ಭಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ, ಪ್ರಮುಖ ಆರೋಪಿ ಬಂಧನ

Posted By: Gururaj
Subscribe to Oneindia Kannada

ವಿಜಯಪುರ, ಅ.17 : ಭೀಮಾ ತೀರದ ಹಂತಕ ಭಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭೀಮಾ ತೀರದ ಬಾಗಪ್ಪ ಹರಿಜನ ಹತ್ಯೆ ಯತ್ನ, 6 ಮಂದಿ ಬಂಧನ

ಬಂಧತಿ ಆರೋಪಿಯನ್ನು ಪಿರೇಶ್ ಹಡಪದ್ ಎಂದು ಗುರುತಿಸಲಾಗಿದೆ. ಇಂಡಿಯ ಡಾಬಾವೊಂದರಲ್ಲಿ ಅಡಗಿದ್ದ ಪಿರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪಿರೇಶ್ ಸಿಎಆರ್‌ಪಿಎಫ್‌ ಯೋಧನಾಗಿದ್ದು, ಸೇವೆಯಲ್ಲಿರುವಾಗಲೇ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.

Bagappa Harijan murder attempt case : Main accused arrested

ಆಗಸ್ಟ್ 8ರಂದು ಭಾಗಪ್ಪ ಹರಿಜನ್ ಮೇಲೆ ವಿಜಯಪುರ ನ್ಯಾಯಾಲಯದ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿತ್ತು. ಗುಂಡೇಟಿನಿಂದ ಗಾಯಗೊಂಡಿದ್ದ ಭಾಗಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾಗಪ್ಪ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮು ಯಲ್ಲಪ್ಪ ಹರಿಜನ, ರಮೇಶ ಹಡಪದ, ಲಕ್ಷಣ ದೊಡ್ಡಮನಿ, ಮಹಮದ್ ಸಾಬ್ ಕಾಂಬಳೆ ಸೇರಿದಂತೆ ಆರು ಆರೋಪಿಗಳನ್ನು ವಿಜಯಪುರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದರು.

ಭೀಮಾ ತೀರದಲ್ಲಿ ಮತ್ತೆ ನೆತ್ತರು; ಚಂದಪ್ಪ ಹರಿಜನನ ಬಂಟ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ

2014ರಲ್ಲಿ ನಡೆದಿದ್ದ ಬಸವರಾಜ ಹರಿಜನ್ ಕೊಲೆ ಪ್ರಕರಣದ ವಿಚಾರಣೆಗೆ ಭಾಗಪ್ಪ ಹರಿಜನ್ ವಿಜಯಪುರ ಕೋರ್ಟ್‌ಗೆ ಆಗಮಿಸುತ್ತಿದ್ದರು ಆ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijayapura district Indi police arrested main accused in Bagappa Harijan murder attempt case. Bagappa Harijan was shot at and injured on the district court premises in Vijayapura on August 8, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