ಎನ್.ಆರ್. ಸಂತೋಷ್ ಕುರಿತು ಸಚಿವ ಶ್ರೀರಾಮುಲು ಮಹತ್ವದ ಹೇಳಿಕೆ!
ಬೆಂಗಳೂರು, ನ. 28: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಹತ್ವದ ಹೇಳಿಕೆ ನೀಡಿದ್ದಾರೆ. ಸಂತೋಷ್ ಅವರ ನಿರ್ಧಾರದ ಬಗ್ಗೆ ಮಾತನಾಡಿರುವ ಅವರು, ರಾಜಕಾರಣದಲ್ಲಿ ಏರುಪೇರು ಆಗ್ತಾ ಇರುತ್ತವೆ, ಯಾವತ್ತೂ ಯಾವುದೂ ಶಾಶ್ವತ ಅಲ್ಲ ಎಂದಿದ್ದಾರೆ.
ಎನ್.ಆರ್. ಸಂತೋಷ್ ಯುವ ನಾಯಕ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಂಡು, ಜೀವಕ್ಕೆ ಅಪಾಯ ಆದರೆ ಅವರ ಕುಟುಂಬ ನೋವು ಪಡಬೇಕಾಗುತ್ತದೆ. ಈಗ ಬೇಗ ಸಂತೋಷ್ ಗುಣಮುಖರಾಗಬೇಕು ಎಂದು ಸಚಿವ ಶ್ರೀರಾಮುಲು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಏನೂ ಆಗಿದೆ ಎಂಬುದನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಸಂತೋಷ್ ಈ ರೀತಿ ಮಾಡಿಕೊಂಡಿದ್ದು, ಯಾರಿಗೂ ಕೂಡಾ ಸರಿಯಲ್ಲ. ರಾಜಕೀಯ ನಿರ್ಧಾರಗಳೇನಾದರೂ ಹೆಚ್ಚು ಕಡಿಮೆ ಆಗಿದ್ದರೂ ಕೂಡಾ ಆ ಬಗ್ಗೆ ನಾನು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ. ಹಾಗಂತ ಯಾವುದೇ ಒತ್ತಡಗಳು ಸಂತೋಷ್ ಅವರ ಮೇಲೆ ಇಲ್ಲ. ಮಾಧ್ಯಮಗಳಲ್ಲಿ ನೋಡಿ ನಾನು ಫೋನ್ ಮಾಡಿದ್ದೆ, ಅವರು ಸಿಕ್ಕಿಲ್ಲ. ಈ ರೀತಿಯ ನಿರ್ಧಾರಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು ಎಂದು ಶ್ರೀರಾಮುಲು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.