Muda: ಸಿದ್ದರಾಮಯ್ಯಗೆ ‘ಲಜ್ಜೆಗೆಟ್ಟಂತೆ ನಡೆದುಕೊಳ್ಳುತ್ತಿರುವ ನಡೆ’ ಎಂದಿದ್ದು ಯಾರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಗುಡುಗಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ಸಿಲುಕಿಸಿದೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಬಿ.ವೈ ವಿಜಯೇಂದ್ರ ಅವರು ಸರಣಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನೈತಿಕತೆಯನ್ನು ಗಾಳಿಗೆ ತೂರಿ ಭಂಡತನದ ಬಂಡೆಯಾಗಿರುವ ಸಿದ್ದರಾಮಯ್ಯಾ ಅವರೇ. ದೂರು ನೀಡಲಾಯಿತು, ರಾಜ್ಯಪಾಲರು ಅನುಮತಿಯನ್ನೂ ಕೊಟ್ಟಾಗಿದೆ. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿದ್ದಕ್ಕೆ ಹೈಕೋರ್ಟ್ ತೀರ್ಪು ನೀಡಿ ನೀವು ತನಿಖೆ ಎದುರಿಸುವುದಕ್ಕೆ ಆಧಾರಗಳಿವೆ ಎಂದು ಹೇಳಿದೆ. ಜನಪ್ರತಿನಿಧಿಗಳ ನ್ಯಾಯಾಲಯ ನೀವು ಆರೋಪಿ ಎಂದು ಪರಿಗಣಿಸಿ ಕ್ರಿಮಿನಲ್ ಅಪರಾಧಗಳ ಎಫ್‌ಐಆರ್ ದಾಖಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸನೆಯೂ ನೀಡಿದೆ. ಅಲ್ಲದೇ ಲೋಕಾಯುಕ್ತ A1 ಆರೋಪಿ ಎಂದು FIR ಸಹ ದಾಖಲಿಸಿದೆ. ಆದರೆ, ನೀವು ಲಜ್ಜೆಗೆಟ್ಟಂತೆ ನಡೆದುಕೊಳ್ಳುತ್ತಿರುವ ನಡೆ ಪ್ರದರ್ಶಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ.

ಅಲ್ಲದೇ ಕಳಂಕ ಹೊತ್ತ ನೀವು ಇನ್ನೂ ಎಲ್ಲಿಯ ವರೆಗೆ ಮುಖ್ಯಮಂತ್ರಿ ಸ್ಥಾನದ ಗೌರವ ಹಾಗೂ ಘನತೆಗೆ ಮಸಿಬಳಿದು ಮುಂದುವರಿಯವ ಉದ್ದೇಶ ಇದೆ ಎನ್ನುವುದನ್ನು ಕರ್ನಾಟಕದ ಜನರಿಗ ತಿಳಿಸಿ ಎಂದು ವ್ಯಂಗ್ಯವಾಡಿದ್ದಾರೆ. ನಿಮ್ಮ ವಿರುದ್ಧ ಕಾನೂನು ಕುಣಿಕೆ ಬಿಗಿಯುತ್ತಿದೆ. ಭ್ರಷ್ಟ ಹಗರಣಗಳ ಕುರಿತು ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪು, ಆದೇಶಗಳನ್ನು ಪ್ರಕಟಿಸುತ್ತಿದೆ. ಆದರೆ, ನೀವು ಹಾಗೂ ನಿಮ್ಮ ಕಾಂಗ್ರೆಸ್ ಲಜ್ಜೆಗೆಟ್ಟಂತೆ ನಡೆದುಕೊಳ್ಳುತ್ತಿರುವ ನಡೆಯನ್ನು ನೋಡಿದರೆ, ನಮ್ಮ ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ತೀಕ್ಷ್ಣವಾಗಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯಿಂದಲೂ ಟ್ವೀಟ್ ಮಾಡಿ ಟೀಕೆ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮಾಡಿದೆ. ಟ್ವೀಟ್‌ವೊಂದರಲ್ಲಿ ಶಾಸ್ತ್ರ ಹೇಳಿ ಬದನೆಕಾಯಿ ತಿನ್ನುವ ಭ್ರಷ್ಟ ಸಿದ್ದರಾಮಯ್ಯ ಅವರೇ ಈ ಪ್ರಶ್ನೆಗಳಿಗೆ ಉತ್ತರಿಸುವ ಧಮ್ ಇದೆಯಾ ಎಂದು ಕೆಲವು ಪ್ರಶ್ನೆಗಳನ್ನು ಕೇಳಿದೆ.

