Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದ ಓರ್ವ ಆರೋಪಿಗೆ ಜಾಮೀನು ಮಂಜೂರು

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದರು. ಇದೀಗ ಈ ಗ್ಯಾಂಗ್‌ನ ಪೈಕಿ ಓರ್ವ ಆರೋಪಿ ಕೇಶವಮೂರ್ತಿ ಎಂಬಾತನಿಗೆ ಮಾತ್ರ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ಈತನಿಗೆ ಜಾಮೀನು ಮಂಜುರಾಗಲು ಕಾರಣ ಏನೆಂದು ಇಲ್ಲಿ ತಿಳಿಯಿರಿ.

ಇನ್ನು 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂದು ಪ್ರಕರಣದ ಎ2 ಆರೋಪಿ ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಲಾಗಿದೆ. ಹಾಗೆಯೇ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಲಾಗಿದೆ. ಎಸ್‌ಪಿಪಿ ಪ್ರಸನ್ನ ಕುಮಾರ್‌ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆ ವಿಚಾರಣೆಯನ್ನು ಕೋರ್ಟ್‌ ಮುಂದೂಡಿಕೆ ಮಾಡಿದೆ.

Actor Darshan Thoogudeepa Bail granted to Renukaswamy murder case s A16 accused

ರೇಣುಕಾಸ್ವಾಮಿ ಶವ ವಿಲೇವಾರಿಯಲ್ಲಿ ಭಾಗಿಯಾಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಆದರೆ ಕೊಲೆ ಪ್ರಕರಣದಲ್ಲಿ ಇವರ ಪಾತ್ರ ಏನು ಇಲ್ಲ ಎಂದು ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡನೆ ಮಾಡಿದ್ದಾರೆ. ವಾದ-ವಿವಾದವನ್ನು ಆಲಿಸಿದ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈತ ಈ ಪ್ರಕರಣದಲ್ಲಿ 16ನೇ ಆರೋಪಿಯಾಗಿದ್ದ.

ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್, ಎ3 ಆರೋಪಿ ಪವನ್, ಎ4 ಆರೋಪಿ ರಾಘವೇಂದ್ರ, ಎ5 ಆರೋಪಿ ನಂದೀಶ್, ಎ6 ಆರೋಪಿ ಜಗದೀಶ್, ಎ7 ಆರೋಪಿ ಅನುಕುಮಾರ್, ಎ8 ಆರೋಪಿ ರವಿ ಶಂಕರ್, ಎ9 ಆರೋಪಿ ಧನರಾಜ್, ಎ10 ವಿನಯ್, ಎ11 ನಾಗರಾಜ್, 12 ಆರೋಪಿ ಲಕ್ಷ್ಮಣ್, ಎ13 ಆರೋಪಿ ದೀಪಕ್, ಎ14 ಪ್ರದೂಶ್, ಎ15 ಆರೋಪಿ ಕಾರ್ತಿಕ್, ಎ17 ಆರೋಪಿ ನಿಖಿಲ್ ಆಗಿದ್ದು, ಇದೀಗ ಹೈಕೋರ್ಟ್‌ನಲ್ಲಿ ಎ16 ಆರೋಪಿಯಾಗಿದ್ದ ಕೇಶವಮೂರ್ತಿಗೆ ಜಾಮೀನು ಮಂಜೂರಾಗಿದೆ.

ಐಟಿ ಅಟ್ಯಾಕ್‌: ನಟ ದರ್ಶನ್ ಮನೆ ಮೇಲೆ ಐಟಿ ದಾಳಿ ಮಾಡಲು ಅನುಮತಿ ಕೇಳಿ ನ್ಯಾಯಾಲಯಕ್ಕೆ ಅಧಿಕಾರಿಗಳು ಮನವಿ ಸಲ್ಲಿಕೆ ಮಾಡಿದ್ದರು. ಇದೀಗ 24ನೇ ಎಸಿಎಂಎಂ ಕೋರ್ಟ್​ ಅನುಮತಿ ನೀಡಿದೆ.

ಬಳಿಕ ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ಗೆ ನೋಟಿಸ್ ಜಾರಿ‌ ಮಾಡಲಾಗಿದೆ. ಇಂದು (ಸೆಪ್ಟೆಂಬರ್‌ 23) ಮಧ್ಯಾಹ್ನ 2.45ಕ್ಕೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಅಧಿಕಾರಿಗಳು ಭೇಟಿ ಮಾಡಿ ನೋಟಿಸ್​ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಶವ ಸಾಗಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಇಡೀ ಕೃತ್ಯದ ಹಲವು ಹಂತಗಳಲ್ಲಿ ಹಣ ಹರಿದಾಡಿದೆ ಎಂಬುದು ತನಿಖೆ ವೇಳೆ ತಿಳಿದುಬಂತು.

ಇನ್ನು ಕೃತ್ಯಕ್ಕೆ ಬಳಸಿದ್ದ ಹಣದ ಮೂಲದ ಬಗ್ಗೆ ಬಳ್ಳಾರಿ ಜೈಲಿನಲ್ಲಿ ನಟನ ಹೇಳಿಕೆಯನ್ನು ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶದ ಮೇಲೆ ದಾಳಿ‌ ಮಾಡಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇನ್ನು ಬಳ್ಳಾರಿ ಜೈಲಿನಲ್ಲಿ ಈ ಬಗ್ಗೆ ನಾಳೆ ವಿಚಾರಣೆ ಮಾಡುವ ಸಾಧ್ಯತೆಯಿದೆ ಎನ್ನುವ ಮಾಹಿತಿ ತಿಳಿದುಬಂದಿದೆಎ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+