್ಳಾರಿಯ ಜಿಬಿ ಹಂಸಾನಂದಾಚಾರ್ಯ ಅವರನ್ನು ಜಕಣಾಚಾರಿ ಪ್ರಶಸ್ತಿಗೂ ಧಾರವಾಡದ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರನ್ನು ಗುಬ್ಬಿ ವೀರಣ್ಣ ಪ್ರಶಸ್ತಿಗೂ ಆಯ್ಕೆ ಮಾಡಲಾಗಿದೆ.
2012ನೇ ಸಾಲಿನ ಈ ಬಸವ ಪುರಸ್ಕಾರ ಪ್ರಶಸ್ತಿ ಆಯ್ಕೆಗಾಗಿ ಪತ್ರಕರ್ತ ರಂಜಾನ್ ದರ್ಗಾ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. 2012ನೇ ಸಾಲಿನ ಜಕಣಾಚಾರಿ ಪ್ರಶಸ್ತಿಗೆ ಶಿಲ್ಪ, ಕಾಷ್ಠ ಹಾಗೂ ಲೋಹ ಶಿಲ್ಪಗಳಲ್ಲಿ ಪರಿಣತಿ ಹೊಂದಿರುವ ಬಳ್ಳಾರಿಯ ಜಿಬಿ ಹಂಸಾನಂದಚಾರ್ಯ ಅವರನ್ನು ಕನಕಮೂರ್ತಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು 3 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಧಾರವಾಡದ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರನ್ನು 2012ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಎಲ್ ಬಿ ಕೆ ಅಲ್ದಾಳ್ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದೆ. ಈ ಪ್ರಶಸ್ತಿ 3 ಲಕ್ಷ ರೂ. ನಗದು, ಸ್ಮರಣಿಕೆ ಒಳಗೊಂಡಿದೆ. ಈ ಮೂರು ಪ್ರಶಸ್ತಿಗಳ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದೂ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.












Click it and Unblock the Notifications