ಸಿದ್ದರಾಮಯ್ಯ ಅವರ ಮುಂದೆ ಬಿಜೆಪಿ ಐದು ಪ್ರಶ್ನೆಗಳನ್ನು ಇಟ್ಟಿದೆ. ನಿಮ್ಮಲ್ಲಿ ಒಂದು ಕಪ್ಪುಚುಕ್ಕಿಯೂ ಇಲ್ಲ ಎನ್ನುವುದಾದರೆ, ಸಿಬಿಐಗೆ ಅಂಕುಶ ಹಾಕುವ ಅಡ್ಡದಾರಿಯನ್ನು ಹುಡುಕಿದ್ಯಾಕೆ ಎಂದು ಪ್ರಶ್ನೆ ಮಾಡಿದೆ. ರಾಜ್ಯ ಸರ್ಕಾರವು ಪೂರ್ವಾನುಮತಿ ಪಡೆಯದೆ ಸಿಬಿಐ ರಾಜ್ಯವನ್ನು ಪ್ರವೇಶಿಸಬಾರದು (ಯಾವುದೇ ತನಿಖೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರದೆ ಮಾಡಬಾರದು) ಎಂದು ಹೇಳಿದೆ. ಇದನ್ನು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ. ಅಲ್ಲದೇ ನಿಮ್ಮದೇನೂ ತಪ್ಪಿಲ್ಲ ಎನ್ನುವುದೇ ಆದರೆ, ಸಿಬಿಐ ತನಿಖೆಗೆ ಹೆದರುತ್ತಿರುವುದು ಏಕೆ ಎಂದು ಪ್ರಶ್ನಿಸಿದೆ.
ಶಾಸ್ತ್ರ ಹೇಳಿ ಬದನೆಕಾಯಿ ತಿನ್ನುವ ಭ್ರಷ್ಟ @siddaramaiah ನವರೇ ಈ ಪ್ರಶ್ನೆಗಳಿಗೆ ಉತ್ತರಿಸುವ ಧಮ್ ಇದೆಯಾ?
— BJP Karnataka (@BJP4Karnataka) September 27, 2024
➡️ ನಿಮ್ಮಲ್ಲಿ ಒಂದು ಕಪ್ಪುಚುಕ್ಕಿಯೂ ಇಲ್ಲದಿದ್ರೆ ಸಿಬಿಐಗೆ ಅಂಕುಶ ಹಾಕುವ ಅಡ್ಡದಾರಿ ಹುಡುಕಿದ್ಯಾಕೆ?
➡️ ತಮ್ಮದೇನೂ ತಪ್ಪಿಲ್ಲದಿದ್ದರೆ ಸಿಬಿಐ ತನಿಖೆಗೆ ಹೆದರುತ್ತಿರುವುದು ಏಕೆ?
➡️ ಅಂದು ಅಧಿವೇಶನದಲ್ಲಿ ಚರ್ಚಿಸದೆ ಪಲಾಯನ… pic.twitter.com/WHwpaqK9x1
ನೀವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡದೆ ಪಲಾಯನ ಮಾಡಿದಿರಿ, ಇಂದು ತನಿಖೆ ಎದುರಿಸದೆ ಓಡುತ್ತಿರುವುದು ಯಾವ ಕಾರಣಕ್ಕಾಗಿ ತಿಳಿಸಿ. ಭ್ರಷ್ಟಾಚಾರ ಸಾಬೀತಾದರೂ ನಾನವನಲ್ಲ, ನಾನವನಲ್ಲವೆಂದು ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿದ್ದೀರಿ. (ಮೆರೆಯುತ್ತಿರುವುದ್ಯಾಕೆ) ನೀವು ನೈತಿಕತೆಯನ್ನು ಮರೆತು ಫೆವಿಕಾಲ್ ಹಾಕಿಕೊಂಡು ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಏಕೆ ಎಂದು ಕೇಳಿದೆ. ಅಲ್ಲದೇ ಭ್ರಷ್ಟರಾಮಯ್ಯನವರೇ, ಕನ್ನಡಿಗರು ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದಾರೆ ಎಂದೂ ಬಿಜೆಪಿ ಹೇಳಿದೆ.












Click it and Unblock the Notifications